ಕಾಬೂಲ್(ಅಫ್ಘಾನಿಸ್ತಾನ) :ತಾಲಿಬಾನ್ ಭಯೋತ್ಪಾದಕರು ಇಂದು ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಅನ್ನು ಪ್ರವೇಶಿಸಿದರು. ಹಿರಿಯ ಆಂತರಿಕ ಸಚಿವಾಲಯದ ಅಧಿಕಾರಿಯೊಬ್ಬರು ತಾಲಿಬಾನ್ ಬಂಡುಕೋರರು "ಎಲ್ಲಾ ಕಡೆಯಿಂದ" ರಾಜಧಾನಿಗೆ ಬರುತ್ತಿದ್ದಾರೆ ಎಂದು ಹೇಳಿದ್ದಾರೆ.
ತಾಲಿಬಾನ್ ವಕ್ತಾರ ಜಬಿವುಲ್ಲಾ ಮುಜಾಹಿದ್ ಹೇಳಿಕೆಯಲ್ಲಿ ಕಾಬೂಲ್ ನ ಶಾಂತಿಯುತ ಶರಣಾಗತಿಗಾಗಿ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಶಾಂತಿಯುತ ಅಧಿಕಾರದ ವರ್ಗಾವಣೆ :"ಸರ್ಕಾರ ಶಾಂತಿಯುತ ಅಧಿಕಾರದ ವರ್ಗಾವಣೆಯನ್ನು ಒಪ್ಪಿಕೊಳ್ಳುವವರೆಗೂ ತಾಲಿಬಾನ್ ಹೋರಾಟಗಾರರು ಕಾಬೂಲ್‌ನ ಎಲ್ಲಾ ಪ್ರವೇಶದ್ವಾರಗಳಲ್ಲಿ ಸಿದ್ಧರಾಗಿರುತ್ತಾರೆ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಅಫ್ಘಾನ್ ಸರ್ಕಾರದ ರಕ್ಷಣಾ ಕುಸಿತವು ರಾಜತಾಂತ್ರಿಕರನ್ನು ದಿಗ್ಭ್ರಮೆಗೊಳಿಸಿದೆ.
ಇದನ್ನೂ ಓದಿ:ಕಾಬೂಲ್‌ನಲ್ಲಿರುವ ರಷ್ಯಾ ರಾಯಭಾರ ಕಚೇರಿಯ ಸುರಕ್ಷತೆಯ ಭರವಸೆ ನೀಡಿದ ತಾಲಿಬಾನ್
ಅಧ್ಯಕ್ಷ ಅಶ್ರಫ್ ಘನಿ ಅವರಿಂದ ಪರಿಸ್ಥಿತಿಯ ಬಗ್ಗೆ ಯಾವುದೇ ತಕ್ಷಣದ ಮಾಹಿತಿ ಇಲ್ಲ. ಅವರು ಶನಿವಾರ ಸ್ಥಳೀಯ ನಾಯಕರು ಮತ್ತು ಅಂತಾರಾಷ್ಟ್ರೀಯ ಪಾಲುದಾರರೊಂದಿಗೆ ತುರ್ತು ಸಮಾಲೋಚನೆಯಲ್ಲಿದ್ದಾರೆ ಎಂದು ಹೇಳಿದ್ದರು. ಘನಿ ಅಧಿಕಾರದಿಂದ ಕೆಳಗಿಳಿಯಲಿದ್ದಾರೆ ಮತ್ತು ತಾಲಿಬಾನ್ ಕಮಾಂಡರ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ವರದಿಗಳು ಹೇಳಿವೆ.
ಅಫ್ಘಾನ್ ಅಧ್ಯಕ್ಷೀಯ ಕಚೇರಿಯ ಖಾತೆಯಿಂದ ಒಂದು ಟ್ವೀಟ್ ಮಾಡಲಾಗಿದ್ದು, ಕಾಬೂಲ್ ಸುತ್ತಮುತ್ತಲಿನ ಹಲವಾರು ಕಡೆಗಳಲ್ಲಿ ಗುಂಡಿನ ಸದ್ದು ಕೇಳಿ ಬಂದಿದೆ. ಆದರೆ, ಭದ್ರತಾ ಪಡೆಗಳು ಅಂತಾರಾಷ್ಟ್ರೀಯ ಪಾಲುದಾರರೊಂದಿಗೆ ಸಮನ್ವಯದಿಂದ ನಗರದ ಮೇಲೆ ನಿಯಂತ್ರಣ ಹೊಂದಲಾಗಿದೆ ಎಂದು ಹೇಳಿದೆ.