ಲಾಹೋರ್:ಪ್ರೇಮ ವಿವಾಹ ಮಾಡಿಕೊಂಡು ಸುಖವಾಗಿ ಸಂಸಾರ ನಡೆಸುತ್ತಿದ್ದ ಆ ಜೋಡಿ ಉದ್ಯೋಗದ ಸಂಬಂಧ ಕಿತ್ತಾಡಿಕೊಂಡಿದ್ದಾರೆ. ಬಳಿಕ ಪತ್ನಿಯ ತಲೆಗೆ ಗುಂಡಿಟ್ಟು ಹೊಡೆದು ಕೊಲೆ ಮಾಡಿದ್ದಾನೆ ಪತಿ. ಈ ಘಟನೆ ಲಾಹೋರ್ನಲ್ಲಿ ನಡೆದಿದೆ.
ಉರ್ಜೂ ಇಕ್ಬಾಲ್ ಉರ್ದು ದಿನಪತ್ರಿಕೆಯಲ್ಲಿ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದರು. ಏಳು ತಿಂಗಳ ಹಿಂದೆ ಮತ್ತೊಂದು ಪತ್ರಿಕೆಯ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದ ದಿಲಾವರ್ ಅಲೀ ಜೊತೆ ಪ್ರೇಮ ವಿವಾಹವಾಗಿದ್ದಾರೆ. ಮದುವೆಯಾಗಿ ಸುಖವಾಗಿ ಜೀವನ ನಡೆಸುತ್ತಿದ್ದರು. ಬಳಿಕ ಅಲೀ ತನ್ನ ಹೆಂಡ್ತಿಗೆ ಉದ್ಯೋಗ ಬಿಡುವಂತೆ ಹೇಳಿದ್ದು, ಗಂಡ ಮಾತಿಗೆ ಉರ್ಜೂ ನಿರಾಕರಿಸಿದ್ದಾರೆ.