ಸಿಯೋಲ್ (ದಕ್ಷಿಣ ಕೊರಿಯಾ):ಖಾಲಿಯಿದ್ದ ಪ್ರೇಕ್ಷಕರ ಗ್ಯಾಲರಿಯಲ್ಲಿ ಸೆಕ್ಸ್ ಡಾಲ್ಗಳನ್ನು ತುಂಬಿದ್ದ ಸಿಯೋಲ್ ಫುಟ್ಬಾಲ್ ಕ್ಲಬ್ಗೆ ಕೆಲೀಗ್ ಮಂಡಳಿಯು 10 ಲಕ್ಷ ಡಾಲರ್ ದಂಡ ವಿಧಿಸಲಾಗಿದೆ. ಸಿಯೋಲ್ ಫುಟ್ಬಾಲ್ ಕ್ಲಬ್ ನ ಈ ನಡೆ ಮೂಲಕ ಮಹಿಳೆಯರು ಹಾಗೂ ಅಪಾರ ಕುಟುಂಬಗಳಿಗೆ ಅಪಮಾನವಾಗಿದೆ ಎಂದು ಆರೋಪಿಸಲಾಗಿದೆ.
ಕೊರೊನಾ ಲಾಕ್ಡೌನ್ ನಂತರ ಜನರು ಈಗ ಸಾಮಾನ್ಯ ಸ್ಥಿತಿಗೆ ಮರಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಸೋಂಕಿನ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಿಕೊಂಡು ಒಳಾಂಗಣ ಫುಟ್ಬಾಲ್ ಪಂದ್ಯಗಳನ್ನು ಆಯೋಜನೆ ಮಾಡಲಾಗುತ್ತಿದೆ.