ಕರ್ನಾಟಕ

karnataka

ETV Bharat / international

ಪಾಕ್ ಮಾಜಿ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಸಾವಿನ ವರದಿ 'ಆಧಾರರಹಿತ': ಸಲಹೆಗಾರನ ಸ್ಪಷ್ಟನೆ - death of asif ali zardari

ಮಾಜಿ ಅಧ್ಯಕ್ಷರ ಅನಾರೋಗ್ಯದ ಕುರಿತು ಸಾಮಾಜಿಕ ಜಾಲತಾಣದಲ್ಲಿ ವದಂತಿಗಳು ಹಬ್ಬುತ್ತಿವೆ. ಆಸೀಫ್​ ಅವರ ಸ್ಥಿತಿ ಗಂಭೀರವಾಗಿದೆ ಎಂಬ ಫಾರ್ವರ್ಡ್ ಸಂದೇಶಗಳು' ಹರಿದಾಡುತ್ತಿವೆ ಆದರೆ ಇವೆಲ್ಲ ಸುಳ್ಳು ಎಂದು ಅವರ ಸಲಹೆಗಾರ ಸ್ಪಷ್ಟಪಡಿಸಿದ್ದಾರೆ.

Farooq terms reports of Asif Ali Zardari's death as 'baseless'
ಪಾಕ್ ಮಾಜಿ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ

By

Published : May 15, 2020, 5:59 PM IST

ಕರಾಚಿ:ಪಾಕಿಸ್ತಾನದ ಮಾಜಿ ಅಧ್ಯಕ್ಷ ಮತ್ತು ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಸಹ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರು ನಿಧನರಾಗಿದ್ದಾರೆ ಎಂಬ ವರದಿಯನ್ನು ನಿರಾಕರಿಸಿರುವ ಅವರ ಸಲಹೆಗಾರ (ವಕೀಲ) ಫಾರೂಕ್ ಹೆಚ್ ನಾಯಕ್, ಅದೊಂದು 'ಆಧಾರರಹಿತ' ವರದಿ ಎಂದು ಹೇಳಿದ್ದಾರೆ.

ಜರ್ದಾರಿ ಸಾವಿನ ಕುರಿತ ವರದಿಗಳು ಆಧಾರರಹಿತ. ನಿಜ ಅವರು ಹೃದಯ ಸಂಬಂಧಿ ಸಮಸ್ಯೆ, ಮಧುಮೇಹ ಮತ್ತು ಇತರ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಮತ್ತು ಬೆನ್ನು ನೋವಿದೆ. ಆದರೆ, ಕೊರೊನಾ ವೈರಸ್​​ನಿಂದಾಗಿ ಅವರು ಮನೆ ಬಿಟ್ಟು ಹೊರ ಬಂದಿಲ್ಲ ಎಂದು ಜರ್ದಾರಿ ಅವರ ಸಾವಿನ ಸುದ್ದಿ ವರದಿ ಕುರಿತು ನಾಯಕ್ ಸ್ಪಷ್ಟಪಡಿಸಿದರು.

ಕಳೆದ ಡಿಸೆಂಬರ್‌ನಲ್ಲಿ ಜರ್ಧಾರಿ ಅವರಿಗೆ ಇಸ್ಲಾಮಾಬಾದ್ ಹೈಕೋರ್ಟ್ (ಐಎಚ್‌ಸಿ) ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ನೀಡಿತ್ತು. ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಗ್ರಹ ಸಂಸ್ಥೆ ನ್ಯಾಷನಲ್ ಅಕೌಂಟಬಿಲಿಟಿ ಬ್ಯುರೋ (ಎನ್​​ಎಬಿ) ಅಧಿಕಾರಿಗಳು ಜರ್ದಾರಿ ಅವರನ್ನು ಕಳೆದ ಜುಲೈನಲ್ಲಿ ಎರಡನೇ ಬಾರಿ ಬಂಧಿಸಿದ್ದರು. ಮೊದಲ ಬಾರಿಗೆ ಜೂನ್​ 10 ರಂದು ಭ್ರಷ್ಟಾಚಾರ ವಿರೋಧಿ ಸಂಸ್ಥೆ ಬಂಧಿಸಿತ್ತು.

ABOUT THE AUTHOR

...view details