ಬೈರುತ್:ಲೆಬನಾನ್ ದೇಶದ ರಾಜಧಾನಿ ಬೈರುತ್ ಇದೀಗ ಮತ್ತೊಂದು ಸ್ಫೋಟಕ್ಕೆ ಸಾಕ್ಷಿಯಾಗಿದೆ. ಬೈರುತ್ನಲ್ಲಿ ತೈಲ ಟ್ಯಾಂಕ್ ಸ್ಫೋಟಗೊಂಡು ನಾಲ್ವರು ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಬೈರುತ್‌ನ ಜನನಿಬಿಡ ಪ್ರದೇಶದಲ್ಲಿರುವ ಇಂಧನ ಡಿಪೋವೊಂದರಲ್ಲಿ ಸ್ಫೋಟ ಸಂಭವಿಸಿದೆ ಎಂದು ಲೆಬನಾನ್ ರೆಡ್‌ಕ್ರಾಸ್ ಸಂಸ್ಥೆ ತಿಳಿಸಿದೆ. ಡಿಪೋ ಮಾಲೀಕರು ಬೃಹತ್ ಪ್ರಮಾಣದ ಡೀಸೆಲ್ ಅನ್ನು ಸಂಗ್ರಹಿಸಿಟ್ಟಿದ್ದರಿಂದ ಅವಘಡ ನಡೆದಿದೆ ಎಂದು ಡಿಪೋದಲ್ಲಿರುವ ಕಟ್ಟಡದ ನಿವಾಸಿಯೊಬ್ಬರು ಹೇಳುತ್ತಾರೆ. ಗ್ಯಾಸೋಲಿನ್ ತುಂಬಿರುವ ಕ್ಯಾನ್ಗಳು ಡಿಪೋದಲ್ಲಿದ್ದವು, ಹೀಗಾಗಿ ದುರಂತ ನಡೆದಿದೆ ಎಂದು ಇತರ ಮೂಲಗಳು ತಿಳಿಸಿವೆ.