ಕರ್ನಾಟಕ

karnataka

ETV Bharat / international

ಇಂಡೋನೇಷ್ಯಾದಲ್ಲೇಕೆ ವಿಮಾನ ದುರಂತ? ಪ್ರಮುಖ ಹಿಂದಿನ ಅಪಘಾತಗಳಾವುವು?: ಇಲ್ಲಿದೆ ಸಂಪೂರ್ಣ ಮಾಹಿತಿ - ಡೋನೇಷ್ಯಾದಲ್ಲಿ 62 ಜನರನ್ನು ಹೊತ್ತ ಶ್ರೀವಿಜಯ ಏರ್ ಬೋಯಿಂಗ್ 737-500 ವಿಮಾನ

ಇಂಡೋನೇಷ್ಯಾದ ವಾಯುಯಾನ ದಾಖಲೆಗಳನ್ನು ನೋಡುವುದಾದರೆ ಏಷ್ಯಾದಲ್ಲಿ ಅತ್ಯಂತ ಕೆಟ್ಟ ಇತಿಹಾಸ ಹೊಂದಿದೆ. 1945 ರಿಂದ ಈ ಪ್ರದೇಶದಲ್ಲಿ ಇತರೆ ದೇಶಗಳಿಗಿಂತ ಹೆಚ್ಚು ನಾಗರಿಕ ವಿಮಾನಗಳು ಅಪಘಾತಕ್ಕೀಡಾಗಿವೆ..

EXPLAINER: Why is Indonesia prone to plane crashes?
ಇಂಡೋನೇಷ್ಯಾ ವಿಮಾನವೇಕೆ ದುರಂತಕ್ಕೆ ಗುರಿಯಾಯಿತು

By

Published : Jan 10, 2021, 11:01 PM IST

ಜಕಾರ್ತ: ಇಂಡೋನೇಷ್ಯಾದಲ್ಲಿ 62 ಜನರನ್ನು ಹೊತ್ತ ಶ್ರೀವಿಜಯ ಏರ್ ಬೋಯಿಂಗ್ 737-500 ವಿಮಾನ ಟೇಕ್‌ಆಫ್ ಆದ ಸ್ವಲ್ಪ ಸಮಯದ ನಂತರ ಜಾವಾ ಸಮುದ್ರಕ್ಕೆ ಅಪ್ಪಳಿಸಿದ್ದು, ಈ ಮುಖಾಂತರ ದೇಶದ ವಾಯುಯಾನ ಉದ್ಯಮದ ಸುರಕ್ಷತೆಯ ಬಗ್ಗೆ ಪ್ರಶ್ನೆ ಎದ್ದಿದೆ.

ಇಂಡೋನೇಷ್ಯಾದ ವಾಯುಯಾನ ದಾಖಲೆಗಳನ್ನು ನೋಡುವುದಾದ್ರೆ ಏಷ್ಯಾದಲ್ಲಿ ಅತ್ಯಂತ ಕೆಟ್ಟ ಇತಿಹಾಸ ಹೊಂದಿದೆ. 1945ರಿಂದ ಈ ಪ್ರದೇಶದಲ್ಲಿ ಇತರೆ ದೇಶಗಳಿಗಿಂತ ಹೆಚ್ಚು ನಾಗರಿಕ ವಿಮಾನಗಳು ಅಪಘಾತಕ್ಕೀಡಾಗಿವೆ. ಕಳಪೆ ಪೈಲಟ್ ತರಬೇತಿ, ಯಾಂತ್ರಿಕ ವೈಫಲ್ಯಗಳು, ವಾಯು ಸಂಚಾರ ನಿಯಂತ್ರಣ ಸಮಸ್ಯೆಗಳು ಮತ್ತು ವಿಮಾನ ನಿರ್ವಹಣೆ ಸರಿಯಾಗಿ ಇಲ್ಲದಿರುವುದು ಇಂಥಹ ಅಪಘಾತಗಳಿಗೆ ಕಾರಣ.

ಇತ್ತೀಚಿನ ವರ್ಷಗಳಲ್ಲಿ ಅನೇಕ ಸುಧಾರಣೆಗಳು ಕಂಡು ಬಂದಿವೆ ಎಂದು ತಜ್ಞರು ಹೇಳಿದ್ದರು. ಆದರೆ, ಈ ಘಟನೆ ಇಂಡೋನೇಷ್ಯಾದ ವಾಯುಯಾನ ಮೇಲ್ವಿಚಾರಣೆ ಮತ್ತು ನಿಯಂತ್ರಣದ ನಿಜವಾದ ಪ್ರಗತಿಯನ್ನು ಪ್ರಶ್ನಿಸುವಂತಿದೆ.

ಇಂಡೋನೇಷ್ಯಾದಲ್ಲೇ ಏಕೆ?:ಆರ್ಥಿಕ, ಸಾಮಾಜಿಕ ಮತ್ತು ಭೌಗೋಳಿಕ ಅಂಶಗಳ ಸಂಯೋಜನೆಯಿಂದ ಇಲ್ಲಿ ಈ ರೀತಿಯ ಘಟನೆಗಳು ಜರುಗುತ್ತಿವೆ ಎನ್ನಲಾಗಿದೆ. ಇಂಡೋನೇಷ್ಯಾದ ವಾಯುಯಾನ ಆರಂಭಿಕ ವರ್ಷಗಳಲ್ಲಿ ಅಂದರೆ 1990ರ ದಶಕದ ಉತ್ತರಾರ್ಧದಲ್ಲಿ ಸುಹಾರ್ಟೊ ಪತನದ ನಂತರ ಈ ಉದ್ಯಮದ ಬಗ್ಗೆ ಕಡಿಮೆ ನಿಯಂತ್ರಣ ಇತ್ತು. ಹಾಗೆ ಅರಿಯಾದ ಮೇಲ್ವಿಚಾರಣೆ ಇರಲಿಲ್ಲ.

ಟೇಕ್​ಆಪ್​ ಆದ ಸ್ಥಳ ಹಾಗೂ ಪತನವಾದ ಸ್ಥಳ

2018ರಲ್ಲಿ ಇಲ್ಲಿ ವಿಮಾನವೊಂದು ಅಪಘಾತಕ್ಕೀಡಾಗಿತ್ತು. ಆ ವೇಳೆ 189 ಜನರು ಸಾವನ್ನಪ್ಪಿದ್ದರು. ಇದು ಮಾರುಕಟ್ಟೆಯಲ್ಲಿ ಭಾರಿ ಹೊಡೆತ ಬೀಳುವಂತೆ ಮಾಡಿತ್ತು. ಏವಿಯೇಷನ್ ​​ಸೇಫ್ಟಿ ನೆಟ್‌ವರ್ಕ್‌ನ ಮಾಹಿತಿಯ ಪ್ರಕಾರ, ಇಂಡೋನೇಷ್ಯಾದಲ್ಲಿ 1945 ರಿಂದ 104 ನಾಗರಿಕ ವಿಮಾನಗಳು ಅಪಘಾತಕ್ಕೀಡಾಗಿವೆ. ಇದರಲ್ಲಿ 1,300ಕ್ಕೂ ಹೆಚ್ಚು ಸಾವು-ನೋವುಗಳು ಕಂಡು ಬಂದಿವೆ. ಈ ಮುಖಾಂತರ ಇದು ಏಷ್ಯಾದಲ್ಲಿ ಅತ್ಯಂತ ಅಪಾಯಕಾರಿ ಸ್ಥಳವಾಗಿದೆ.

ವಿಮಾನಯಾನದ ಒಂದು ಅಥವಾ ಹೆಚ್ಚಿನ ಕ್ಷೇತ್ರಗಳಲ್ಲಿ ಕೊರತೆಯಿರುವ ಕಾರಣ 2007 ರಿಂದ 2016ರವರೆಗೆ ಇಂಡೋನೇಷ್ಯಾದ ವಿಮಾನಗಳು ದೇಶದಲ್ಲಿ ಕಾರ್ಯನಿರ್ವಹಿಸುವುದನ್ನು ಯುನೈಟೆಡ್ ಸ್ಟೇಟ್ಸ್ ನಿಷೇಧಿಸಿತ್ತು. ಹಾಗೆ ಯುರೋಪಿಯನ್ ಒಕ್ಕೂಟವು ಸಹ 2007ರಿಂದ 2018ರವರೆಗೆ ಇದೇ ರೀತಿಯ ನಿಷೇಧ ಹೇರಿತ್ತು.

ಸುಧಾರಿತ ವಿಷಯಗಳೇನು?:ವಾಯುಯಾನ ತಜ್ಞ ಮತ್ತು ಏರ್‌ಲೈನ್ ರೇಟಿಂಗ್ಸ್ ಡಾಟ್​ ಕಾಮ್‌ನ ಪ್ರಧಾನ ಸಂಪಾದಕ ಜೆಫ್ರಿ ಥಾಮಸ್ ಮಾಹಿತಿ ನೀಡಿದ್ದು, ಈ ಉದ್ಯಮ ಗಮನಾರ್ಹವಾಗಿ ಸುಧಾರಿಸಿದೆ. ಮೇಲ್ವಿಚಾರಣೆಯು ಹೆಚ್ಚು ಕಠಿಣವಾಗಿದೆ ಎಂದಿದ್ದಾರೆ. ಹೆಚ್ಚು ತಪಾಸಣೆ, ನಿರ್ವಹಣಾ ಸೌಲಭ್ಯ ಮತ್ತು ಕಾರ್ಯವಿಧಾನಗಳ ಮೇಲೆ ಬಲವಾದ ನಿಯಂತ್ರಣ ಹಾಗೂ ಉತ್ತಮ ಪೈಲಟ್ ತರಬೇತಿ ಒಳಗೊಂಡಿದೆ ಎಂದು ಹೇಳಿದ್ದಾರೆ.

ಯುಎಸ್ ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್ ಇಂಡೋನೇಷ್ಯಾಕ್ಕೆ 2016ರಲ್ಲಿ ವರ್ಗ-1 ರೇಟಿಂಗ್ ನೀಡಿತ್ತು. ಈ ಮುಖಾಂತರ ದೇಶವು ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆಯ ಸುರಕ್ಷತಾ ಮಾನದಂಡಗಳನ್ನು ಅನುಸರಿಸುತ್ತಿದೆ ಎಂದು ನಿರ್ಧರಿಸಿತ್ತು.

ಇತ್ತೀಚಿನ ಅಪಘಾತ ಏಕೆ ಸಂಭವಿಸಿದೆ? :ಮಾನವ ದೋಷ, ಕಳಪೆ ಹವಾಮಾನ ಸೇರಿದಂತೆ ವಿಮಾನ ಪತನವಾಗಲು ಹಲವಾರು ಕಾರಣಗಳಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಪಘಾತದ ಸುತ್ತಮುತ್ತಲಿನ ಮೀನುಗಾರರು ಸ್ಫೋಟವನ್ನು ಕೇಳಿದ್ದಾರೆ. ನಂತರ ಅವರ ದೋಣಿ ಸುತ್ತಲೂ ಅವಶೇಷಗಳು ಹಾಗೂ ಇಂಧನ ಕಂಡು ಬಂದಿದೆ. ಆದರೆ, ಭಾರೀ ಮಳೆಯ ಪರಿಣಾಮ ವಿಮಾನ ಬೀಳುವುದನ್ನು ಸರಿಯಾಗಿ ಗಮನಿಸಿಲ್ಲ.

ಕಾರ್ಯಾಚರಣೆ ಸ್ಥಳ

ಶ್ರೀವಿಜಯದಲ್ಲಿ ಈವರೆಗೆ ಸಣ್ಣ ಪುಟ್ಟ ಘಟನೆಗಳು ಮಾತ್ರ ಜರುಗುತ್ತಿದ್ದವು. ಆದರೆ, 2008ರಲ್ಲಿ ಹೈಡ್ರಾಲಿಕ್ ಸಮಸ್ಯೆಯಿಂದಾಗಿ ವಿಮಾನ ಕೆಳಗಿಳಿಯುವಾಗ ರನ್​ವೇ ಬಿಟ್ಟು ಹೋಗಿದ್ದರಿಂದ ಓರ್ವ ರೈತ ಸಾವಿಗೀಡಾಗಿದ್ದ.

ಅಪಘಾತಕ್ಕೀಡಾದ ವಿಮಾನವು 26ವರ್ಷ ಹಳೆಯದಾಗಿದೆ. ಇದನ್ನು ಈ ಹಿಂದೆ ಯುನೈಟೆಡ್ ಸ್ಟೇಟ್ಸ್‌ನಲ್ಲಿ ವಿಮಾನಯಾನ ಸಂಸ್ಥೆಗಳು ಬಳಸುತ್ತಿದ್ದವು ಎಂದು ಏರ್ಲೈನ್ಸ್ ನಿರ್ದೇಶಕ ಜೆಫರ್ಸನ್ ಇರ್ವಿನ್ ಜೌವೆನಾ ಹೇಳಿದ್ದಾರೆ. ಆದರೂ ವಿಮಾನವು ಹಾರಲು ಯೋಗ್ಯವಾಗಿದೆಯೇ ಎಂದು ನಿರ್ಧರಿಸಲು ತನಿಖೆ ಅಗತ್ಯ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ಘಟನೆ ಬೆಳಕಿಗೆ ಬಂದಿದ್ದು ಯಾವಾಗ?:ಭಾನುವಾರ ವಿಮಾನದ ಭಗ್ನಾವಶೇಷದ ಸ್ಥಳ ಮತ್ತು ವಿಮಾನದ ಕಪ್ಪು ಪೆಟ್ಟಿಗೆಗಳನ್ನು ಪತ್ತೆ ಮಾಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಫ್ಲೈಟ್ ಡಾಟಾ ರೆಕಾರ್ಡರ್ ಮತ್ತು ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್‌ನ ಸಮುದ್ರದಿಂದ ಹಿಂಪಡೆಯಲು ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕಪ್ಪು ಪೆಟ್ಟಿಗೆಯು ಸಿಕ್ಕಿದ್ದು ಅಪಘಾತದ ಬಗ್ಗೆ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ. ಆದರೂ ತನಿಖೆಗೆ ವಾರಗಳು, ತಿಂಗಳುಗಳೇ ಬೇಕಾಗಬಹುದು ಎಂದು ಇಂಡೋನೇಷ್ಯಾದ ವಾಯುಯಾನ ಸಲಹೆಗಾರ ಗೆರ್ರಿ ಸೂಜತ್ಮಾನ್ ಹೇಳಿದ್ದಾರೆ.

ಇಂಡೋನೇಷ್ಯಾದ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಸಮಿತಿಯಿಂದ ಒಂದು ತಿಂಗಳೊಳಗೆ ಮಧ್ಯಂತರ ವರದಿ ಬರಬೇಕು. ಆ ವರದಿಯೊಂದಿಗೆ ವಿಶ್ಲೇಷಣೆ ಪ್ರಾರಂಭವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

ABOUT THE AUTHOR

...view details