ದುಬೈ :ಇಸ್ಲಾಮಿಕ್ ಗಣರಾಜ್ಯ ಮತ್ತು ಪಶ್ಚಿಮ ದೇಶಗಳ ನಡುವೆ ವಿಶ್ವ ಶಕ್ತಿಗಳೊಂದಿಗಿನ ಪರಮಾಣು ಒಪ್ಪಂದದ ಬಗ್ಗೆ ಉದ್ವಿಗ್ನತೆ ಹೆಚ್ಚಿರುವುದರಿಂದ ದೇಶದ ನಾಗರಿಕ ಸರ್ಕಾರವನ್ನು ಯಾರು ಮುನ್ನಡೆಸುತ್ತಾರೆ ಎಂಬುದನ್ನು ಶುಕ್ರವಾರ ನಡೆದಿರುವ ಇರಾನ್ ಅಧ್ಯಕ್ಷೀಯ ಚುನಾವಣೆ ನಿರ್ಧರಿಸುತ್ತದೆ.
ಜನರ ಒಲವು ಯಾರತ್ತ?
ನಾಲ್ವರು ಅಭ್ಯರ್ಥಿಗಳ ಪೈಕಿ ಮತದಾನದ ಆಧಾರದ ಮೇಲೆ ನ್ಯಾಯಾಂಗ ಮುಖ್ಯಸ್ಥ ಇಬ್ರಾಹಿಂ ರೈಸಿ ಮುಂದಿದ್ದಾರೆ. ಇರಾನ್‌ನ ಸೆಂಟ್ರಲ್ ಬ್ಯಾಂಕ್ನ ಮಾಜಿ ಮುಖ್ಯಸ್ಥ ಅಬ್ದುಲ್ ನಾಸರ್ ಮಧ್ಯಮ ವರ್ಗವನ್ನು ಪ್ರತಿನಿಧಿಸಿದ್ದಾರೆ. ಮಾಜಿ ಗಾರ್ಡ್ ಕಮಾಂಡರ್ ಮೊಹ್ಸೆನ್ ರೆಝೈ ಕೂಡ ಉತ್ತಮ ಪೈಪೋಟಿ ನೀಡುತ್ತಿದ್ದಾರೆ. ಶಾಸಕರಾಗಿರುವ ಅಮೀರ್ ಹೊಸೆನ್ ಗಾಜಿಜಾದೆಗೆ ಪ್ರಸ್ತುತ ಅಧ್ಯಕ್ಷ ಹಸನ್ ರೂಹಾನಿಯ ಬೆಂಬಲವಿರುವುದರಿಂದ ಇವರದ್ದು ಎರಡು ಗಾಡಿಯ ಓಟ ಎಂದು ಟೀಕಿಸಲಾಗುತ್ತಿದೆ.
ಯಾರಿಗೆ ಹಿನ್ನಡೆ?
2015ರ ಪರಮಾಣು ಒಪ್ಪಂದಕ್ಕೆ ಸಹಿ ಹಾಕಿರುವ ರೂಹಾನಿ, ಇನ್ನೂ ನಾಲ್ಕು ವರ್ಷಗಳ ಅಧಿಕಾರದಲ್ಲಿ ಮುಂದುವರಿಯಲು ಇಚ್ಛಿಸುತ್ತಾರೆ. ಅಭ್ಯರ್ಥಿಗಳನ್ನು ಅನುಮೋದಿಸುವ ಇರಾನ್‌ನ ಸಾಂವಿಧಾನಿಕ ಗಾರ್ಡಿಯನ್ ಕೌನ್ಸಿಲ್ ಈ ವರ್ಷ ಹಲವಾರು ಪ್ರಮುಖ ಅಭ್ಯರ್ಥಿಗಳನ್ನು ಸ್ಪರ್ಧಿಸದಂತೆ ತಡೆದಿದೆ ಕೂಡ. ಅವರಲ್ಲಿ ಸಂಪ್ರದಾಯವಾದಿ ಮಾಜಿ ಸಂಸತ್ ಸ್ಪೀಕರ್ ಅಲಿ ಲಾರಿಜಾನಿ ಕೂಡ ಒಬ್ಬರು. ಅವರು ಇತ್ತೀಚಿನ ವರ್ಷಗಳಲ್ಲಿ ರೂಹಾನಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಪಾಶ್ಚಿಮಾತ್ಯರ ವೈರತ್ವದ ಹೊರತಾಗಿಯೂ ರೂಹಾನಿ ಜಾರಿಗೊಳಿಸಿದ ನೀತಿಗಳಿಂದಾಗಿ ಅವರು ಇನ್ನೂ ಜನಪ್ರಿಯರಾಗಿದ್ದಾರೆ. ಲಾರಿಜಾನಿಯನ್ನು ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂಧಿಸಿದರೆ, ಅಹ್ಮದಿನೆಜಾದ್ ತಮ್ಮ ಬೆಂಬಲಿಗರನ್ನು ಮತದಾನದಲ್ಲಿ ಭಾಗವಹಿಸದಂತೆ ಕರೆ ನೀಡಿದ್ದರು.
ಅಮೆರಿಕದ ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರಮಾಣು ಒಪ್ಪಂದದಿಂದ ಏಕಾಏಕಿ ಹಿಂದೆ ಸರಿದ ನಂತರ ಇರಾನ್ ಹಲವಾರು ವರ್ಷಗಳ ಕಾಲ ನಿರ್ಬಂಧಗಳನ್ನು ಎದುರಿಸಬೇಕಾಯಿತು. ಆಗ ಉಲ್ಬಣಗೊಂಡ ಆರ್ಥಿಕ ಸಮಸ್ಯೆಗಳು ರೂಹಾನಿಯವರಿಗೆ ಭಾರಿ ಹೊಡೆತ ನೀಡಿವೆ. ಯಾಕೆಂದರೆ, ಆ ಅವಧಿಯಲ್ಲಿ ಎರಡು ಬಾರಿ ರಾಷ್ಟ್ರವ್ಯಾಪಿ ಪ್ರತಿಭಟನೆಗಳು ನಡೆದಿವೆ.