ಇಸ್ಲಾಮಾಬಾದ್:ಭಾರತದ ವಿಚಾರದಲ್ಲಿ ವಿನಾಕಾರಣ ಮೂಗು ತೂರಿಸುತ್ತಿರುವ ಪಾಕಿಸ್ತಾನ ಈಗಾಗಲೇ ಭಾರಿ ಹಿನ್ನಡೆಗೊಳಗಾಗಿದೆ. ಸದ್ಯ ಕಾಶ್ಮೀರ ವಿಚಾರದಲ್ಲಿ ಟ್ವೀಟ್ ಮಾಡಲು ಹೋದ ಪಾಕ್ ಹೈಕಮೀಷನರ್ ಭಾರಿ ನಗೆಪಾಟಲಿಗೀಡಾಗಿದ್ದಾರೆ.
ದಿನದ ಹಿಂದೆ ಕಾಶ್ಮೀರದಲ್ಲಿ ನಡೆದ ಕಲ್ಲು ತೂರಾಟದಲ್ಲಿ ವ್ಯಕ್ತಿಯೋರ್ವನ ಕಣ್ಣಿಗೆ ಗಾಯವಾಗಿತ್ತು. ಇದೇ ವಿಚಾರವನ್ನು ಪಾಕಿಸ್ತಾನದ ಮಾಜಿ ಹೈಕಮೀಷನರ್ ಅಬ್ದುಲ್ ಬಸಿತ್ ರೀಟ್ವೀಟ್ ಮಾಡಿದ್ದು ಸದ್ಯ ಹಾಸ್ಯದ ವಸ್ತುವಾಗಿ ಮಾರ್ಪಟ್ಟಿದೆ.
ಕಲ್ಲುತೂರಾಟದಲ್ಲಿ ಗಾಯಗೊಂಡಿರುವ ವ್ಯಕ್ತಿಯ ಫೋಟೋವನ್ನು ರೀಟ್ವೀಟ್ ಮಾಡುವ ವೇಳೆ ನೀಲಿಚಿತ್ರ ತಾರೆ ಜಾನಿ ಸಿನ್ಸ್ ವ್ಯಕ್ತಿಯನ್ನು ರಿಟ್ವೀಟ್ ಮಾಡಿ ಹಾಸ್ಯಕ್ಕೆ ಗುರಿಯಾಗಿದ್ದಾರೆ. ತಮ್ಮ ಎಡವಟ್ಟು ಗಮನಕ್ಕೆ ಬರುತ್ತಿದ್ದಂತೆ ಅಬ್ದುಲ್ ಬಸಿತ್ ಟ್ವೀಟ್ ಡಿಲೀಟ್ ಮಾಡಿದ್ದಾರೆ.
ಜಮ್ಮು ಕಾಶ್ಮೀರದ ಅನಂತ್ನಾಗ್ ಜಿಲ್ಲೆಯ ಯೂಸುಫ್ ಕಲ್ಲುತೂರಾಟದಲ್ಲಿ ದೃಷ್ಟಿ ಕಳೆದುಕೊಂಡಿದ್ದಾನೆ. ಇದರ ವಿರುದ್ಧ ನಿಮ್ಮ ದನಿಗೂಡಿಸಿ ಎನ್ನುವ ಟ್ವೀಟ್ ಅನ್ನು ಮಾಜಿ ಪಾಕ್ ಹೈಕಮೀಷನರ್ ರಿಟ್ವೀಟ್ ಮಾಡಿದ್ದರು.
ಇದೇ ಟ್ವೀಟ್ ಸ್ಕ್ರೀನ್ಶಾಟ್ ತೆಗೆದು ಪಾಕ್ ಮೂಲದ ಪತ್ರಕರ್ತೆ ನೈಲಾ ಇನಾಯತ್ ಟ್ವೀಟ್ ಮೂಲಕ ಪಾಕಿಸ್ತಾನ ಮಾಜಿ ಹೈಕಮಿಷನರ್ ಎಡವಟ್ಟನ್ನು ಹಾಸ್ಯ ಮಾಡಿ ಟ್ವೀಟ್ ಮಾಡಿದ್ದಾರೆ.