ಕರ್ನಾಟಕ

karnataka

ETV Bharat / international

ಕಾಶ್ಮೀರ ಸಮಸ್ಯೆಗೆ ಯುದ್ಧ ಒಂದೇ ಪರಿಹಾರ: ಪಾಕ್ ರಾಯಭಾರಿ - ಕಾಶ್ಮೀರ ಗಡಿ ಸಮಸ್ಯೆ

ಭಾರತ ಹಾಗೂ ಪಾಕಿಸ್ತಾನ ನಡುವಿನ ಬಿಕ್ಕಟ್ಟಿಗೆ ಮೂಲ ಕಾರಣವಾಗಿರುವ ಕಾಶ್ಮೀರದ ಗಡಿ ಸಮಸ್ಯೆಗೆ ಯುದ್ಧವೊಂದೇ ಪರಿಹಾರ ಎಂದು ಪಾಕಿಸ್ತಾನದ ರಾಯಭಾರಿ ಝಾಫರ್​ ಹಿಲಾಲಿ ವಿವಾದಿತ ಹೇಳಿಕೆ ನೀಡಿದ್ದಾರೆ.

ಪಾಕ್ ರಾಯಭಾರಿ ಝಾಫರ್​ ಹಿಲಾಲಿ

By

Published : Aug 18, 2019, 2:57 PM IST

ಇಸ್ಲಾಮಾಬಾದ್:ಕಾಶ್ಮೀರ ವಿಚಾರದಲ್ಲಿ ಮತ್ತೆ ಕಾಲು ಕೆರೆದು ಜಗಳಕ್ಕೆ ಬರ್ತಿರುವ ಪಾಕಿಸ್ತಾನ ಇದೀಗ ಸಮಸ್ಯೆ ಪರಿಹಾರಕ್ಕೆ ಯುದ್ಧವೇ ಅಗತ್ಯ ಎಂದು ಹೇಳಿದ್ದು, ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ.

ಭಾರತ ಹಾಗೂ ಪಾಕಿಸ್ತಾನ ನಡುವಿನ ಬಿಕ್ಕಟ್ಟಿಗೆ ಮೂಲ ಕಾರಣವಾಗಿರುವ ಕಾಶ್ಮೀರದ ಗಡಿ ಸಮಸ್ಯೆಗೆ ಯುದ್ಧವೊಂದೇ ಪರಿಹಾರ ಎಂದು ಪಾಕಿಸ್ತಾನದ ರಾಯಭಾರಿ ಝಾಫರ್​ ಹಿಲಾಲಿ ಹೇಳಿದ್ದಾರೆ.

ಪ್ರಧಾನಿ ಮೋದಿ ಸದ್ಯ ಕಾಶ್ಮೀರ ವಿಚಾರದಲ್ಲಿ ತೆಗೆದುಕೊಂಡಿರುವ ನಿರ್ಧಾರದಿಂದ ಹಿಂದೆ ಸರಿಯುವ ಸಾಧ್ಯತೆ ಇಲ್ಲ ಅವರು, ಕಾಶ್ಮೀರ ಸಮಸ್ಯೆಯನ್ನು ಮಾತುಕತೆ ಮೂಲಕ ಬಗೆಹರಿಸಲು ಸಾಧ್ಯವಿಲ್ಲ ಎಂದು ತಮ್ಮ ಅಭಿಪ್ರಾಯ ಮುಂದಿಟ್ಟಿದ್ದಾರೆ.

ಭಾರತದ ಹೇಳಿಕೆಗೆ ಪಾಕ್​​​ ತತ್ತರ... ರಾಜನಾಥ್​ ಸಿಂಗ್ ಹೇಳಿಕೆಗೆ ಹೀಗೆ ​​ಪ್ರತಿಕ್ರಿಯೆ

ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿಯ ಬಳಿಕ ಪಾಕಿಸ್ತಾನ ಆಕ್ರೋಶಭರಿತವಾಗಿದ್ದು, ಈ ವಿಚಾರವನ್ನು ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪಿಸಿ ಮುಖಭಂಗಕ್ಕೂ ಒಳಗಾಗಿದೆ. ಇದರ ನಡುವೆಯೇ ಹಿಲಾಲಿ ಮಾತು ಸಾಕಷ್ಟು ಪರಿಣಾಮ ಬೀರುವ ಸಾಧ್ಯತೆ ಇದೆ.

ABOUT THE AUTHOR

...view details