ಹೈದರಾಬಾದ್: ಇರಾನ್ ಹಾಗೂ ಇಟಲಿ ದೇಶದಲ್ಲಿ ಪತ್ತೆಯಾದ ಕೊರೊನಾ ಪ್ರಕರಣಗಳ ಪೈಕಿ ಮೂರನೇ ಎರಡು ಭಾಗದಷ್ಟು ಕೇಸ್ಗಳು ಚೀನಾ ಸಂಪರ್ಕದಿಂದ ಬಂದಿದೆ ಎಂದು ಮೆಡಿಕಲ್ ಜರ್ನಲ್ ದಿ ಲ್ಯಾನ್ಸೆಂಟ್ ವರದಿ ಮಾಡಿದೆ.
ಚೀನಾ ಸಂಪರ್ಕದಿಂದ ಇಟಲಿ, ಇರಾನ್ನಲ್ಲಿ ಹೆಚ್ಚು ಕೊರೊನಾ ಕೇಸ್: ದಿ ಲ್ಯಾನ್ಸೆಂಟ್ ವರದಿ
ಇರಾನ್ ಹಾಗೂ ಇಟಲಿ ದೇಶದಲ್ಲಿ ಪತ್ತೆಯಾದ ಕೊರೊನಾ ಪ್ರಕರಣಗಳ ಪೈಕಿ ಮೂರನೇ ಎರಡು ಭಾಗದಷ್ಟು ಕೇಸ್ಗಳು ಚೀನಾದೊಂದಿಗೆ ಸಂಪರ್ಕ ಹೊಂದಿದ್ದಾಗಿದೆ ಎಂದು ಮೆಡಿಕಲ್ ಜರ್ನಲ್ ದಿ ಲ್ಯಾನ್ಸೆಂಟ್ ವರದಿ ಮಾಡಿದೆ.
ಲ್ಯಾನ್ಸೆಂಟ್ ಅಧ್ಯಯನದಲ್ಲಿ, ಮುಖ್ಯವಾಗಿ ಚೀನಾದಿಂದ ಯಾವ ದೇಶಗಳಿಗೆ ಜನರು ಪ್ರಯಾಣ ಬೆಳೆಸಿದ್ದಾರೆ, ಚೀನಾದ ಯಾವ ಪ್ರದೇಶದಿಂದ ಕೊರೊನಾ ಹುಟ್ಟಿಕೊಂಡಿದೆ ಎಂಬುದರ ಕುರಿತು ಮಾಹಿತಿ ಕಲೆ ಹಾಕುವ ಉದ್ದೇಶ ಹೊಂದಿತ್ತು. ಇದರ ಪ್ರಕಾರ ದಿ ಲ್ಯಾನ್ಸೆಟ್ ವರದಿ ತಯಾರಿಸಿದ್ದು, ಇಟಲಿಗೆ ಶೇ 27, ಚೀನಾ ಶೇ 22ರಷ್ಟು ಮತ್ತು ಇರಾನ್ಗೆ ಶೇ 11ರಷ್ಟು ಜನ ಪ್ರಯಾಣ ಬೆಳೆಸಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಕೊರೊನಾ ವೈರಸ್ ಪ್ರಕರಣವು ಚೀನಾದ ವುಹಾನ್ ಪ್ರದೇಶದಲ್ಲಿ ಕಂಡುಬಂದಿತ್ತು. ಸದ್ಯ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಇದನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸಿತ್ತು. ಆದಾದ ಬಳಿಕ ಚೀನಾದ ಹೊರಗೆ ವೈರಸ್ ಹೇಗೆ ವೇಗವಾಗಿ ಹರಡಿತು ಎಂದು ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದಾರೆ.