ನವದೆಹಲಿ :ಭಾರತ, ಚೀನಾ ಗಡಿಯಲ್ಲಿ ಮತ್ತೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿರುವ ಬೆನ್ನಲ್ಲೇ ನಾಳೆ, ನಾಡಿದ್ದು ಮಾಸ್ಕೋದಲ್ಲಿ ನಡೆಯುತ್ತಿರುವ ವಿದೇಶಾಂಗ ಸಚಿವರ ಮಂಡಳಿಯ ಎಸ್‌ಸಿಒ ಸಭೆಯಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಭಾಗವಹಿಸಲಿದ್ದಾರೆ. ಈ ವೇಳೆ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ನಿಯೋಗದೊಂದಿಗೆ ಮಾತುಕತೆ ನಡೆಸುವ ಸಾಧ್ಯತೆ ಇದೆ.
ಮಾಸ್ಕೋದಲ್ಲಿ ಎಸ್‌ಸಿಒ ಸಭೆ.. ಸಚಿವ ಜೈಶಂಕರ್‌ರಿಂದ ಚೀನಾ ನಿಯೋಗದ ಜತೆ ಮಾತುಕತೆ ಸಾಧ್ಯತೆ - ಚೀನಾ ನಿಯೋಗ
ಎಸ್‌ಸಿಒ ಸಭೆಯಲ್ಲಿ ಭಾಗವಹಿಸಲು ಇಂದು ಇಎಂಎ ಜೈಶಂಕರ್ ಮಾಸ್ಕೋಗೆ ಪ್ರಯಾಣ ಬೆಳೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಭೇಟಿ ವೇಳೆ ವಿದೇಶಾಂಗ ಸಚಿವರ ಮಂಡಳಿ ಸಭೆಯಲ್ಲಿ ಭಾಗಿಯಾಗುವುದರ ಜೊತೆಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ..

ಎಸ್‌ಸಿಒ ಸಭೆಯಲ್ಲಿ ಭಾಗವಹಿಸಲು ಇಂದು ಇಎಂಎ ಜೈಶಂಕರ್ ಮಾಸ್ಕೋಗೆ ಪ್ರಯಾಣ ಬೆಳೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಭೇಟಿ ವೇಳೆ ವಿದೇಶಾಂಗ ಸಚಿವರ ಮಂಡಳಿ ಸಭೆಯಲ್ಲಿ ಭಾಗಿಯಾಗುವುದರ ಜೊತೆಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
ಸಿಎಫ್‌ಎಂ ಸಭೆಯಲ್ಲಿ ಮುಂಬರುವ ಶಾಂಘೈ ಸಹಕಾರ ಸಂಘಟನೆ(ಎಸ್‌ಸಿಎ) ಶೃಂಗಸಭೆಯ ಸಿದ್ಧತೆಗಳು ಮತ್ತು ಅಂತಾರಾಷ್ಟ್ರೀಯ ವಿಚಾರಗಳ ಬಗ್ಗೆ ಚರ್ಚೆ ಮತ್ತು ಪ್ರಾದೇಶಿಕ ವಿಷಯಗಳ ಕುರಿತು ಪರಾಮರ್ಶೆ ನಡೆಸಲಿದ್ದಾರೆ. ಎಸ್‌ಸಿಒ ಸದಸ್ಯ ರಾಷ್ಟ್ರವಾದ ನಂತರ ಭಾರತ ಭಾಗವಹಿಸುತ್ತಿರುವ 3ನೇ ಸಭೆ ಇದಾಗಿದೆ. 2018ರ ಏಪ್ರಿಲ್ 23,24ರಂದು ಬೀಜಿಂಗ್, 2019ರ ಮೇ 21, 22ರಲ್ಲಿ ಬಿಶ್ಕೇಕ್‌ನ ಸಭೆಯಲ್ಲಿ ಭಾರತದ ಪ್ರತಿನಿಧಿಗಳು ಭಾಗವಹಿಸಿದ್ದರು. ಶಾಂಘೈ ಸಹಕಾರ ಸಂಘಟನೆಗೆ ಪ್ರಸ್ತುತ ರಷ್ಯಾ ಮುಖ್ಯಸ್ಥ ದೇಶವಾಗಿದೆ.