ಕರ್ನಾಟಕ

karnataka

ETV Bharat / international

ಬಾಂಗ್ಲಾ ಹಣಕಾಸು ಸಚಿವರೊಂದಿಗೆ ಇಎಎಂ ಜೈಶಂಕರ್‌ ಮಾತುಕತೆ - ಎಸ್‌.ಜೈಶಂಕರ್‌

ವ್ಯಾಪಾರ ವಹಿವಾಟು ವೃದ್ಧಿಸಿಕೊಳ್ಳುವ ಸಂಬಂಧ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್,‌ ಬಾಂಗ್ಲಾದೇಶದ ಹಣಕಾಸು ಸಚಿವ ಡಾ.ಎಕೆ ಅಬ್ದುಲ್‌ ಮೊಮೆನ್‌ ಜೊತೆ ಇಂದು ದೂರುವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಈ ಬಗ್ಗೆ ಸಚಿವರು ಟ್ವೀಟ್‌ ಮಾಡಿದ್ದಾರೆ.

eam-jaishankar-holds-telephonic-talks-with-bangladeshi-counterpart
ಬಾಂಗ್ಲಾ ಹಣಕಾಸು ಸಚಿವರೊಂದಿಗೆ ಇಎಎಂ ಜೈಶಂಕರ್‌ ಮಾತುಕತೆ

By

Published : Sep 7, 2020, 8:00 PM IST

ನವದೆಹಲಿ: ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ಬಾಂಗ್ಲಾದೇಶದ ಎಫ್‌ಎಂ ಡಾ.ಎಕೆ ಅಬ್ದುಲ್‌ ಮೊಮೆನ್‌ ಜೊತೆ ಇಂದು ದೂರುವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ.

ಉಭಯದೇಶಗಳ ನಡುವಿನ ವ್ಯಾಪಾರ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾತುಕತೆ ನಡೆಸಲಾಗಿದೆ ಎಂದು ಸಚಿವ ಜೈಶಂಕರ್‌ ಟ್ವೀಟ್‌ ಮಾಡಿದ್ದಾರೆ. ಅತಿ ಶೀಘ್ರದಲ್ಲೇ ಜಂಟಿಯಾಗಿ ಸಭೆ ನಡೆಸುವ ಬಗ್ಗೆ ಚರ್ಚೆ ನಡೆಸಿದ್ದಾರೆ. ನಮ್ಮ ನಾಯಕರ ನೀಡಿರುವ ಗುರಿ ಸಾಧನೆಯನ್ನು ತಲುಪಲು ಬಾಂಗ್ಲಾದೊಂದಿಗೆ ನಮ್ಮ ಕೆಲಸ ಕಾರ್ಯಗಳು ಮುಂದುವರಿಯಲಿವೆ ಎಂದು ಹೇಳಿದ್ದಾರೆ.

ಇತ್ತೀಚೆಗಷ್ಟೇ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ದನ್‌ ಶ್ರೀಂಗಾಲ್‌ ಡಾಕಾಗೆ ಭೇಟಿ ನೀಡಿದ್ದರು. ಈ ವೇಳೆ ಮುಂದೆ ಎರಡು ದೇಶಗಳ ಮಾಡಿಕೊಳ್ಳಲಿರುವ ಒಪ್ಪಂದಗಳ ಬಗ್ಗೆ ಅಲ್ಲಿನ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದರರು.

ABOUT THE AUTHOR

...view details