ಕರ್ನಾಟಕ

karnataka

ETV Bharat / international

ಬ್ರಿಟನ್‌ ಇತಿಹಾಸದಲ್ಲೇ ದುಬಾರಿ ವಿಚ್ಛೇದನ ; ದುಬೈ ದೊರೆಯಿಂದ 6ನೇ ಪತ್ನಿ ಹಯಾಗೆ 5,527 ಕೋಟಿ ರೂ. ಜೀವನಾಂಶ

Dubai ruler divorce : ಯುಎಇ ಪ್ರಧಾನಮಂತ್ರಿ, ದೊರೆ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ತಮ್ಮ 6ನೇ ಪತ್ನಿಗೆ ವಿಚ್ಛೇದನ ಪ್ರಕರಣ ಮುಕ್ತಾಯವಾಗಿದೆ. ಪರಿಹಾರವಾಗಿ ಪತ್ನಿ ಹಯಾಗೆ 5,527 ಕೋಟಿ ರೂಪಾಯಿ ಪರಿಹಾರ ನೀಡಬೇಕೆಂದು ಬ್ರಿಟನ್ ಹೈಕೋರ್ಟ್‌ ಆದೇಶ ನೀಡಿದೆ.

princess haya: the princess, the sheikh and the £ 500m divorce settlement
ಟನ್‌ ಇತಿಹಾಸದಲ್ಲೇ ದುಬಾರಿ ವಿಚ್ಛೇದನ; ದುಬೈ ದೊರೆಯಿಂದ 6ನೇ ಪತ್ನಿ ಹಯಾಗೆ 5,527 ಕೋಟಿ ರೂ. ಜೀವನಾಂಶ

By

Published : Dec 22, 2021, 1:35 PM IST

Updated : Dec 22, 2021, 1:54 PM IST

ಲಂಡನ್‌ :ದುಬೈ ದೊರೆ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರು ತಮ್ಮ ಆರನೇ ಪತ್ನಿ, ರಾಜಕುಮಾರಿ ಹಯಾ ಬಿಂಟ್‌ ಅಲ್ ಹುಸೇನ್‌ಗೆ ನೀಡಿದ್ದ ವಿಚ್ಛೇದನ ಇತ್ಯರ್ಥವಾಗಿದೆ. ಒಟ್ಟು 5,527 ಕೋಟಿ ರೂಪಾಯಿ ಜೀವನಾಂಶ ಪಾವತಿಸುವಂತೆ ಬ್ರಿಟನ್‌ ನ್ಯಾಯಾಲಯ ಆದೇಶ ನೀಡಿದೆ.

ಇದರಲ್ಲಿ 2,521 ಕೋಟಿ ರೂ.ಗಳನ್ನು ಪೂರ್ಣವಾಗಿ ಒಂದು ಮೊತ್ತದಲ್ಲಿ ಹಯಾಗೆ ಪಾವತಿಸಬೇಕು ಎಂದು ಹೇಳಿದೆ. ರಶೀದ್ ಅವರ ಪತ್ನಿಯರ ಪೈಕಿ ಹಯಾ ಕಿರಿಯವರಾಗಿದ್ದು, ದಂಪತಿಗೆ ಅಲ್ ಜಲಿಲಿಯಾ(14), ಜಯದ್ (9) ಎಂಬ ಇಬ್ಬರು ಮಕ್ಕಳಿದ್ದಾರೆ.

ಈ ಮಕ್ಕಳ ಶಿಕ್ಷಣಕ್ಕಾಗಿ 96 ಕೋಟಿ ರೂ.ನೀಡಬೇಕು. ಅವರು ಅಪ್ರಾಪ್ತರಾಗಿರುವುದರಿಂದ ಜವಾಬ್ದಾರಿ ನಿಭಾಯಿಸಲು 112 ಕೋಟಿ ರೂ. ವಾರ್ಷಿಕವಾಗಿ ನೀಡಬೇಕಿದೆ ಎಂದು ಕೋರ್ಟ್‌ ಹೇಳಿದೆ.

ಮಕ್ಕಳು ಪಡೆಯುವ ಒಟ್ಟು ಮೊತ್ತವು ಹೆಚ್ಚು ಅಥವಾ ಕಡಿಮೆ ಆಗಿರಬಹುದು. ಆದರೆ, ಅವರು ಎಷ್ಟು ಕಾಲ ಬದುಕುತ್ತಾರೆ ಹಾಗೂ ಅವರು ತಮ್ಮ ತಂದೆಯೊಂದಿಗೆ ರಾಜಿ ಮಾಡಿಕೊಳ್ಳುತ್ತಾರೆಯೇ ಎಂಬ ಅಂಶಗಳ ಮೇಲೆ ಪರಿಹಾರ ಅವಲಂಬಿತವಾಗಿದೆ.

ಇತರೆ ಅಗತ್ಯತೆಗಳಿಗೆ 2,907 ಕೋಟಿ ರೂ.ಗಳನ್ನು ಬ್ಯಾಂಕ್ ಗ್ಯಾರಂಟಿಯಾಗಿ ನೀಡಬೇಕಾಗುತ್ತದೆ ಎಂದೂ ನ್ಯಾಯಾಲಯ ಸ್ಪಷ್ಟಪಡಿಸಿದೆ. ಸದ್ಯ ಬ್ರಿಟನ್ ಇತಿಹಾಸದಲ್ಲೇ ಇದು ಅತ್ಯಂತ ದುಬಾರಿ ವಿಚ್ಛೇದನವಾಗಿದೆ ಎಂದು ಹೇಳಲಾಗಿದೆ.

72 ವರ್ಷದ ಶೇಖ್ ಮೊಹಮ್ಮದ್, ಯುನೈಟೆಡ್ ಅರಬ್ ಎಮಿರೇಟ್ಸ್‌ನ ಉಪಾಧ್ಯಕ್ಷ ಮತ್ತು ಪ್ರಧಾನಮಂತ್ರಿಯಾಗಿದ್ದಾರೆ. ಪ್ರಮುಖ ಕುದುರೆ ತಳಿಗಳನ್ನು ಹೊಂದಿರುವ ಅವರು ಗೊಡಾಲ್ಫಿನ್ ಕುದುರೆ-ರೇಸಿಂಗ್ ಸ್ಟೇಬಲ್​ನ ಸ್ಥಾಪಕರಾಗಿದ್ದಾರೆ. ರಾಣಿ ಎಲಿಜಬೆತ್ ರೊಂದಿಗೂ ಶೇಖ್‌ ಮೊಹಮ್ಮದ್‌ ಉತ್ತಮ ಸ್ನೇಹ ಸಂಬಂಧ ಹೊಂದಿದ್ದಾರೆ.

2019ರಲ್ಲಿ ಹಯಾ ಬ್ರಿಟನ್‌ಗೆ ಓಡಿ ಹೋಗಿ ಬ್ರಿಟಿಷ್ ನ್ಯಾಯಾಲಯಗಳ ಮೂಲಕ ತನ್ನ ಇಬ್ಬರು ಮಕ್ಕಳ ಪಾಲನೆಯನ್ನು ಕೋರಿದ್ದರು. ಜೋರ್ಡಾನ್‌ನ ಮಾಜಿ ದೊರೆ ಹುಸೇನ್ ಅವರ ಪುತ್ರಿ ರಾಜಕುಮಾರಿ ಹಯಾ ತನ್ನ ಪತಿಯಿಂದ ಭಯಭೀತರಾಗಿರುವುದಾಗಿ ಆರೋಪಿಸಿದ್ದರು.

ಇದನ್ನೂ ಓದಿ:ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಜೊತೆ ಪ್ರಧಾನಿ ಮೋದಿ ಫೋನ್​​ ಸಂಭಾಷಣೆ

Last Updated : Dec 22, 2021, 1:54 PM IST

ABOUT THE AUTHOR

...view details