ಕರ್ನಾಟಕ

karnataka

ETV Bharat / international

ಪಾಕಿಸ್ತಾನದ ಕ್ವೆಟ್ಟಾ ಮಸೀದಿ ಸ್ಫೋಟ: ಡಿಎಸ್ಪಿ ಸೇರಿ 10 ಮಂದಿ ದುರ್ಮರಣ - ಪಾಕಿಸ್ತಾನದ ಕ್ವೆಟ್ಟಾ ಮಸೀದಿ ಸ್ಫೋಟ

ಪಾಕಿಸ್ತಾನದ ಕ್ವೆಟ್ಟಾದ ಸ್ಯಾಟಲೈಟ್ ಟೌನ್ ಪ್ರದೇಶದಲ್ಲಿರುವ ಮಸೀದಿಯಲ್ಲಿ ಬಾಂಬ್​ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ ಸೇರಿ 10 ಮಂದಿ ಸಾವನ್ನಪ್ಪಿದ್ದಾರೆ. 20 ಜನರು ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

10 killed in Bomb Blast at Quetta mosque
ಪಾಕಿಸ್ತಾನದ ಕ್ವೆಟ್ಟಾ ಮಸೀದಿ ಸ್ಫೋಟ

By

Published : Jan 10, 2020, 9:02 PM IST

ಬಲೂಚಿಸ್ತಾನ್​:ಪಾಕಿಸ್ತಾನದ ಕ್ವೆಟ್ಟಾ ಮಸೀದಿಯಲ್ಲಿ ಬಾಂಬ್​ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ ಸೇರಿ 10 ಮಂದಿ ಸಾವನ್ನಪ್ಪಿದ್ದಾರೆ.

ಕ್ವೆಟ್ಟಾದ ಸ್ಯಾಟಲೈಟ್ ಟೌನ್ ಪ್ರದೇಶದಲ್ಲಿರುವ ಮಸೀದಿಯಲ್ಲಿ ಘಟನೆ ನಡೆದಿದ್ದು, 20 ಜನರು ಗಾಯಗೊಂಡಿದ್ದಾರೆ. 10 ಜನ ಮೃತಪಟ್ಟವರಲ್ಲಿ ಡಿಎಸ್ಪಿ ಅಮಾನುಲ್ಲಾ ಕೂಡ ಒಬ್ಬರು ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಸ್ಯಾಟಲೈಟ್ ಟೌನ್ ಪ್ರದೇಶದ ಬಳಿ ಇರುವ ಘೌಸಾಬಾದ್​ನಲ್ಲಿ ನಮಾಜ್​​ ನಡೆದ ಕೆಲವೇ ಕ್ಷಣಗಳಲ್ಲಿ ಸಂಭವಿಸಿದೆ ಎಂದು ಪಾಕಿಸ್ತಾನದ ಮಾಧ್ಯಮವೊಂದು ವರದಿ ಮಾಡಿದೆ. ಇನ್ನು ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರಕ್ಷಣಾ ಸಿಬ್ಬಂದಿಗಳು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.

ABOUT THE AUTHOR

...view details