ಕರ್ನಾಟಕ

karnataka

ETV Bharat / international

ಮಾದಕ ವ್ಯಸನಿಗಳಲ್ಲಿ ಕೆಲವರು ಸತ್ರೆ ಏನೂ ಆಗಲ್ಲ.. ಇತರರು ಗುಣಮುಖರಾಗ್ತಾರೆ: ತಾಲಿಬಾನ್ ಖಡಕ್​​ ಎಚ್ಚರಿಕೆ - ಮೌಲವಿ ಫಜುಲ್ಲಾ

ತಾಲಿಬಾನಿಗಳು ಡ್ರಗ್ಸ್​ ಸೇವಿಸುತ್ತಿದ್ದ ನೂರಾರು ಜನರನ್ನು ಬಲವಂತವಾಗಿ ಕರೆದೊಯ್ದು ಚಿಕಿತ್ಸೆ ಕೊಡಿಸುತ್ತಿದ್ದು, ನಿರಾಕರಿಸಿದವರನ್ನು ಹತ್ಯೆ ಮಾಡುತ್ತಿದ್ದಾರೆ.

Drug users
Drug users

By

Published : Oct 9, 2021, 10:45 PM IST

ಕಾಬೂಲ್(ಅಫ್ಘಾನಿಸ್ತಾನ): ಆಫ್ಘನ್​ ಅನ್ನು ತಾಲಿಬಾನಿಗಳು ವಶಪಡಿಸಿಕೊಂಡಾಗಿನಿಂದ ಒಂದಿಲ್ಲೊಂದು ವಿಚಿತ್ರ ಕ್ರಮ ಕೈಗೊಳ್ಳುವ ಮೂಲಕ ಜನರನ್ನು ಭೀತಿಗೆ ದೂಡುತ್ತಿದ್ದಾರೆ. ಇದೀಗ ತಾಲಿಬಾನ್ ಅಧಿಕಾರಿಗಳು ಮಾದಕ ವ್ಯಸನಿಗಳನ್ನು ಬಲವಂತವಾಗಿ ಚಿಕಿತ್ಸಾ ಕೇಂದ್ರಗಳಿಗೆ ಕರೆದೊಯ್ಯುತ್ತಿದ್ದಾರೆ.

ನಗರದ ಸೇತುವೆ ಕೆಳಗೆ, ಕೊಳಚೆ ನೀರಿನ ಹಳ್ಳಗಳಲ್ಲಿ ಕುಳಿತು ಹೆರಾಯಿನ್ ಸೇವಿಸುತ್ತಿದ್ದ ನೂರಾರು ಜನರನ್ನು ಬಲವಂತವಾಗಿ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗುತ್ತಿದೆ. ಒಂದು ಸಂಜೆ ಕೋಟೇಸಂಗಿ ಸೇತುವೆ ಕೆಳಗೆ ಓರ್ವ ವ್ಯಕ್ತಿ ಧೂಮಪಾನ ಮಾಡುತ್ತಿದ್ದ ವೇಳೆ ತಾಲಿಬಾನಿಗಳು ಆತನನ್ನು ಹೊಡೆದು ಹತ್ಯೆ ಮಾಡಿದ್ದರು ಎಂದು ಮಾದಕ ವ್ಯಸನಿಗಳಲ್ಲಿ ಒಬ್ಬರಾದ ನಿಜಾಮುದ್ದೀನ್ ಹೇಳಿದ್ದಾರೆ. ಅವರ ಮೃತದೇಹವನ್ನು ಬಟ್ಟೆಯಿಂದ ಮುಚ್ಚಿದರು. ಆದರೆ, ಉಗ್ರರು ಬೀದಿಗಳಲ್ಲಿ ಗಸ್ತು ತಿರುಗುತ್ತಿದ್ದಾಗ ಆತನ ಅಂತ್ಯಕ್ರಿಯೆ ಮಾಡಲು ಯಾರೂ ಧೈರ್ಯ ಮಾಡಲಿಲ್ಲ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗಸ್ತು ತಿರುಗುವ ತಂಡದ ಮುಖ್ಯಸ್ಥ ಮೌಲವಿ ಫಜುಲ್ಲಾ, ಮಾದಕ ವ್ಯಸನಿಗಳಲ್ಲಿ ಕೆಲವರು ಸತ್ತರೆ ಏನೂ ಆಗಲ್ಲ. ಇತರರು ಗುಣಮುಖರಾಗುತ್ತಾರೆ. ಅವರು ಗುಣಮುಖರಾದ ಬಳಿಕ ಡಿಸ್ಚಾರ್ಜ್ ಮಾಡಲಾಗುವುದು ಎಂದು ಹೇಳಿದ್ದಾರೆ.

ಕಳೆದ ವಾರ ನಡೆದ ದಾಳಿಯಲ್ಲಿ, 150 ಕ್ಕೂ ಹೆಚ್ಚು ಜನರನ್ನು ಜಿಲ್ಲಾ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರಿಂದ ವಶಪಡಿಸಿಕೊಳ್ಳಲಾಗಿದ್ದ ವಸ್ತುಗಳನ್ನು ಸುಡಲಾಯಿತು. ಮಧ್ಯರಾತ್ರಿಯ ಹೊತ್ತಿಗೆ, ಅವರನ್ನು ಚಿಕಿತ್ಸೆಗಾಗಿ ಕಾಬೂಲ್ ಅಂಚಿನಲ್ಲಿರುವ ಅವಿಸೆನ್ನಾ ವೈದ್ಯಕೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರಿಗೆ ಸ್ನಾನ ಮಾಡಿಸಿ, ತಲೆ ಬೋಳಿಸಲಾಯಿತು. ನಂತರ ವೈದ್ಯರು ಚಿಕಿತ್ಸೆ ನೀಡಲು ಪ್ರಾರಂಭಿಸಿದ್ರು ಎಂದು ಮಾಹಿತಿ ನೀಡಿದ್ದಾರೆ.

2003 ರಲ್ಲಿ ಅಮೆರಿಕ ಸೇನೆ ನಿರ್ಮಿಸಿದ್ದ ಮಿಲಿಟರಿ ನೆಲೆ ಕ್ಯಾಂಪ್ ಫಿನಿಕ್ಸ್​ ಅನ್ನು 2016 ರಲ್ಲಿ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಯಿತು. ಈಗ ಅದು ಕಾಬೂಲ್​ನ ಅತಿ ದೊಡ್ಡ ಆಸ್ಪತ್ರೆಯಾಗಿದ್ದು, ಏಕಕಾಲದಲ್ಲಿ 1 ಸಾವಿರ ಜನರು ಚಿಕಿತ್ಸೆ ಪಡೆಯಬಹುದಾಗಿದೆ.

ABOUT THE AUTHOR

...view details