ಕರ್ನಾಟಕ

karnataka

By

Published : Mar 23, 2019, 8:33 PM IST

ETV Bharat / international

ಉಗ್ರ ಮಸೂದ್ ಬಗೆಗಿನ ಚೀನಾ-ಪಾಕ್ ಮಾತುಕತೆ ಏನಾಯ್ತೋ ಏನೋ..

ಮಸೂದ್​ ಅಜರ್ ಬಗ್ಗೆ ಚೀನಾದೊಂದಿಗೆ ಮಾತುಕತೆ ನಡೆಸಿದ್ದಾಗಿ ಪಾಕ್ ವಿದೇಶಾಂಗ ಸಚಿವ ಶಾ ಮೊಹಮ್ಮದ್​ ಖುರೇಶಿ ಹೇಳಿದ್ದಾರೆ.

ಅಜರ್ ಬಗ್ಗೆ ಚೀನಾದೊಂದಿಗೆ ಮಾತುಕತೆ ನಡೆಸಿದ್ದಾಗಿ ಹೇಳಿದ ಪಾಕ್ ವಿದೇಶಾಂಗ ಸಚಿವ ಶಾ ಮೊಹಮ್ಮದ್​ ಕುರೇಶಿ

ಇಸ್ಲಾಮಾಬಾದ್​:ಜೈಷೆ ಮೊಹಮ್ಮದ್ ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್​ ಅಜರ್​ನನ್ನು ಜಾಗತಿಕ ಉಗ್ರ ಎಂದು ಘೋಷಿಸುವ ಕುರಿತಂತೆಚೀನಾದೊಂದಿಗೆ ಮಾತುಕತೆ ನಡೆಸಿರೋದಾಗಿ ಪಾಕ್‌ನ ವಿದೇಶಾಂಗ ಸಚಿವ ಶಾ ಮೊಹಮದ್ ಖುರೇಷಿ ಹೇಳಿದ್ದಾರೆ.

ಕಳೆದ ಗುರುವಾರ ಬೀಜಿಂಗ್​ನಿಂದ ಹಿಂದಿರುಗಿದ ಪಾಕ್ ವಿದೇಶಾಂಗ ಸಚಿವ ಶಾ ಮೊಹಮ್ಮದ್​ ಖುರೇಶಿ, ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಜತೆಗೆ ಈ ಬಗ್ಗೆ ಮಾತನಾಡಿದ್ದಾಗಿ ಹೇಳಿದ್ದಾರೆ.ಈ ವಿಚಾರದಲ್ಲಿ ಚೀನಾದ ಮೇಲೆ ಸಾಕಷ್ಟು ಒತ್ತಡಗಳಿವೆ. ಆದರೂ ಹೆಚ್ಚು ಮಾಹಿತಿ ಕಲೆಹಾಕಿದ ನಂತರವೇ ಸ್ಪಷ್ಟ ನಿರ್ಧಾರ ಕೈಗೊಳ್ಳುವ ಯೋಚನೆಯಲ್ಲಿದೆ ಚೀನಾ.

ಅಜರ್​ನನ್ನು ಜಾಗತಿಕ ಉಗ್ರ ಎಂದು ಘೋಷಿಸುವ ಕುರಿತಂತೆ ಅಮೆರಿಕ, ಇಂಗ್ಲೆಂಡ್​ ಹಾಗೂ ಚೀನಾ ಯಾವ ನಿಲುವು ತಾಳಿವೆ ಅನ್ನೋದರ ಬಗ್ಗೆ ಈ ಎಲ್ಲ ದೇಶಗಳ ಜತೆಗೂ ಈಗಾಗಲೇ ಮಾತುಕತೆ ನಡೆಸಿರುವುದಾಗಿ ಸಚಿವ ಖುರೇಷಿ ಹೇಳಿದ್ದಾರೆ. ಆದರೆ, ಈ ಬಗ್ಗೆ ಹೆಚ್ಚು ಮಾಹಿತಿ ಬಿಟ್ಟುಕೊಡದ ಅವರು, ಜಗತ್ತು ಏನನ್ನು ಬಯಸುತ್ತಿದೆ ಎಂಬ ಬಗ್ಗೆ ನಮಗೆ ಸ್ಪಷ್ಟ ಅರಿವಿದೆ ಎಂದಷ್ಟೇ ಹೇಳಿದ್ದಾರೆ.

'ನಾವು ಎಚ್ಚರವಾಗಿದ್ದೇವೆ. ಜಗತ್ತು ಏನು ಬಯಸುತ್ತಿದೆ ಎಂದು ನಮಗೆ ಗೊತ್ತಿದೆ. ನಾವೇನು ಮಾಡಬೇಕು, ನಮ್ಮ ಆಸಕ್ತಿ ಏನು, ಯೋಜನೆ ಏನು ಎಂಬುದೂ ನಮಗೆ ಗೊತ್ತು. ಪುಲ್ವಾಮಾ ದಾಳಿ ಸಂಬಂಧ ಭಾರತ ನೀಡಿರುವ ಕಡತಗಳನ್ನು ನಾವು ಪರಿಶೀಲನೆ ನಡೆಸುತ್ತಿದ್ದೇವೆ. ಇದರಲ್ಲಿ ನಾವೇನು ಕಂಡುಕೊಂಡೆವು ಎಂಬುದನ್ನು ಜಗತ್ತಿಗೆ ತಿಳಿಸುತ್ತೇವೆ' ಎಂದೂ ಶಾ ಖುರೇಷಿ ಹೇಳಿದ್ದಾರೆ.

ABOUT THE AUTHOR

...view details