ಬೀಜಿಂಗ್: ಚೀನಾದಲ್ಲಿ ಹೊಸದಾಗಿ ಪತ್ತೆಯಾಗಿರುವ ಮಹಾಮಾರಿ ಕೊರೊನಾ ವೈರಸ್ಗೆ ಬಲಿಯಾದವರ ಸಂಖ್ಯೆ 56ಕ್ಕೆ ಏರಿಕೆ ಕಂಡಿದೆ.
ವೈರಲ್ ಪೀಡಿತ ಪ್ರಕರಣಗಳು 1,975ಕ್ಕೆ ತಲುಪಿದೆ. ಅವುಗಳಲ್ಲಿ 324 ಮಂದಿಯ ಸ್ಥಿತಿ ಗಂಭೀರವಾಗಿದೆ. ಈವರೆಗೆ ಒಟ್ಟು 2,684 ಶಂಕಿತ ಪ್ರಕರಣಗಳು ವರದಿಯಾಗಿವೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.
ಹುಬೈ ಪ್ರಾಂತ್ಯದಲ್ಲೇ 1,052 ಪ್ರಕರಣಗಳು, ಚೀನಾದ ಅತಿ ದೊಡ್ಡ ನಗರವಾದ ಶಾಂಘೈನಲ್ಲಿ 40 ಕೇಸ್ ವರದಿಯಾಗಿವೆ. ಬೀಜಿಂಗ್ ಸೇರಿ ಇತರ ನಗರಗಳು ಹಾಗೂ ಪ್ರಾಂತ್ಯಗಳಲ್ಲಿ ಅತಿ ವೇಗವಾಗಿ ಸೋಂಕು ಹರಡುತ್ತಿದೆ. ಕೊರೊನಾ ವೈರಸ್ಗೆ ಹುಬೈ ಮೂಲದ ವೈದ್ಯರೇ ಬಲಿಯಾಗಿದ್ದಾರೆ. ಮಾರಕ ವೈರಸ್ಗೆ ಬಲಿಯಾದ ಮೊದಲ ವೈದ್ಯಕೀಯ ಸಿಬ್ಬಂದಿ ಎನ್ನಲಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್, ಅತ್ಯಂತ ಭಯಾನಯ ಪರಿಸ್ಥಿತಿಯನ್ನ ಚೀನಾ ಎದುರಿಸುತ್ತಿದೆ. ಕೊರೊನಾ ವೈರಸ್ ವಿರುದ್ಧದ ಈ ಯುದ್ಧದಲ್ಲಿ ದೇಶ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೊರೊನಾ ಪೀಡಿತರಿಗೆ ಚಿಕಿತ್ಸೆ ನೀಡಲು ಸದ್ಯ 1,000 ಹಾಸಿಗೆಗಳುಳ್ಳ ಆಸ್ಪತ್ರೆಯನ್ನು ನಿರ್ಮಾಣ ಮಾಡಲಾಗುತ್ತಿದೆ. 10 ದಿನಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಅಲ್ಲದೇ ಮುಂದಿನ 15 ದಿನಗಳಲ್ಲಿ ವುಹಾನ್‌ನಲ್ಲಿ 1,300 ಹಾಸಿಗೆಗಳುಳ್ಳ ತಾತ್ಕಾಲಿಕ ಆಸ್ಪತ್ರೆ ನಿರ್ಮಿಸುವುದಾಗಿ ಚೀನಾ ಸರ್ಕಾರ ಶನಿವಾರ ಪ್ರಕಟಿಸಿದೆ.