ಕರಾಚಿ: ಭಾರತದ ಮೋಸ್ಟ್ ವಾಂಟೆಡ್ ಭೂಗತ ಪಾತಕಿ, 1993 ಮುಂಬೈ ಸರಣಿ ಬಾಂಬ್ ಸ್ಫೋಟದ ರೂವಾರಿ ದಾವೂದ್ ಇಬ್ರಾಹಿಂ ಕರಾಚಿಯಲ್ಲಿರುವುದಾಗಿ ಅಲ್ಲಿನ ಸರ್ಕಾರ ಒಪ್ಪಿಕೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ಪಾಕ್ ವಿದೇಶಾಂಗ ಸಚಿವ ಮೆಹಮೂದ್ ಖುರೇಷಿ, ಉಗ್ರ ಸಂಘಟನೆ 88 ನಾಯಕರ ಲಿಸ್ಟ್ ರಿಲೀಸ್ ಮಾಡಿದ್ದು,ಅದರಲ್ಲಿ ಭೂಗತ ಪಾತಕಿಯ ಹೆಸರಿದೆ.
ಪಾಕಿಸ್ತಾನದಲ್ಲಿ 88 ಉಗ್ರ ಸಂಘಟನೆಗಳ ಮೇಲೆ ಮತ್ತಷ್ಟು ನಿರ್ಬಂಧಗಳನ್ನು ಹೇರಿ ಆದೇಶ ಹೊರಡಿಸಲಾಗಿದ್ದು, ಅದರ ಮುಖಂಡರಿಗೆ ಪತ್ರದ ಮೂಲಕ ತಿಳಿಸಲಾಗುತ್ತಿದೆ. ಇದರಲ್ಲಿ ಕರಾಚಿಯಲ್ಲಿರುವ ದಾವೂದ್ ಇಬ್ರಾಹಿಂಗೂ ಪತ್ರ ರವಾನೆಯಾಗಿದೆ. ಪಾಕ್ ಸರ್ಕಾರದಿಂದಲೇ ಅಲ್ಲಿನ ಉಗ್ರ ಸಂಘಟನೆಗಳಿಗೆ ಹಣ ರವಾನೆಯಾಗುತ್ತಿದ್ದು, ಇದೀಗ ಅದಕ್ಕೆ ಕಡಿವಾಣ ಹಾಕುವ ವಿಚಾರವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.