ನೇಪಾಳ:ಪ್ರಧಾನಿ ಕೆ.ಪಿ.ಶರ್ಮಾ ಒಲಿ ರಾಜೀನಾಮೆ ನೀಡುವಂತೆ ಪಕ್ಷದ ಸಹ ಅಧ್ಯಕ್ಷ ಪುಷ್ಪ ಕಮಲ್ ದಹಲ್ (ಪ್ರಚಂಡ) ತಮ್ಮ ಬೇಡಿಕೆ ಕೈಬಿಟ್ಟಿದ್ದರಿಂದ ನೇಪಾಳದ ಆಡಳಿತ ಪಕ್ಷ ಈಗ ವಿಭಜನೆಯಿಂದ ಪಾರಾಗಿದೆ.
ಎನ್‌ಸಿಪಿ ನಾಯಕರು ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಕಠ್ಮಂಡು ಪೋಸ್ಟ್ ವರದಿ ಮಾಡಿದೆ.

ಭಾರತದ ಭೂಪ್ರದೇಶವನ್ನು ತನ್ನದು ಎಂದು ಹೇಳಿ ನೇಪಾಳ ಹೊಸ ನಕ್ಷೆಯನ್ನು ತಯಾರಿಸಿ ವಿವಾದ ಸೃಷ್ಟಿಸಿದ ಬೆನ್ನಲ್ಲೇ ಪಕ್ಷದೊಳಗೆ ಒಲಿ ವಿರುದ್ಧ ಮಾತುಗಳು ಕೇಳಿಬರಲು ಪ್ರಾರಂಭವಾಗಿದ್ದವು.
ತನ್ನದೇ ಪಕ್ಷದ ಕೆಲವು ಸದಸ್ಯರ ಸಹಾಯದಿಂದ ಭಾರತ ನನ್ನನ್ನು ಅಧಿಕಾರದಿಂದ ಹೊರಹಾಕಲು ಪ್ರಯತ್ನಿಸುತ್ತಿದೆ ಎಂದು ಒಲಿ ಹೇಳಿದ ಬಳಿಕ ಭಾರತ ಹಾಗೂ ನೇಪಾಳದ ಸಂಬಂಧ ಇನ್ನಷ್ಟು ಹದಗೆಟ್ಟಿದೆ.