ಕರ್ನಾಟಕ

karnataka

ETV Bharat / international

ಕೋವಿಡ್​​ ಅನುಭವವು ಉಭಯ ದೇಶಗಳಿಗೂ ಪಾಠ ಕಲಿಸಿದೆ: ಜೈಶಂಕರ್

ಅರಬ್​ ದೇಶಗಳ ಪ್ರವಾಸದಲ್ಲಿರುವ ವಿದೇಶಾಂಗ ಸಚಿವ ಜೈಶಂಕರ್ ಯುಎಇ ಮಹಾರಾಜನೊಂದಿಗೆ ಮಾತುಕತೆ ನಡೆಸಿದ್ದಾರೆ. ಕೋವಿಡ್ ಬಳಿಕ ಭಾರತದ ಮೊದಲ ಪ್ರವಾಸ ಇದಾಗಿದ್ದು, ಹಲವು ವಿಚಾರಗಳ ಕುರಿತಂತೆ ಉಭಯ ರಾಷ್ಟ್ರಗಳು ಚರ್ಚೆಯಲ್ಲಿ ಭಾಗಿಯಾಗಿವೆ.

COVID era hold lessons for both of us  says Jaishanker
ಕೋವಿಡ್​​ನಿಂದಾಗಿ ಎರಡು ದೇಶಗಳೂ ಪಾಠ ಕಲಿತ್ತಿವೆ: ಜೈಶಂಕರ್

By

Published : Nov 27, 2020, 12:51 PM IST

ಅಬುಧಾಬಿ:2 ದಿನಗಳ ಅರಬ್ ಪ್ರವಾಸದಲ್ಲಿರುವ ವಿದೇಶಾಂಗ ಸಚಿವ ಎಸ್​. ಜೈಶಂಕರ್ ಯುಎಇ ರಾಜ ಶೇಖ್ ಅಬ್ದುಲ್ಲಾ ಬಿನ್ ಜಾಯೆದ್ ಬಿನ್ ಸುಲ್ತಾನ್ ಅಲ್ ನಹ್ಯಾನ್ ಜೊತೆ ಮಾತುಕತೆ ನಡೆಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಜೈಶಂಕರ್​​ ಎಫ್​ಎಂ ನಹ್ಯಾನ್​ ಅವರನ್ನು ಮತ್ತೆ ಭೇಟಿಯಾಗಲು ತುಂಬಾ ಸಂತೋಷವಾಯಿತು. ಬದಲಾಗುತ್ತಿರುವ ಜಗತ್ತಿನಲ್ಲಿ ಒಟ್ಟಾಗಿ ಕೆಲಸ ಮಾಡುವುದು ಮುಖ್ಯವಾಗಿದೆ. ಕೋವಿಡ್ ಅನುಭವಗಳು ಉಭಯ ದೇಶಗಳಿಗೆ ಪಾಠ ಕಲಿಸಿವೆ. ನಿಮ್ಮ ಸತ್ಕಾರಕ್ಕೆ ಆಭಾರಿಯಾಗಿದ್ದೇನೆ ಎಂದಿದ್ದಾರೆ.

ಈ ಭೇಟಿಯ ವೇಳೆ ಉಭಯ ದೇಶಗಳು, ತೈಲ, ವ್ಯಾಪಾರ, ರಫ್ತು, ಮೂಲಸೌಕರ್ಯ, ಆಹಾರ ಭದ್ರತೆ ಮತ್ತು ಆರ್ಥಿಕ ಸಹಕಾರದ ಕುರಿತು ಮಾತುಕತೆ ನಡೆಸಲಾಗಿದೆ.

ಇದನ್ನೂ ಓದಿ: ಅರಬ್ ದೇಶಗಳಿಗೆ 6 ದಿನದ ಪ್ರವಾಸ ಕೈಗೊಂಡ ಜೈಶಂಕರ್​: ಯುಎಇ ರಾಜನೊಂದಿಗೆ ಚರ್ಚೆ

ABOUT THE AUTHOR

...view details