ಕರ್ನಾಟಕ

karnataka

ETV Bharat / international

ಭಾರತದಲ್ಲಿರುವ ತನ್ನ ಪ್ರಜೆಗಳು, ವಿದ್ಯಾರ್ಥಿಗಳನ್ನು ಸ್ವದೇಶಕ್ಕೆ ಕರೆಯಿಸಲು ಚೀನಾ ನಿರ್ಧಾರ - ಚೀನಾ ಸರ್ಕಾರ

ಭಾರತದಲ್ಲಿರುವ ಚೀನಾದ ವಿದ್ಯಾರ್ಥಿಗಳು, ನಾಗರಿಕರು, ಪ್ರವಾಸಿಗಳು ಹಾಗೂ ಉದ್ಯಮಿಗಳನ್ನು ತನ್ನ ದೇಶಕ್ಕೆ ವಾಪಸ್‌ ಕರೆಸಿಕೊಳ್ಳಲು ನಿರ್ಧಾರಿಸಿದೆ. ಕೊರೊನಾ ವೈರಸ್‌ನಿಂದಾಗಿ ತಮ್ಮ ಪ್ರಜೆಗಳು ಸಂಕಷ್ಟದಲ್ಲಿರುವುದನ್ನ ಮನಗಂಡು ಈ ನಿರ್ಧಾರವನ್ನು ಕೈಗೂಂಡಿದೆ.

covid-19-effect-china-decides-to-evacuate-its-citizens-students-from-india
ಕೋವಿಡ್‌-19 ಎಫೆಕ್ಟ್‌; ಭಾರತದಲ್ಲಿರುವ ತನ್ನ ಪ್ರಜೆಗಳು, ವಿದ್ಯಾರ್ಥಿಗಳನ್ನು ಸ್ವದೇಶಕ್ಕೆ ಕರೆ ತರಲು ಚೀನಾ ನಿರ್ಧಾರ

By

Published : May 25, 2020, 11:42 PM IST

ಬೀಜಿಂಗ್(ಚೀನಾ): ದೇಶದಲ್ಲಿ ದಿನೇ ದಿನೆ ಕೋವಿಡ್​ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿರುವ ಚೀನಾದ ವಿದ್ಯಾರ್ಥಿಗಳು, ನಾಗರಿಕರು, ಪ್ರವಾಸಿಗಳು ಹಾಗೂ ಉದ್ಯಮಿಗಳನ್ನು ತನ್ನ ದೇಶಕ್ಕೆ ವಾಪಸ್‌ ಕರೆಸಿಕೊಳ್ಳಲು ನಿರ್ಧರಿಸಿದೆ. ಕೊರೊನಾ ವೈರಸ್‌ನಿಂದಾಗಿ ತಮ್ಮ ಪ್ರಜೆಗಳು ಸಂಕಷ್ಟದಲ್ಲಿರುವುದನ್ನ ಮನಗಂಡು ಈ ನಿರ್ಧಾರವನ್ನು ಕೈಗೂಂಡಿದೆ.

ಕೊರೊನಾ ವೈರಸ್‌ ಹರಡುವಿಕೆಯನ್ನು ತಡೆಗಟ್ಟಲು ಹೇರಲಾಗಿರುವ ಲಾಕ್‌ಡೌನ್‌ನಿಂದಾಗಿ ಚೀನಾದ ಕೆಲ ನಾಗರಿಕರು, ವಿದ್ಯಾರ್ಥಿಗಳ, ಪ್ರವಾಸಿಗರು ತಮ್ಮ ದೇಶಕ್ಕೆ ಹೋಗಲು ಸಾಧ್ಯವಾಗದೇ ಇಲ್ಲೇ ಉಳಿದಿದ್ದರು.

ಕೋವಿಡ್‌ ಕಾಣಿಸಿಕೊಂಡ ಬೆನ್ನಲ್ಲೇ ಕೇಂದ್ರ ಸರ್ಕಾರವೂ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನು ನಿಷೇಧಿಸಿತ್ತು.

For All Latest Updates

ABOUT THE AUTHOR

...view details