ಬೀಜಿಂಗ್: ಕೊರೊನಾ ಕೇಂದ್ರ ಬಿಂದು ಚೀನಾದಲ್ಲಿ ಕಳೆದ ಮೂರು ದಿನಗಳಿಂದ ಮತ್ತೆ ಕೋವಿಡ್-19 ರೌದ್ರನರ್ತನ ಮಾಡುತ್ತಿದೆ. ಕೇವಲ ಮೂರು ದಿನಗಳಲ್ಲಿ 1,566 ಜನರಿಗೆ ಸೋಂಕು ತಗುಲಿದ್ದು, ಇಂದು ಹೊಸದಾಗಿ 27 ಮಂದಿಗೆ ವೈರಸ್ ತಗುಲಿರುವುದು ಪತ್ತೆಯಾಗಿದೆ. ಜೊತೆಗೆ ಸಾವಿನ ಸಂಖ್ಯೆ 4,632 ಆಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಚೀನಾದಲ್ಲಿ ಮತ್ತೆ ಕೊರೊನಾ ಅಟ್ಟಹಾಸ: 3 ದಿನದಲ್ಲಿ 1,566 ಜನರಿಗೆ ಸೋಂಕು - China
ಚೀನಾದಲ್ಲಿ ಮೂರು ದಿನಗಳಲ್ಲಿ 1,566 ಜನರಿಗೆ ಸೋಂಕು ತಗುಲಿದ್ದು, ಸಾವಿನ ಸಂಖ್ಯೆ 4,632 ಆಗಿದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ಮಾಹಿತಿ ನೀಡಿದೆ.
ಚೀನಾದಲ್ಲಿ ಮತ್ತೆ ಕೊರೊನಾ ಅಟ್ಟಹಾಸ
ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗವು ಕೊರೊನಾ ವೈರಸ್ ಪೀಡಿತರ ದತ್ತಾಂಶಗಳನ್ನು ಪರಿಷ್ಕರಿಸಿ ಮಾಹಿತಿ ಬಿಡುಗಡೆ ಮಾಡಿದೆ. ಹೊಸ ಅಂಕಿ-ಅಂಶಗಳ ಪ್ರಕಾರ, ಶುಕ್ರವಾರದ ವೇಳೆಗೆ 82,719 ಪ್ರಕರಣಗಳು ದೃಢವಾಗಿವೆ. ಅದರಲ್ಲಿ 4,632 ಮಂದಿ ಸಾವನ್ನಪ್ಪಿದ್ದಾರೆ. ಇನ್ನು 1,058 ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, 77,029 ರೋಗಿಗಳನ್ನು ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಮಾಡಲಾಗಿದೆ.
ಇನ್ನು ಶುಕ್ರವಾರದ ವೇಳೆಗೆ ಹಾಂಗ್ಕಾಂಗ್ನಲ್ಲಿ 4 ಸಾವು ಸೇರಿದಂತೆ 1,021 ಪ್ರಕರಣ ಮತ್ತು ತೈವಾನ್ನಲ್ಲಿ 6 ಸಾವು ಸೇರಿ 395 ಪ್ರಕರಣಗಳು ವರದಿಯಾಗಿವೆ.