ಬೀಜಿಂಗ್(ಚೀನಾ) :ಕೋವಿಡ್ ವೈರಸ್‌ನ ಮೂಲ ಇನ್ನೂ ನಿಗೂಢವಾಗಿಯೇ ಉಳಿದಿದೆ. ಕೆಲವರು ಕೋವಿಡ್ ವೈರಸ್‌ನ ಚೀನಾ ಸೃಷ್ಟಿಸಿಲ್ಲ ಎಂದು ಹೇಳಿದ್ರೆ, ಮತ್ತೆ ಕೆಲವರು ವೈರಸ್‌ನ ಚೀನಾ ಜೈವಿಕ ಅಸ್ತ್ರವನ್ನಾಗಿ ಬಳಸಿಕೊಂಡಿದೆ ಎಂದು ಆರೋಪಿಸುತ್ತಿದ್ದು, ಈಗ ಮತ್ತೊಂದು ವಿಚಾರ ಬೆಳಕಿಗೆ ಬಂದಿದೆ.
ಚೀನಾ ತನ್ನ ದೇಶದಲ್ಲಿ ಕೊರೊನಾ ವೈರಸ್ ಕಾಣಿಸಿದೆ ಎಂದು ಘೋಷಿಸುವುದಕ್ಕೆ ಮೊದಲೇ ಕೊರೊನಾ ಸೋಂಕು ಹರಡಿತ್ತು ಎಂದು ವರದಿಯೊಂದು ಹೇಳಿದೆ. ಡಾಯ್ಚ್ ವೆಲ್ಲೆ(ಡಿಡಬ್ಲ್ಯೂ) ಈ ಕುರಿತು ಅಧ್ಯಯನ ಮಾಡಿದ್ದು, ಚೀನಾ ವರದಿ ಮಾಡಿದ್ದಕ್ಕಿಂತ ಎರಡು ತಿಂಗಳ ಹಿಂದೆಯೇ ವೈರಸ್ ಕಾಣಿಸಿದೆ ಎಂದು ಹೇಳಿದೆ.
ಬ್ರಿಟನ್ನ ಕೆಂಟ್ ವಿಶ್ವವಿದ್ಯಾಲಯದ ಸಂಶೋಧನೆಯೊಂದರ ತಂತ್ರಗಳನ್ನು ಅನುಸರಿಸಿ ಅಧ್ಯಯನ ನಡೆಸಿದಾಗ ಅಕ್ಟೋಬರ್ ಅಥವಾ ನವೆಂಬರ್ ಮಧ್ಯಭಾಗದಲ್ಲಿ ಚೀನಾದಲ್ಲಿ ಕೋವಿಡ್ ಕಾಣಿಸಿರಬಹುದೆಂದು ಅಂದಾಜು ಮಾಡಲಾಗಿದೆ.
ಪಿಎಲ್ಒಎಸ್ ಪ್ಯಾಥೋಜೆನ್ಸ್ ಜರ್ನಲ್ ಕೊರೊನಾ ವೈರಸ್ ಬಗ್ಗೆ ವಿಶ್ಲೇಷಣೆಯೊಂದನ್ನು ಪ್ರಕಟಿಸಿದೆ. ನವೆಂಬರ್ 17, 2019ರಂದೇ ಕೊರೊನಾ ವೈರಸ್ ಚೀನಾದಲ್ಲಿ ಪತ್ತೆಯಾಗಿತ್ತು ಎಂದು ವರದಿ ಮಾಡಿದೆ. ಆದರೆ, ಚೀನಾ ಡಿಸೆಂಬರ್ 2019ರಲ್ಲಿ ವೈರಸ್ ಕಾಣಿಸಿದೆ ಎಂದು ಅಧಿಕೃತವಾಗಿ ಹೇಳಿದೆ.
ಇದನ್ನೂ ಓದಿ:ನಮ್ಮ ಕ್ರೀಡಾಪಟುಗಳು ಹೃದಯಗಳನ್ನು ಗೆದ್ದು Tokyo Olympicನಲ್ಲಿ ಕೀರ್ತಿ ತರುವರು: ಮೋದಿ ಮನ್ ಕಿ ಬಾತ್
ವುಹಾನ್ ಮಾರುಕಟ್ಟೆಯಿಂದ ವೈರಸ್ ಹರಡಿದೆ ಎಂದು ಕೆಲವು ಸಂಶೋಧಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಮೆರಿಕ ಮೂಲದ ಆರ್ಎಎನ್ಡಿ(RAND)ಅಂಕಿ-ಅಂಶವೊಂದನ್ನು ಪ್ರಕಟಿಸಿದೆ. 2020ರ ಜನವರಿಯಲ್ಲಿ ಚೀನಾ ಪ್ರಕಟಿಸಿದ್ದ ಕೋವಿಡ್ ಪ್ರಕರಣಗಳಿಗಿಂತ 37 ಪಟ್ಟು ಹೆಚ್ಚು ಪ್ರಕರಣಗಳು ಚೀನಾದಲ್ಲಿ ಇದ್ದವು ಎಂದು ಮಾಹಿತಿ ನೀಡಿದೆ. ಕೋವಿಡ್-19 ಬಗ್ಗೆ ಸಾಕಷ್ಟು ಸಂಶೋಧನಾ ವರದಿಗಳು ಪ್ರಕಟವಾಗಿವೆ. ಈವರೆಗೆ ಕೋವಿಡ್ ಮೂಲ ನಿಗೂಢವಾಗಿ ಉಳಿದಿದೆ.