ಲಾಹೋರ್:ಮಹಿಳೆಗೆ ಬೆದರಿಕೆ, ಕಿರುಕುಳ ಮತ್ತು ಬ್ಲ್ಯಾಕ್ ಮೇಲ್ ಮಾಡಿದ್ದಾರೆಂಬ ಗಂಭೀರ ಆರೋಪದ ಮೇಲೆ ಪಾಕ್ ಕ್ರಿಕೆಟ್ ತಂಡದ ಕ್ಯಾಪ್ಟನ್ ಬಾಬರ್ ಆಜಮ್ ವಿರುದ್ಧ ದೂರು ದಾಖಲು ಮಾಡಲು ಪಾಕ್ ಕೋರ್ಟ್ ಸೂಚನೆ ನೀಡಿದೆ.
ನ್ಯಾಯಾಧೀಶ ಹಮೀದ್ ಹುಸೇನ್ ನಿಗದಿತ ಸಮಯದೊಳಗೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲು ಮಾಡುವಂತೆ ಆದೇಶ ನೀಡಿದ್ದಾರೆ. ಹಮೀಜಾ ಮುಕ್ತಾರ್ ಎಂಬ ಮಹಿಳೆಗೆ ಬ್ಲ್ಯಾಕ್ ಮೇಲ್ ಮತ್ತು ಕಿರುಕುಳ ನೀಡಿದ್ದಾರೆಂಬ ಆರೋಪ ಕೇಳಿ ಬಂದಿರುವ ಕಾರಣ ಪಾಕಿಸ್ತಾನ ಕೋರ್ಟ್ ಫೆಡರಲ್ ತನಿಖಾ ಸಂಸ್ಥೆಗೆ ಆದೇಶಿಸಿದೆ.
ಇದನ್ನೂ ಓದಿ: ಸೂರ್ಯಕುಮಾರ್ ವಿವಾದಿತ ವಿಕೆಟ್: ಟ್ರೋಲ್ಗೊಳಗಾದ ಅಂಪೈರ್ ತೀರ್ಪು
ಪಾಕ್ ಕ್ರಿಕೆಟಗ ತನ್ನನ್ನು ಮದುವೆಯಾಗುವ ನೆಪದಲ್ಲಿ ಲೈಂಗಿಕ ಸಂಬಂಧ ಹೊಂದಿದ್ದಾನೆ ಎಂದು ಹಮೀಜಾ ಮುಖ್ತಾರ್ ಈ ಹಿಂದೆ ಆರೋಪ ಮಾಡಿದ್ದರು. ವರದಿಗಳ ಪ್ರಕಾರ, ಮಹಿಳೆಗೆ ಬಂದಿರುವ ದೂರವಾಣಿ ಕರೆಗಳು ಬಾಬರ್ಗೆ ಸೇರಿದ್ದು ಎನ್ನಲಾಗಿದ್ದು, ಗರ್ಭಪಾತ ಮಾಡುವಂತೆ ಸಹ ಒತ್ತಾಯಿಸಿದ್ದಾನೆ ಎಂಬ ಮಾಹಿತಿ ದೊರೆತಿದೆ.
ಕಳೆದ 2020ರ ಡಿಸೆಂಬರ್ ತಿಂಗಳಲ್ಲಿ ಇದಕ್ಕೆ ಸಂಬಂಧಿಸಿದಂತೆ ಮಹಿಳೆ ದೂರು ದಾಖಲಿಸಿದ್ದು, ಕೇಸು ದಾಖಲಾಗಿರಲಿಲ್ಲ. ಇದೀಗ ಪಾಕಿಸ್ತಾನ ಕೋರ್ಟ್ ಈ ಆದೇಶ ನೀಡಿದ್ದು, ಪಾಕ್ ಕ್ಯಾಪ್ಟನ್ ಇಕ್ಕಟ್ಟಿಗೆ ಸಿಲುಕಿದ್ದಾರೆ.