ಕರ್ನಾಟಕ

karnataka

ETV Bharat / international

ಭಾರತ ಸೇರಿ ಮಿತ್ರ ರಾಷ್ಟ್ರಗಳ ಮೇಲೆ ಪರಮಾಣು ದಾಳಿ: ಪಾಕ್ ಸಚಿವರ ವಾರ್ನ್​ - ಪಾಕಿಸ್ತಾನ

ಪಾಕಿಸ್ತಾನ ಮೂಲದ ಪತ್ರಕರ್ತ ನೈಲಾ ಇನಾಯತ್ ಅವರು ವಿಡಿಯೋದ ಒಂದು ಭಾಗವನ್ನು ಟ್ವೀಟ್ ಮಾಡಿದ್ದಾರೆ. 'ಕಾಶ್ಮೀರದ ಮೇಲೆ ಭಾರತದೊಂದಿಗಿನ ಉದ್ವಿಗ್ನತೆ ಹೆಚ್ಚಾದರೆ ಪಾಕಿಸ್ತಾನವು ಯುದ್ಧದ ಮೊರೆ ಹೋಗಬೇಕಾಗುತ್ತದೆ. ಆದರಿಂದ, ಭಾರತವನ್ನು ಬೆಂಬಲಿಸುವ ದೇಶಗಳನ್ನು ನಮ್ಮ ಶತ್ರು ಎಂದು ಪರಿಗಣಿಸಲಾಗುವುದು. ಭಾರತ ಮತ್ತು ಅದನ್ನು ಬೆಂಬಲಿಸುವ ರಾಷ್ಟ್ರಗಳ ಮೇಲೆ ಕ್ಷಿಪಣಿ ದಾಳಿ ನಡೆಸಲಾಗುವುದು' ಎಂದು ಸಚಿವರೊಬ್ಬರು ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ.

ಸಾಂದರ್ಭಿಕ ಚಿತ್ರ

By

Published : Oct 30, 2019, 7:45 AM IST

ಇಸ್ಲಮಾಬಾದ್​: ಭಾರತವನ್ನು ಬೆಂಬಲಿಸುವ ದೇಶಗಳು ಕ್ಷಿಪಣಿ ದಾಳಿಗೆ ಗುರಿಯಾಗಲಿವೆ ಎಂದು ಪಾಕಿಸ್ತಾನ ಸಚಿವರೊಬ್ಬರು ಪರಮಾಣು ಯುದ್ಧದ ಬೆದರಿಕೆಯನ್ನು ಹಾಕಿದ್ದಾರೆ ಎನ್ನಲಾಗಿದೆ.

ಕಾಶ್ಮೀರ ಸಮಸ್ಯೆಯ ಬಗ್ಗೆ ಭಾರತವನ್ನು ಬೆಂಬಲಿಸುವ ಯಾವುದೇ ರಾಷ್ಟ್ರವು ಪಾಕಿಸ್ತಾನದ ಕ್ಷಿಪಣಿ ದಾಳಿಗೆ ಗುರಿಯಾಗಬೇಕಾಗುತ್ತದೆ. ಆ ದೇಶಗಳನ್ನು ಇಸ್ಲಾಮಾಬಾದ್‌ನ "ಶತ್ರು" ಎಂದು ಪರಿಗಣಿಸಲ್ಪಡುತ್ತದೆ ಎಂದು ಪಾಕ್​ ಸಚಿವ ಅಲಿ ಅಮೀನ್ ಗಂದಾಪುರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ವಿಷಯವನ್ನು ಅಲ್ಲಿನ -ಪತ್ರಕರ್ತರೊಬ್ಬರು ಟ್ವೀಟ್​ ಮಾಡಿ ಸಚಿವರ ವಿವಾದಾತ್ಮಕ ಹೇಳಿಕೆ ತುಣುಕನ್ನ ಅಪ್ಲೋಡ್​ ಮಾಡಿದ್ದಾರೆ.

ಕಾಶ್ಮೀರದ ಮೇಲೆ ಭಾರತದೊಂದಿಗಿನ ಉದ್ವಿಗ್ನತೆ ಹೆಚ್ಚಾದರೆ ಪಾಕಿಸ್ತಾನವು ಯುದ್ಧದ ಮೊರೆ ಹೋಗಬೇಕಾಗುತ್ತದೆ. ಆದರಿಂದ, ಭಾರತವನ್ನು ಬೆಂಬಲಿಸುವ ದೇಶಗಳನ್ನು ನಮ್ಮ ಶತ್ರು ಎಂದು ಪರಿಗಣಿಸಲಾಗುವುದು. ಭಾರತ ಮತ್ತು ಅದನ್ನು ಬೆಂಬಲಿಸುವ ರಾಷ್ಟ್ರಗಳ ಮೇಲೆ ಕ್ಷಿಪಣಿ ದಾಳಿ ನಡೆಸಲಾಗುವುದು ಎಂದರು.

ಪಾಕಿಸ್ತಾನ ಮೂಲದ ಪತ್ರಕರ್ತ ನೈಲಾ ಇನಾಯತ್ ಅವರು ವಿಡಿಯೋದ ಒಂದು ಭಾಗವನ್ನು ಟ್ವೀಟ್ ಮಾಡಿದ್ದು, ಇದರಲ್ಲಿ ಸಚಿವರು ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ.

ಉಭಯ ರಾಷ್ಟ್ರಗಳ ನಡುವೆ ಸಾಂಪ್ರದಾಯಿಕ ಯುದ್ಧ ಆರಂಭವಾದರೆ ಏನಾದರೂ ಆಗಬಹುದು. ನಮ್ಮ ದೇಶವು ತನ್ನ ನೆರೆಹೊರೆಯವರಿಗಿಂತ ಏಳು ಪಟ್ಟು ಚಿಕ್ಕದಾಗಿ. ಅದು ಏನು ಮಾಡುತ್ತದೆ ಶರಣಾಗಬಹುದು ಅಥವಾ ಅದರ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತದೆ ಎಂದು ಅವರು ಹೇಳಿದ್ದಾರೆ.

ABOUT THE AUTHOR

...view details