ನವದೆಹಲಿ: ಚೀನಾದಲ್ಲಿ ಕೊರೊನಾ ವೈರಸ್ ಹರಡಿದ ನಂತರ ಅಮೆರಿಕ ಇಲ್ಲಸಲ್ಲದ ಭೀತಿ ಸೃಷ್ಟಿ ಮಾಡುತ್ತಿದೆ. ನಮಗೆ ಯಾವುದೇ ಮಹತ್ವದ ಸಹಾಯ ಮಾಡಲು ವಿಫಲವಾಗಿದೆ ಎಂದು ಚೀನಾ ವಿದೇಶಾಂಗ ಸಚಿವಾಲಯ ಅಸಮಾಧಾನ ವ್ಯಕ್ತಪಡಿಸಿದೆ.
ಕೊರೊನಾ ಬಗ್ಗೆ ಇಲ್ಲದ ಭೀತಿ ಹುಟ್ಟಿಸುತ್ತಿರುವ ದೊಡ್ಡಣ್ಣ ನಿನ್ ನಡೆ ಸರಿನಾ.. - ಅಮೆರಿಕ ವಿರುದ್ಧ ಚೀನಾ ಅಸಮಾಧಾನ
ಕೊರೊನಾ ವೈರಸ್ ಬಗ್ಗೆ ಅಮೆರಿಕ ಇಲ್ಲದ ಭೀತಿ ಹರಡುತ್ತಿದೆ. ನಮಗೆ ಯಾವುದೇ ಮಹತ್ವದ ಸಹಾಯ ಮಾಡುತ್ತಿಲ್ಲ ಎಂದು ಚೀನಾ ವಿದೇಶಾಂಗ ಇಲಾಖೆ ಅಸಮಾಧಾನ ಹೊರ ಹಾಕಿದೆ.

ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ನಮ್ಮ ಪ್ರಯತ್ನವನ್ನ ಹಲವು ದೇಶಗಳು ಮೆಚ್ಚಿಕೊಂಡಿವೆ. ಚೀನಾದ ಗಡಿ ಮತ್ತು ನಮ್ಮ ದೇಶಕ್ಕೆ ಬರುವವರ ಮತ್ತು ಹೊರ ಹೋಗುವವರ ಬಗ್ಗೆ ಇತರೆ ದೇಶಗಳು ಕೈಗೊಂಡಿರುವ ಕ್ರಮವನ್ನ ನಾವು ಗೌರವಿಸುತ್ತೇವೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುನೈಂಗ್ ಹೇಳಿದ್ದಾರೆ.ಜಾಗತಿಕ ಸಮುದಾಯವು ಸಮಂಜಸ, ಶಾಂತ ಮತ್ತು ವಿಜ್ಞಾನ ಆಧಾರಿತ ಮಾಹಿತಿಗೆ ಮತ್ತು ಪರಿಸ್ಥಿತಿಗೆ ಪ್ರತಿಕ್ರಿಯೆ ನೀಡುತ್ತದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಚೀನಾದ ವುಹಾನ್ನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಕೊರೊನಾ ವೈರಸ್ಗೆ ಈವರೆಗೆ 361 ಜನ ಬಲಿಯಾಗಿದ್ದಾರೆ. 20ಕ್ಕೂ ಹೆಚ್ಚು ದೇಶಗಳಿಗೆ ಈ ವೈರಸ್ ಹರಡಿದೆ. ಚೀನಾ ಹೊರತಾಗಿ ಫಿಲಿಪೈನ್ಸ್ನಲ್ಲಿ ಕೊರೊನಾ ವೈರಸ್ಗೆ ವ್ಯಕ್ತಿಯೊಬ್ಬ ಬಲಿಯಾಗಿದ್ದಾನೆ ಎಂದು ತಿಳಿದು ಬಂದಿದೆ.