ಬೀಜಿಂಗ್: ಡ್ರ್ಯಾಗನ್ ನಾಡು ಚೀನಾವನ್ನು ಇನ್ನಿಲ್ಲದಂತೆ ಕಾಡುತ್ತಿರುವ ಕೊರೋನಾ ವೈರಸ್ನಿಂದಾಗಿ ಸದ್ಯ ಚೀನಾದಲ್ಲಿ ಸಾವನ್ನಪ್ಪಿದವರ ಸಂಖ್ಯೆ 811ಕ್ಕೆ ಏರಿಕೆಯಾಗಿದೆಯೆಂದು ರಾಷ್ಟ್ರೀಯ ಆರೋಗ್ಯ ಆಯೋಗವಿಂದು ಮಾಹಿತಿ ನೀಡಿದೆ.
ಚೀನಾ ಮೇಲೆ ಕೊರೋನಾ ಕೆಂಗಣ್ಣು... ಸಾವಿನ ಸಂಖ್ಯೆ 811ಕ್ಕೆ ಏರಿಕೆ - Coronavirus
ಕೊರೋನಾ ವೈರಸ್ನಿಂದಾಗಿ ಸದ್ಯ ಚೀನಾದಲ್ಲಿ ಸಾವನ್ನಪ್ಪಿದವರ ಸಂಖ್ಯೆ 811 ಕ್ಕೆ ಏರಿಕೆಯಾಗಿದೆಯೆಂದು ರಾಷ್ಟ್ರೀಯ ಆರೋಗ್ಯ ಆಯೋಗವಿಂದು ಮಾಹಿತಿ ನೀಡಿದೆ.
ಶನಿವಾರ 89 ಜನ ಸಾವಿಗೀಡಾಗಿದ್ದಾರೆ. 2,656 ಸೋಂಕು ಪೀಡಿತ ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಇಲ್ಲಿವರೆಗೆ ಕೊರೋನಾ ಸೋಂಕು ಇರುವುದನ್ನು ದೃಢಪಡಿಸಿರುವ ಒಟ್ಟು ಪ್ರಕರಣಗಳು 37,000 ಕ್ಕಿಂತ ಹೆಚ್ಚಾಗಿದೆ.
ರಾಷ್ಟ್ರೀಯ ಆಯೋಗದ ವರದಿಯಂತೆ ನಿನ್ನೆ ಮೃತಪಟ್ಟ 89 ಪ್ರಕರಣದಲ್ಲಿ, 81ಮಂದಿ ಹುಬೈ ಪ್ರಾಂತ್ಯದವರು, ಹೆನಾನ್‌ನಲ್ಲಿ ಇಬ್ಬರು, ಮತ್ತು ಹೆಬೈ, ಹೀಲಾಂಗ್‌ಜಿಯಾಂಗ್, ಅನ್ಹುಯಿ, ಶಾಂಡೊಂಗ್, ಹುನಾನ್ ಮತ್ತು ಗುವಾಂಗ್ಕ್ಸಿ ಝುವಾಂಗ್ನಲ್ಲಿ ತಲಾ ಒಬ್ಬೊಬ್ಬರು ಮೃತಪಟ್ಟ ವರದಿಯಾಗಿದೆ. ಅದಾಗ್ಯೂ ನಿನ್ನೆ 600 ಮಂದಿ ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.