ಕರ್ನಾಟಕ

karnataka

ETV Bharat / international

ಚೀನಾದಲ್ಲಿ 106 ಮಂದಿಯನ್ನು ಬಲಿ ತೆಗೆದುಕೊಂಡ ಕೊರೊನಾ ವೈರಸ್ - ಚೀನಾದಲ್ಲಿ106 ಮಂದಿಯನ್ನು ಬಲಿ ತೆಗೆದುಕೊಂಡ ಕೊರೊನಾ

ಕೊರೊನಾ ವೈರಸ್​ ಸಂಬಂಧ ಚೀನಾದ ಆರೋಗ್ಯಾಧಿಕಾರಿಗಳು ಸೋಮವಾರ 2,744 ಪ್ರಕರಣಗಳನ್ನು ದೃಢಪಡಿಸಿದ್ದು, ಇದಕ್ಕೆ ಬಲಿಯಾದವರ ಸಂಖ್ಯೆ 106 ಕ್ಕೆ ಏರಿಕೆಯಾಗಿದೆ.

Corona virus
ಕೊರೊನಾ ವೈರಸ್

By

Published : Jan 28, 2020, 8:33 AM IST

ಬೀಜಿಂಗ್​:ಮಹಾಮಾರಿ ಕೊರೊನಾ ವೈರಸ್​ಗೆ ಚೀನಾದಲ್ಲಿ ಬಲಿಯಾದವರ ಸಂಖ್ಯೆ 106 ಕ್ಕೆ ಏರಿದ್ದು, ಹೊಸದಾಗಿ 1300 ಪ್ರಕರಣಗಳು ಪತ್ತೆಯಾಗಿವೆ.

ಚೀನಾದ ಆರೋಗ್ಯಾಧಿಕಾರಿಗಳು ಸೋಮವಾರ 2,744 ಪ್ರಕರಣಗಳನ್ನು ದೃಢಪಡಿಸಿದ್ದು, ಇದರಲ್ಲಿ 461 ಮಂದಿಯ ಸ್ಥಿತಿ ಗಂಭೀರವಾಗಿದೆ. ಅಲ್ಲದೇ ಸುಮಾರು 6,000 ಜನರು ಸೋಂಕಿಗೆ ಒಳಗಾಗಿದ್ದಾರೆ ಎಂದು ಶಂಕಿಸಲಾಗಿದೆ.

ಶಾಲೆಗಳ ಪುನರಾರಂಭಕ್ಕೆ ವಿಳಂಬ:

ಲುನಾರ್​ ಹೊಸ ವರ್ಷದ ಪ್ರಯುಕ್ತ ಚೀನಾದ ಶಾಲಾ, ಕಾಲೇಜು, ವಿಶ್ವವಿದ್ಯಾಲಯಗಳಿಗೆ ರಜೆ ನೀಡಲಾಗಿತ್ತು. ಸೋಂಕು ಹರಡುವ ಭೀತಿಯಲ್ಲಿ ಚೀನಾದ ಹಲವು ನಗರಗಳಲ್ಲಿ ಸಾರ್ವಜನಿಕ ಹಾಗೂ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ಆದರೆ ಇದೀಗ ಕೊರೊನಾ ವೈರಸ್ ಪ್ರಕರಣ ಗಂಭಿರವಾಗುತ್ತಿದ್ದು, ಶಾಲೆಗಳನ್ನು ಪುನರಾರಂಭಿಸಲು ಚೀನಾ ಸರ್ಕಾರ ವಿಳಂಬ ಮಾಡುತ್ತಿದೆ.

ನೇಪಾಳದಲ್ಲಿ ಕೊರೊನಾ ವೈರಸ್ ​ಪ್ರಕರಣ ದೃಢಪಟ್ಟ ಬಳಿಕ ನೇಪಾಳದ ಗಡಿಯಲ್ಲಿರುವ ಭಾರತದ ಜಿಲ್ಲೆಗಳಲ್ಲಿ ಕೇಂದ್ರ ಸರ್ಕಾರ ಜಾಗರೂಕತೆ ಹೆಚ್ಚಿಸಿದೆ. ಪಶ್ಚಿಮ ಬಂಗಾಳದ ಪನಿಟಂಕಿ, ಉತ್ತರಾಖಂಡದ ಪಿಥೋರಾಗರ್​​ ಜಿಲ್ಲೆಯ ಜುಲಘಾಟ್ ಮತ್ತು ಜೌಲ್ಜಿಬಿ ಪ್ರದೇಶದಲ್ಲಿ ವೈದ್ಯಕೀಯ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ.

ಚೀನಾದಿಂದ ಭಾರತಕ್ಕೆ ಬರುತ್ತಿರುವವರನ್ನು ವಿಮಾನ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್​ ಪ್ರಕ್ರಿಯೆಗೆ ಒಳಪಡಿಸಲಾಗುತ್ತಿದೆ. ಈಗಾಗಲೇ ಚೀನಾದಿಂದ ಬಂದ ಹೈದರಾಬಾದ್​, ರಾಜಸ್ಥಾನ, ಬಿಹಾರ್​ ಹಾಗೂ ಕೋಲ್ಕತ್ತಾ ಮೂಲದ ವ್ಯಕ್ತಿಗಳಲ್ಲಿ ಶಂಕಿತ ಕೊರೊನಾ ವೈರಸ್ ಕಂಡುಬಂದಿರುವುದು ವರದಿಯಾಗಿದ್ದು, ರೋಗಿಗಳನ್ನು ಆಸ್ಪತ್ರೆಗಳಲ್ಲಿ ಪ್ರತ್ಯೇಕ ಚಿಕಿತ್ಸಾ ಕೊಠಡಿಯಲ್ಲಿರಿಸಲಾಗಿದೆ. ಆದರೆ ಭಾರತದಲ್ಲಿ ಯಾವುದೇ ಪ್ರಕರಣಗಳು ದೃಢಪಟ್ಟಿಲ್ಲ.

ABOUT THE AUTHOR

...view details