ತೈಪೆ (ತೈವಾನ್):ಚೀನಾ ವಾಯುಪಡೆಯ ಏಳು ಯುದ್ಧ ವಿಮಾನಗಳು ತೈವಾನ್ ದ್ವೀಪದ ವಾಯು ರಕ್ಷಣಾ ವಲಯದಲ್ಲಿ ಹಾರಾಟ ನಡೆಸಿದ್ದು, ತೈವಾನ್ - ಚೀನಾದ ಸಂಘರ್ಷ ಮುಂದುವರಿದಿದೆ. ಚೀನಾ ಸೇನೆ ಪೀಪಲ್ ಲಿಬರೇಶನ್ ಆರ್ಮಿಯ 28 ವಿಮಾನಗಳನ್ನು ADIZ ಗೆ ಕಳುಸಿದ ಎರಡು ದಿನಗಳ ನಂತರ ಈ ಸುದ್ದಿ ಹೊರ ಬಿದ್ದಿದೆ. ಈ ದಾಳಿಯಲ್ಲಿ ಎರಡು ಜೆ-16 ಯುದ್ಧ ವಿಮಾನಗಳು, 4 ಹಳೆ ಮಾದರಿಯ ಜೆ-7 ಯುದ್ಧ ವಿಮಾನಗಳು ಮತ್ತು ಒಂದು ವೈ-8 ವಿದ್ಯುತ್ ಯುದ್ಧ ವಿಮಾನಗಳು ಸೇರಿವೆ.
ತೈವಾನ್ ರಕ್ಷಣಾ ಸಚಿವಾಲಯದ ಪ್ರಕಾರ, ವಿಮಾನ ಚಟುವಟಿಕೆಗಳ ಮೇಲ್ವಿಚಾರಣೆ ನಡೆಸಲು ವಾಯು ಕ್ಷಿಪಣಿ ವ್ಯವಸ್ಥೆ ನಿಯೋಜಿಸಲು ದ್ವೀಪದ ವಾಯುಸೇನೆ ಹೇಳಿದೆ. ಒಂದೇ ತಿಂಗಳಲ್ಲಿ ಪೀಪಲ್ ಲಿಬರೇಶನ್ ಆರ್ಮಿಯ ಯುದ್ಧ ವಿಮಾನಗಳು ADIZ ಗೆ ಪ್ರವೇಶಿಸಿರುವುದು ಆರನೇ ಬಾರಿ ಎಂದು ಸಚಿವಾಲಯ ತಿಳಿಸಿದೆ.