ಕರ್ನಾಟಕ

karnataka

ETV Bharat / international

ಅಮೆರಿಕದ ಯುದ್ಧ ವಿಮಾನಕ್ಕೆ ಜೋಕಾಲಿ ಕಟ್ಟಿ ಆಟವಾಡಿದ ತಾಲಿಬಾನಿಗಳು- Video Viral - ಲಿಜಿಯಾನ್ ಝಾವೋ ಟ್ವಿಟರ್

ಅಫ್ಘಾನಿಸ್ತಾನದಲ್ಲಿ ಅಮೆರಿಕದ ಬಿಟ್ಟು ಹೋದ ವಿಮಾನದ ರೆಕ್ಕೆಗೆ ತಾಲಿಬಾನಿಗಳು ಜೋಕಾಲಿ ಕಟ್ಟಿ ಆಟವಾಡಿರುವ ವಿಡಿಯೋ ವೈರಲ್ ಆಗಿದೆ.

Chinese senior official mocks Washington, shares video of Taliban using US military plane as to
ಯುದ್ಧ ವಿಮಾನಕ್ಕೆ ಜೋಕಾಲಿ ಕಟ್ಟಿ ಆಟವಾಡಿದ ತಾಲಿಬಾನಿಗಳು

By

Published : Sep 12, 2021, 12:38 PM IST

ಬೀಜಿಂಗ್(ಚೀನಾ):ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ನ ಮಧ್ಯಂತರ ಸರ್ಕಾರ ರೂಪುಗೊಂಡಿದೆ. ಅಲ್ಲಿ ಅಮೆರಿಕ ಬಿಟ್ಟು ಹೋದ ಶಸ್ತ್ರಾಸ್ತ್ರಗಳು ಮತ್ತು ಯುದ್ಧ ವಿಮಾನಗಳು ತಾಲಿಬಾನಿಗಳ ಪಾಲಾಗಿವೆ. ಈ ವಿಮಾನಗಳನ್ನು ತಾಲಿಬಾನಿಗಳು ಹೇಗೆ ಬಳಸಿಕೊಳ್ಳುತ್ತಿದ್ದಾರೆ ಎಂಬ ವಿಚಾರಕ್ಕೆ ಚೀನಾದ ವಿದೇಶಾಂಗ ಇಲಾಖೆಯ ವಕ್ತಾರ ಲಿಜಿಯಾನ್ ಝಾವೋ ವಿಡಿಯೋವೊಂದನ್ನು ಟ್ವಿಟರ್​ನಲ್ಲಿ ಪೋಸ್ಟ್ ಮಾಡಿ, ಅಮೆರಿಕದ ಕಾಲೆಳೆದಿದ್ದಾರೆ.

ಹೌದು.. ಅಮೆರಿಕ ಬರೋಬ್ಬರಿ 20 ವರ್ಷಗಳ ಬಳಿಕ ಅಫ್ಘಾನಿಸ್ತಾನ ತೊರೆದ ನಂತರ ಅವರು ಬಿಟ್ಟೋಗಿರುವ, ಯುದ್ಧ ವಿಮಾನವೊಂದರ ರೆಕ್ಕೆಗೆ ಜೋಕಾಲಿ ಕಟ್ಟಿ ತಾಲಿಬಾನಿಗಳು ಆಟವಾಡುತ್ತಿರುವ ವಿಡಿಯೋವನ್ನು ಲಿಜಿಯಾನ್ ಝಾವೋ ಟ್ವಿಟರ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಸಾಮ್ರಾಜ್ಯಗಳು ಮತ್ತು ಯುದ್ಧ ಯಂತ್ರಗಳ ಸ್ಮಶಾನ. ತಾಲಿಬಾನಿಗಳು ಅಮೆರಿಕದ ವಿಮಾನವನ್ನು ಆಟದ ವಸ್ತುವಾಗಿ ಪರಿವರ್ತಿಸಿದ್ದಾರೆ ಎಂದು ವಿಡಿಯೋದ ಜೊತೆಗೆ ವ್ಯಂಗ್ಯವಾಡಿದ್ದಾರೆ.

ಅಫ್ಘಾನಿಸ್ತಾನದಿಂದ ಅಮೆರಿಕ ತನ್ನ ಸೇನೆಯನ್ನು ಹಿಂತೆಗೆದುಕೊಂಡ ನಂತರ ತಾಲಿಬಾನಿಗಳಿಗೆ ಚೀನಾ ಬೆಂಬಲ ನೀಡುತ್ತಿದೆ ಎಂಬುದು ಬಹಿರಂಗವಾಗಿದೆ. ಆದರೂ ಅಮೆರಿಕ ತನ್ನ ಸೇನೆಯನ್ನು ಅಫ್ಘಾನಿಸ್ತಾನದಿಂದ ದಿಢೀರ್ ಹಿಂತೆಗೆದುಕೊಂಡ ನೀತಿಯನ್ನು ಟೀಕಿಸಿದೆ.

ಇದನ್ನೂ ಓದಿ:'ಪಂಜ್​ಶೀರ್​ನ ನಾಯಕ ಅಹ್ಮದ್ ಮಸೂದ್ ಅಫ್ಘಾನಿಸ್ತಾನ ತೊರೆದಿಲ್ಲ'

ABOUT THE AUTHOR

...view details