ಬೀಜಿಂಗ್:ಹಾವುಗಳು ಹಾಗೂ ಬಾವಲಿಗಳ ಬಳಿಕ ಇದೀಗ ಚಿಪ್ಪು ಹಂದಿಗಳು ಚೀನಾ ಹಾಗೂ ಪ್ರಪಂಚದ ಇತರ ರಾಷ್ಟ್ರಗಳಲ್ಲಿ ಮಹಾಮಾರಿ ಕೊರೊನಾ ವೈರಸ್ ಹರಡಲು ಕಾರಣವಾಗಿರಬಹುದು ಎಂಬ ಸಂಶಯವನ್ನು ಚೀನಾದ ವಿಜ್ಞಾನಿಗಳು ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಚೀನಾ ಕೃಷಿ ವಿಶ್ವವಿದ್ಯಾಲಯದ ನೇತೃತ್ವದ ಹೊಸ ಅಧ್ಯಯನದ ಪ್ರಕಾರ, ಚಿಪ್ಪು ಹಂದಿಗಳಿಂದ ಬೇರ್ಪಟ್ಟ ವೈರಸ್ನ ತಳಿಯ ಜಿನೋಮ್ (ವಂಶವಾಹಿಗಳು ಹಾಗೂ ಡಿಎನ್ಎ), ಶೇ.99 ರಷ್ಟು ಕೊರೊನಾ ವೈರಸ್ ಸೋಂಕಿತ ಜನರನ್ನ ಹೋಲುತ್ತದೆ. ಹೀಗಾಗಿ ಚಿಪ್ಪು ಹಂದಿಗಳು ಸೋಂಕು ಹರಡುತ್ತದೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.