ಕರ್ನಾಟಕ

karnataka

ETV Bharat / international

ಶತ್ರುವಿನ ಶತ್ರು ಮಿತ್ರ.. ಭಾರತ ಹಣಿಯಲು ಪಾಕ್, ಚೀನಾ ತಂತ್ರ? - ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್

ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್ ಮಾತನಾಡಿ, ಚೀನಾ ಮತ್ತು ಪಾಕಿಸ್ತಾನವು ರಾಜಕೀಯ, ಆರ್ಥಿಕತೆ, ಮಿಲಿಟರಿ ಮತ್ತು ಭದ್ರತೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಉತ್ತಮ ಸ್ನೇಹ ಹೊಂದಿವೆ. ಉಭಯ ರಾಷ್ಟ್ರಗಳ ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯನ್ನು ಜಂಟಿಯಾಗಿ ಎತ್ತಿ ಹಿಡಿಯಲು ನಾವು ಬದ್ಧರಾಗಿದ್ದೇವೆ. ಡಿಸೆಂಬರ್ ಅಂತ್ಯದೊಳಗೆ ಜಂಟಿ ಸಮರಾಭ್ಯಾಸ ಮುಕ್ತಾಯಗೊಳ್ಳಲಿದೆ. ಅಲ್ಲದೇ ಈ ಬೆಳವಣಿಗೆ ಉಭಯ ರಾಷ್ಟ್ರಗಳು ‘ಮಿಲ್ ​ಟು ಮಿಲ್’ ಸಂಬಂಧಗಳನ್ನು ಅಭಿವೃದ್ಧಿಗೊಳಿಸುತ್ತದೆ ಎಂದಿದ್ದಾರೆ.

India
ಚೀನಾ ತಂತ್ರ?

By

Published : Dec 21, 2020, 6:29 PM IST

ಬೀಜಿಂಗ್​​:ಪಾಕಿಸ್ತಾನದ ಜತೆ ವಾಯುಪಡೆಯ ಸಮರಾಭ್ಯಾಸ ನಡೆಸುತ್ತಿರುವುದನ್ನ ಚೀನಾ ಸಮರ್ಥಿಸಿಕೊಂಡಿದೆ. ಭಾರತ ಇದನ್ನು ವಸ್ತುನಿಷ್ಠೆಯಿಂದ ನೋಡಬೇಕು ಎಂದು ನಿರ್ದೇಶಿಸಿದೆ. ಪಾಕಿಸ್ತಾನದ ದಕ್ಷಿಣ ಸಿಂಧ್ ಪ್ರಾಂತ್ಯದಲ್ಲಿ ಡಿಸೆಂಬರ್ ಎರಡನೇ ವಾರದಿಂದ ಚೀನಾ ಮತ್ತು ಪಾಕಿಸ್ತಾನದ ವಾಯುಪಡೆಗಳು ಪ್ರತಿ ವರ್ಷದಂತೆ ಸಮರಾಭ್ಯಾಸ ನಡೆಸುತ್ತಿವೆ.

ಇತ್ತೀಚೆಗಷ್ಟೇ ಚೀನಾದ ರಕ್ಷಣಾ ಸಚಿವ ಜನರಲ್ ವೀ ಫೆಂಗ್​​, ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು. ಬಳಿಕ ಉಭಯ ರಾಷ್ಟ್ರಗಳ ಈ ನಡೆ ಭಾರಿ ಕುತೂಹಲ ಮೂಡಿಸಿದೆ.

ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್ ಮಾತನಾಡಿ, ಚೀನಾ ಮತ್ತು ಪಾಕಿಸ್ತಾನವು ರಾಜಕೀಯ, ಆರ್ಥಿಕತೆ, ಮಿಲಿಟರಿ ಮತ್ತು ಭದ್ರತೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಉತ್ತಮ ಸ್ನೇಹ ಹೊಂದಿವೆ. ಉಭಯ ರಾಷ್ಟ್ರಗಳ ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯನ್ನು ಜಂಟಿಯಾಗಿ ಎತ್ತಿ ಹಿಡಿಯಲು ನಾವು ಬದ್ಧರಾಗಿದ್ದೇವೆ. ಡಿಸೆಂಬರ್ ಅಂತ್ಯದೊಳಗೆ ಜಂಟಿ ಸಮರಾಭ್ಯಾಸ ಮುಕ್ತಾಯಗೊಳ್ಳಲಿದೆ. ಅಲ್ಲದೇ ಈ ಬೆಳವಣಿಗೆ ಉಭಯ ರಾಷ್ಟ್ರಗಳು ‘ಮಿಲ್ ​ಟು ಮಿಲ್’ ಸಂಬಂಧಗಳನ್ನು ಅಭಿವೃದ್ಧಿಗೊಳಿಸುತ್ತದೆ ಎಂದಿದ್ದಾರೆ.

ಈ ಯುದ್ಧಾಭ್ಯಾಸ ಮೂರನೇ ರಾಷ್ಟ್ರವನ್ನು ಗುರಿಯಾಗಿಸಿ ನಡೆಸುತ್ತಿಲ್ಲ. ವಸ್ತುನಿಷ್ಠವಾಗಿ ಕಾಣಬೇಕೆಂದು ಪರೋಕ್ಷವಾಗಿ ಭಾರತಕ್ಕೆ ತಿರುಗೇಟು ನೀಡಿದ್ದಾರೆ.

ಪಾಕ್ ಸೇನೆಯ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಜ್ವಾ, ಶುಕ್ರವಾರ ವಾಯುನೆಲೆಗೆ ಭೇಟಿ ನೀಡಿ ಕಸರತ್ತುಗಳನ್ನು ವೀಕ್ಷಿಸಿದರು. ಈ ಬೆಳವಣಿಗೆ ಯುದ್ಧ ಸಾಧ್ಯತೆಗಳನ್ನು ಒತ್ತಿ ಹೇಳುತ್ತಿದೆ. ಪಾಕಿಸ್ತಾನಕ್ಕೆ ಚೀನಾ ಶಸ್ತ್ರಾಸ್ತ್ರಗಳನ್ನು ಪೂರೈಸುವುದರ ಮೂಲಕ ಮಿಲಿಟರಿ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿದೆ. ಅಲ್ಲದೇ ಇತ್ತೀಚೆಗೆ ನವೀಕರಿಸಲಾದ ಜೆಎಫ್ - 17 ಫೈಟರ್ ಜೆಟ್​ಗಳನ್ನು ಜಂಟಿಯಾಗಿ ಉತ್ಪಾದಿಸಲು ಪಾಕ್​ಗೆ ಚೀನಾ ಸಹಾಯ ಮಾಡುತ್ತಿದೆ.

ABOUT THE AUTHOR

...view details