ಕ್ಯಾನ್ಬೆರಾ :ಚೀನಾ ಮತ್ತು ಆಸ್ಟ್ರೇಲಿಯಾದ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾದಂತಿದೆ. ಚೀನಾದ ವಿದೇಶಾಂಗ ಸಚಿವಾಲಯ ಅಫ್ಘಾನಿಸ್ತಾನದಲ್ಲಿ ಆಸ್ಟ್ರೇಲಿಯಾದ ಸೈನಿಕ ಮಗುವಿನ ಕತ್ತಿಗೆ ಚಾಕು ಇಟ್ಟಿರುವ ಫೇಕ್ ಚಿತ್ರವೊಂದನ್ನು ಸೋಮವಾರ ಹಂಚಿಕೊಂಡಿದೆ.
ಇದನ್ನು ಖಂಡಿಸಿರುವ ಆಸ್ಟ್ರೇಲಿಯಾ ಇದು ಸರಿಯಾದ ಕ್ರಮವಲ್ಲ. ಈ ಚಿತ್ರವನ್ನು ಹಂಚಿಕೊಂಡಿರುವ ಚೀನಾ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ವರದಿ ಮಾಡಿದೆ.
ಇದನ್ನೂ ಓದಿ.. ಬೈಡನ್ ತಂಡಕ್ಕೆ ಮತ್ತೊಬ್ಬ ಭಾರತೀಯ ಮಹಿಳೆ ನೇಮಕ ಸಾಧ್ಯತೆ
ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್, ಸೋಮವಾರ ಬೆಳಗ್ಗೆ ತಮ್ಮ ಟ್ವಿಟರ್ನಲ್ಲಿ ಈ ಚಿತ್ರ ಹಂಚಿಕೊಂಡಿದ್ದಾರೆ. ಇದರಲ್ಲಿ ವಿಶೇಷ ಪಡೆಯ ಸೈನಿಕನೊಬ್ಬ ಅಪ್ಘಾನ್ ಮಗುವಿನ ಗಂಟಲನ್ನು ಚಾಕುವಿನಿಂದ ಕತ್ತರಿಸಿ, ತಲೆಯನ್ನು ಆಸ್ಟ್ರೇಲಿಯಾದ ಧ್ವಜದಲ್ಲಿ ಸುತ್ತಿಕೊಂಡಿದ್ದಾನೆ. "ನಾವು ನಿಮಗೆ ಶಾಂತಿ ತರಲು ಬರುತ್ತಿದ್ದೇವೆ ಭಯಪಡಬೇಡಿ" ಎಂದು ಚಿತ್ರ ಹೇಳುತ್ತದೆ.
ಆಸ್ಟ್ರೇಲಿಯಾದ ಸೈನಿಕರು, ಅಪ್ಘಾನ್ ನಾಗರಿಕರು ಮತ್ತು ಕೈದಿಗಳ ಹತ್ಯೆಯಿಂದ ಆಘಾತಕ್ಕೊಳಗಾಗಿದ್ದಾರೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್ ಟ್ವೀಟ್ ಮಾಡಿದ್ದಾರೆ.