ಕರ್ನಾಟಕ

karnataka

ETV Bharat / international

ಕೋವಿಡ್​ ಬಗ್ಗೆ ವರದಿ ಮಾಡಿದಕ್ಕಾಗಿ ಚೀನಾ ಪತ್ರಕರ್ತೆಗೆ 5 ವರ್ಷ ಜೈಲು ಶಿಕ್ಷೆ ಸಾಧ್ಯತೆ..! - ಚೀನಾದಲ್ಲಿ ಕೋವಿಡ್​ ವರದಿ ಮಾಡಿದ ಪತ್ರಕರ್ತೆಗೆ ಶಿಕ್ಷೆ

ಕೋವಿಡ್​ ಸೋಂಕು ಬಗ್ಗೆ ವರದಿ ಮಾಡಿದಕ್ಕಾಗಿ ಚೀನಾದ ಸ್ವತಂತ್ರ ಪರ್ತಕರ್ತೆಯೊಬ್ಬರು ಕಳೆದ 6 ತಿಂಗಳಿನಿಂದ ಜೈಲಿನಲ್ಲಿದ್ದಾರೆ. ಅವರ ವಿರುದ್ಧ ಸುಳ್ಳು ಸುದ್ದಿ ಹಬ್ಬಿದ ಆರೋಪ ಹೊರಿಸಲಾಗಿದೆ.

Chinese journalist faces imprisonment
ಚೀನಾದಲ್ಲಿ ಕೋವಿಡ್​ ವರದಿ ಮಾಡಿದ ಪತ್ರಕರ್ತೆಗೆ ಶಿಕ್ಷೆ

By

Published : Nov 17, 2020, 9:09 PM IST

ಲಂಡನ್ ​:ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಮತ್ತೊಂದು ಪ್ರಕರಣ ಚೀನಾದಲ್ಲಿ ನಡೆದಿದ್ದು, ವುಹಾನ್​ನಿಂದ ಕೋವಿಡ್​-19 ಬಗ್ಗೆ ವರದಿ ಮಾಡಿದಕ್ಕಾಗಿ ಕಳೆದ ಮೇ ತಿಂಗಳಿನಿಂದ ಬಂಧನಕ್ಕೊಳಗಾಗಿರುವ ಪತ್ರಕರ್ತೆಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆಯಿದೆ. ಆಕೆಯ ಮೇಲೆ ಸುಳ್ಳು ಸುದ್ದಿ ಹಬ್ಬಿದ ಆರೋಪ ಹೊರಿಸಲಾಗಿದೆ.

ಜಾಂಗ್ ಝಾನ್ ಜೈಲು ಶಿಕ್ಷೆಗೆ ಒಳಗಾದ ನಾಗರಿಕ ಪತ್ರಕರ್ತೆ, ಈಕೆಯ ವಿರುದ್ಧ ಗಲಭೆಯನ್ನು ಪ್ರೇರಿಪಿಸಿ ತೊಂದರೆ ಉಂಟು ಮಾಡುವ ಆರೋಪವೂ ಇದೆ. ಚೀನಾದಲ್ಲಿ ಸರ್ಕಾರದ ವಿರುದ್ಧ ಧ್ವನಿಯೆತ್ತುವವರು ಮತ್ತು ಹೋರಾಟಗಾರರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ, ಬಾಯಿ ಮುಚ್ಚಿಸುವ ಘಟನೆಗಳು ಆಗಾಗ ನಡೆಯುತ್ತಿರುತ್ತವೆ.

ಬರಹ, ವಿಡಿಯೋ ಮತ್ತು ಅಂತರ್ಜಾಲ ಮಾಧ್ಯಮಗಳಾದ ಯೂಟ್ಯೂಬ್, ವೀಚಾಟ್​, ಟ್ವಿಟ್ಟರ್ ಮೂಲಕ ಜಾಂಗ್ ಝಾನ್ ಸುಳ್ಳು ಮಾಹಿತಿ ರವಾನಿಸಿದ್ದಾರೆ ಎಂದು ಪ್ರಾಸಿಕ್ಯೂಶನ್​ ಹೇಳಿದೆ. ಅಲ್ಲದೆ, ಫ್ರೀ ಏರ್​ ರೇಡಿಯೋ ಮತ್ತು ಎಪೋಚ್ ಟೈಮ್ಸ್ ಸಂದರ್ಶನಗಳ ಮೂಲಕ ವುಹಾನ್​ನ ಕೋವಿಡ್​ ಸೋಂಕು ಬಗ್ಗೆ ದುರುದ್ದೇಶಪೂರಿತ ಮಾಹಿತಿ ನೀಡಿದ್ದಾರೆ ಎಂದು ದೂರಲಾಗಿದೆ.

ಜಾಂಗ್​ ಝಾನ್​ನಂತೆ ಇತರ ಸ್ವತಂತ್ರ ಪತ್ರಿಕಾ ವರದಿಗಾರರನ್ನು ಬಂಧಿಸುವುದು. ಸಾಮಾಜಿಕ ಮಾಧ್ಯಮಗಳನ್ನು ಕೇಂದ್ರವಾಗಿಸಿ ಅವರ ಕುಟುಂಬಗಳಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಚೈನೀಸ್ ಹ್ಯೂಮನ್ ರೈಟ್ಸ್ ಡಿಫೆಂಡರ್ಸ್(ಸಿಹೆಚ್‌ಆರ್‌ಡಿ ) ಹೇಳಿರುವುದಾಗಿ ದಿ ಗಾರ್ಡಿಯನ್ ವರದಿ ಮಾಡಿದೆ.

For All Latest Updates

TAGGED:

ABOUT THE AUTHOR

...view details