ಗ್ವಾಂಗ್ಜೌ (ಚೀನಾ):ತಮ್ಮ ಮಕ್ಕಳ ಚಲನ - ವಲನಗಳ ಕುರಿತು ಪೋಷಕರು ನಿಗಾ ಇರಿಸುವುದಕ್ಕಾಗಿ ಚೀನಾ ಸರ್ಕಾರ ಹೊಸ ಕ್ರಮ ಕೈಗೊಂಡಿದೆ. ಅದೇನೆಂದರೆ 60 ಪ್ರಾಥಮಿಕ ಶಾಲೆಯ ಒಟ್ಟು 17,000 ವಿದ್ಯಾರ್ಥಿಗಳಿಗೆ ಜಿಪಿಎಸ್ ಅಳವಡಿತ ಸ್ಮಾರ್ಟ್ವಾಚ್ಗಳನ್ನು ನೀಡಿದೆ.
ಈ ವಾಚ್ಗಳನ್ನು "ಸೇಫ್ ಕ್ಯಾಂಪಸ್ ಸ್ಮಾರ್ಟ್ವಾಚ್" ಎಂದು ಕರೆಯಲಾಗುತ್ತಿದೆ. ಚೀನಾದ ಹೊಸ ತಂತ್ರಜ್ಞಾನದ ಜಿಪಿಎಸ್ ಟ್ರ್ಯಾಕಿಂಗ್ ಸಿಸ್ಟಮ್ ಬೀಡೌ(BeiDou)ಗೆ ಈ ವಾಚ್ಗಳನ್ನು ಇವುಗಳನ್ನು ಲಿಂಕ್ ಮಾಡಲಾಗಿದ್ದು, ಅವುಗಳನ್ನು ಧರಿಸಿರುವ ಮಕ್ಕಳನ್ನು 10 ಮೀಟರ್ ಒಳಗೆ ಟ್ರ್ಯಾಕ್ ಮಾಡಬಹುದು.
ಈ ವಾಚ್ನ ಸಹಾಯದಿಂದ ತಮ್ಮ ಮಕ್ಕಳ ಚಲನ-ವಲನ ಹಾಗೂ ಮಕ್ಕಳಿರುವ ಸ್ಥಳವನ್ನು ಪೋಷಕರು ನೋಡಿಕೊಳ್ಳಬಹುದು. ಜೊತೆಗೆ ತುರ್ತು ಪರಿಸ್ಥಿತಿಯಿದ್ದರೆ, ಮಕ್ಕಳು ಪೋಷಕರಿಗೆ ಸೂಚನೆ ನೀಡಬಹುದು.
ನೀರಿನಿಂದಾಗುವ ಅಪಾಯವನ್ನು ತಡೆಯಲು ಈ ವಾಚ್ ಸಹಾಯಕ. ಮಕ್ಕಳು ನೀರಿನ ಮೂಲಗಳು ಅಥವಾ ಅಧಿಕ ನೀರಿರುವ ಪ್ರದೇಶಗಳ ಬಳಿ ಹೋದರೆ, ಈ ವಾಚ್ ಪೋಷಕರಿಗೆ ಎಚ್ಚರಿಕೆಯ ನೋಟಿಫಿಕೇಷನ್ ಕಳುಹಿಸುತ್ತದೆ.
ಇಂಟರ್ನ್ಯಾಷನಲ್ ಡಾಟಾ ಕಾರ್ಪೊರೇಷನ್ (IDC) ವರದಿ ಪ್ರಕಾರ, 2019ರಲ್ಲಿ ಈ ವಾಚ್ಗೆ ಭಾರೀ ಬೇಡಿಕೆಯಿದ್ದು, 222.9 ಮಿಲಿಯನ್ನಷ್ಟು ವಾಚ್ಗಳು ಗ್ರಾಹಕರನ್ನು ತಲುಪುವ ನಿರೀಕ್ಷೆಯಿದೆ.