ಬೀಜಿಂಗ್:ಭಾರತದಲ್ಲಿ ಯಥೇಚ್ಛವಾಗುತ್ತಿರುವ ಕೋವಿಡ್ -19 ಸೋಂಕಿನ ಪ್ರಮಾಣ ತಗ್ಗಿಸಲು ಚೀನಾ ಹೆಚ್ಚಿನ ಸಹಕಾರ ನೀಡಲಿದೆ. ಚೀನಾದಲ್ಲಿ ಉತ್ಪತ್ತಿಯಾಗುವ ಸಾಂಕ್ರಾಮಿಕ ವಿರೋಧಿ ವಸ್ತುಗಳು ಭಾರತಕ್ಕೆ ತ್ವರಿತವಾಗಿ ರವಾನೆಯಾಲಿವೆ ಎಂದು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಹೇಳಿದ್ದಾರೆ.
ಕೊರೊನಾ ವೈರಸ್ ಮಾನವಕುಲದ ಸಾಮಾನ್ಯ ಶತ್ರು. ಅಂತಾರಾಷ್ಟ್ರೀಯ ಸಮುದಾಯವು ಒಗ್ಗೂಡಿ ಸಮನ್ವಯದಿಂದ ಕೆಲಸ ಮಾಡುವುದು ಅಗತ್ಯವಿದೆ. ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಚೀನಾದ ಕಡೆಯವರು ಭಾರತ ಸರ್ಕಾರ ಮತ್ತು ಜನರನ್ನು ದೃಢವಾಗಿ ಬೆಂಬಲಿಸಲಿದೆ ಎಂದು ಅವರು ಬರೆದ ಪತ್ರದ ಪ್ರತಿಯೊಂದನ್ನು ಭಾರತದ ಚೀನಾದ ರಾಯಭಾರಿ ಸನ್ ವೀಡಾಂಗ್ ಟ್ವೀಟ್ ಮಾಡಿದ್ದಾರೆ.