ಕರ್ನಾಟಕ

karnataka

ETV Bharat / international

ಕೊರೊನಾದಿಂದ ಚೇತರಿಕೆ; ಚೀನಾ ವಸ್ತುಗಳ ರಫ್ತು ಹೆಚ್ಚಳ - China's exports surged 60.6 per cent

2020ರಲ್ಲಿ ಕುಸಿದಿದ್ದ ಚೀನಾ ರಫ್ತು ಈ ವರ್ಷದ ಮೊದಲೆರಡು ತಿಂಗಳಲ್ಲೇ ಶೇ.60.6 ರಷ್ಟು ಅಂದರೆ 468.9 ಶತಕೋಟಿ ಡಾಲರ್‌ಗೆ ಏರಿಕೆಯಾಗಿದೆ.

Chinese exports surge as global demand recovers from virus
ಕೊರೊನಾದಿಂದ ಚೇತರಿಸಿಕೊಳ್ಳುತ್ತಿದ್ದಂತೆಯೇ ಚೀನಾ ವಸ್ತುಗಳ ರಫ್ತು ಹೆಚ್ಚಳ

By

Published : Mar 7, 2021, 4:55 PM IST

ಬೀಜಿಂಗ್:ಕೋವಿಡ್​ ಸಾಂಕ್ರಾಮಿಕದಿಂದ ಜಗತ್ತು ಚೇತರಿಸಿಕೊಳ್ಳುತ್ತಿದ್ದು, ಕಾರ್ಖಾನೆಗಳು ತೆರೆದಿವೆ. ಹೀಗಾಗಿ ಮತ್ತೆ ಚೀನಾ ವಸ್ತುಗಳಿಗೆ ವಿದೇಶಿ ನೆಲಗಳಲ್ಲಿ ಬೇಡಿಕೆ ಕೂಡ ಹೆಚ್ಚಾಗಿದೆ.

ಪೂರ್ವ ಲಡಾಖ್​ನ ಗಾಲ್ವಾನ್​​ ಕಣಿವೆಯಲ್ಲಿ ಭಾರತ-ಚೀನಾ ಸೈನಿಕರ ನಡುವೆ ನಡೆದ ಸಂಘರ್ಷದ ಬಳಿಕ ಭಾರತವು 200ಕ್ಕೂ ಹೆಚ್ಚು ಚೀನೀ ಆ್ಯಪ್​ಗಳನ್ನು ಬ್ಯಾನ್​ ಮಾಡಿತ್ತು. 'ಮೇಡ್​ ಇನ್​ ಚೀನಾ' ವಸ್ತುಗಳಿಗೆ ಭಾರತ ಬಹಿಷ್ಕಾರ ಹಾಕಿದ್ದರಿಂದ 17 ಬಿಲಿಯನ್ ಯುಎಸ್​​ಡಿ ( ಅಂದಾಜು 1.29 ಲಕ್ಷ ಕೋಟಿ) ಮೌಲ್ಯದ ಚೀನಾ ರಫ್ತಿಗೆ ಹೊಡೆತ ಬಿದ್ದಿತ್ತು.

ಇದನ್ನೂ ಓದಿ:ಇ-ಸಿಗರೆಟ್‌ ಬಗ್ಗೆ WHO ನಿಲುವು ವಿನಾಶಕಾರಿ: ನ್ಯಾನ್ಸಿ ಲೌಕಾಸ್

ವೈರಸ್​ ಕಾರಣದಿಂದ ಅನೇಕ ರಾಷ್ಟ್ರಗಳು ಚೀನಾದೊಂದಿಗೆ ವ್ಯಾಪಾರ-ವ್ಯವಹಾರವನ್ನು ಸ್ಥಗಿತಗೊಳಿಸಿದ್ದವು. ಹೀಗಾಗಿ 2020ರಲ್ಲಿ ಕುಸಿದಿದ್ದ ಚೀನಾ ರಫ್ತು ಈ ವರ್ಷದ ಮೊದಲೆರಡು ತಿಂಗಳಲ್ಲೇ ಶೇ.60.6 ರಷ್ಟು ಅಂದರೆ 468.9 ಶತಕೋಟಿ ಡಾಲರ್‌ಗೆ ಏರಿಕೆಯಾಗಿದೆ.

ಈ ವರ್ಷ ಜನವರಿ ಮತ್ತು ಫೆಬ್ರವರಿಯಲ್ಲಿ ಚೀನಾದ ಜಾಗತಿಕ ವ್ಯಾಪಾರ ಹೆಚ್ಚುವರಿ 103.3 ಬಿಲಿಯನ್ ಡಾಲರ್ ಆಗಿದ್ದು, ಕಳೆದ ವರ್ಷದ ಇದೇ ಅವಧಿಯಲ್ಲಿ 7.1 ಬಿಲಿಯನ್ ಯುಎಸ್​​ಡಿ ಇಳಿಕೆಯಾಗಿತ್ತು.

ABOUT THE AUTHOR

...view details