ಜಿಯುಕ್ವಾನ್ (ಚೀನಾ):ಹೊಸದಾಗಿ ನಿರ್ಮಿಸುತ್ತಿರುವ ಬಾಹ್ಯಾಕಾಶ ನಿಲ್ದಾಣಕ್ಕೆ ಮೂವರು ಗಗನಯಾತ್ರಿಗಳನ್ನು ಹೊತ್ತ ಚೀನಾದ ರಾಕೆಟ್ ಇಂದು ಬೆಳಗ್ಗೆ ಯಶಸ್ವಿಯಾಗಿ ಉಡಾವಣೆಯಾಗಿದೆ. ಚೀನಾದ ಮೊದಲ ಮಾನವ ಸಹಿತ ಬಾಹ್ಯಾಕಾಶಕ್ಕೆ ಇಬ್ಬರು ಅನುಭವಿ ಹಾಗೂ ಮತ್ತೋರ್ವ ಹೊಸ ಗಗನಯಾತ್ರಿ ತಲುಪಿದ್ದಾರೆ. ನಿಯೆ ಹೈಶೆಂಗ್, ಲಿಯು ಬೋಮಿಂಗ್ ಮತ್ತು ಟ್ಯಾಂಗ್ ಹಾಂಗ್ಬೊ ಎಂಬ ಮೂವರು ಗಗನಯಾತ್ರಿಗಳನ್ನು ಹೊತ್ತ ಶೆನ್‌ಶಾವ್-12 ಆಕಾಶನೌಕೆ ಬೆಳಗ್ಗೆ ಸರಿ ಸುಮಾರು 9:22ರಕ್ಕೆ ಉಡಾವಣೆಗೊಂಡಿದೆ.
ಚೀನಾದ ಜಿಯುಕ್ವಾನ್ ಉಪಗ್ರಹ ಉಡಾವಣಾ ಕೇಂದ್ರದಿಂದ ಶೆನ್‌ಶಾವ್-12 ನೌಕೆ ಉಡಾವಣೆಯಾಗಿದ್ದು, ಮೂವರು ಗಗನಯಾತ್ರಿಗಳನ್ನು ಹೊತ್ತ ರಾಕೆಟ್ ನೂತನ ಬಾಹ್ಯಾಕಾಶ ನಿಲ್ದಾಣದತ್ತ ಸಾಗಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸಾಧಿಸುವ ಆಶಯದೊಂದಿಗೆ ಮೂವರು ಗಗನಯಾತ್ರಿಗಳನ್ನು ಹೊಸ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಲು ಸಜ್ಜಾಗಿರುವುದಾಗಿ ಚೀನಾ ಮ್ಯಾನ್ಡ್ ಸ್ಪೇಸ್ ಏಜೆನ್ಸಿ (ಸಿಎಂಎಸ್‌ಎ) ಬುಧವಾರ ತಿಳಿಸಿತ್ತು.
ಟಿಯಾಂಗಾಂಗ್ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳುವ ನಿಯೆ ಹೈಶೆಂಗ್, ಲಿಯು ಬೊಮಿಂಗ್ ಮತ್ತು ಟ್ಯಾಂಗ್ ಹಾಂಗ್ಬೊ ಎಂಬ ಮೂವರು ಮೂವರು ಗಗನ ಯಾತ್ರಿಗಳು ಮೂರು ತಿಂಗಳ ಕಾಲ ಹೊಸ ಬಾಹ್ಯಾಕಾಶ ನಿಲ್ದಾಣದಲ್ಲಿ ಉಳಿಯಲಿದ್ದಾರೆ‘ ಎಂದು ಸಿಎಮ್ಎಸ್ಎ ನಿರ್ದೇಶಕ ಸಹಾಯಕ ಜಿ ಕಿಮಿಂಗ್ ತಿಳಿಸಿದ್ದಾರೆ. ಬಾಹ್ಯಾಕಾಶ ಕೇಂದ್ರ ನಿರ್ಮಾಣದ ಸಮಯದಲ್ಲಿ ಇದು ಮೊದಲ ಮಾನವಸಹಿತ ಕಾರ್ಯಾಚರಣೆಯಾಗಿದೆ ಎಂದು ಅವರು ಹೇಳಿದ್ದಾರೆ.