ಕರ್ನಾಟಕ

karnataka

ETV Bharat / international

ಭಯಾನಕ ವೈರಸ್​ನಿಂದ ಬೆಚ್ಚಿಬಿದ್ದ ಚೀನಾ... ಈ ನಗರಗಳಲ್ಲಿ ಜನರಿಗೆ ನಿರ್ಬಂಧ - far from the epicentre of the health emergency.

ಅಲ್ಲಿನ ಜನರಿಗೆ ನಿರ್ಬಂಧ ಹೇರಲಾಗಿದೆ. ಪ್ರತಿ ಎರಡು ದಿನಗಳಿಗೊಮ್ಮೆ ಒಬ್ಬ ವ್ಯಕ್ತಿ ಮಾತ್ರ ಒಂದು ಮನೆಯಿಂದ ಹೊರಗೆ ಹೋಗಿ ಅಗತ್ಯ ವಸ್ತುಗಳನ್ನು ಖರೀದಿಸಿ ಬರಬಹುದು ಎಂದು ಅಲ್ಲಿನ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಭಯಾನಕ ವೈರಸ್​ನಿಂದ ಬೆಚ್ಚುತ್ತಿದೆ ಚೀನಾ,  Chinese cities locked down far from virus epicentre
ಭಯಾನಕ ವೈರಸ್​ನಿಂದ ಬೆಚ್ಚುತ್ತಿದೆ ಚೀನಾ

By

Published : Feb 4, 2020, 12:23 PM IST

ಬೀಜಿಂಗ್: ಚೀನಾದಲ್ಲಿ ಎಲ್ಲ ಕಡೆ ಭಯಾನಕ ಕೊರೊನಾ ವೈರಸ್​​ ಇರುವ ಹಿನ್ನೆಲೆ ಈ ನಗರಗಳಲ್ಲಿ ಜನರಿಗೆ ತೀವ್ರ ನಿರ್ಬಂಧ ಹೇರಲಾಗಿದೆ.

ಕೊರೊನಾ ಭೀತಿಯಿಂದ ಪೂರ್ವ ಪ್ರಾಂತ್ಯದ ಝೆಜಿಯಾಂಗ್‌ನ ನಗರಗಳಲ್ಲಿ ಅಲ್ಲಿನ ಅಧಿಕಾರಿಗಳು ಪೂರ್ವ ಸಿದ್ಧತಾ ಕ್ರಮಗಳನ್ನು ಕೈಗೊಂಡಿದ್ದು, ಅಲ್ಲಿನ ನಾಗರಿಕರಿಗೆ ಕೆಲವು ನಿರ್ಬಂಧಗಳನ್ನು ಹೇರಲಾಗಿದೆ.

ಚೀನಾದ ಟೆಕ್ ದೈತ್ಯ ಅಲಿಬಾಬಾ ಮುಖ್ಯ ಕಚೇರಿಯ ಪ್ರದೇಶವನ್ನು ಒಳಗೊಂಡಂತೆ ತೈಜೋವ್​ ನಗರ ಹಾಗೂ ಮೂರು ಹ್ಯಾಂಗ್​ಜೋ ಜಿಲ್ಲೆಗಳಲ್ಲಿ ಜನರಿಗೆ ನಿರ್ಬಂಧ ಹೇರಲಾಗಿದೆ. ಪ್ರತಿ ಎರಡು ದಿನಗಳಿಗೊಮ್ಮೆ ಒಬ್ಬ ವ್ಯಕ್ತಿ ಮಾತ್ರ ಮನೆಯಿಂದ ಹೊರಗೆ ಹೋಗಿ ಅಗತ್ಯ ವಸ್ತುಗಳನ್ನು ಖರೀದಿಸಿ ಬರಬಹುದು ಎಂದು ಅಲ್ಲಿನ ಅಧಿಕಾರಿಗಳು ಕಟ್ಟಪ್ಪಣೆ ಹೊರಡಿಸಿದ್ದಾರೆ. ಇದಲ್ಲದೇ, ಇಲ್ಲಿಗೆ ಸಂಚಾರ ಮಾಡುವ 95 ರೈಲುಗಳ ಸೇವೆಯನ್ನು ಕೂಡ ನಿರ್ಬಂಧಿಸಲಾಗಿದೆ.

ಇನ್ನು ವಸತಿ ಸಮುಚ್ಚಯದಲ್ಲಿ ವಾಸ ಮಾಡುವವರಿಗೆ ಎಚ್ಚರಿಕೆ ನೀಡಲಾಗಿದ್ದು, ಅವರು ಒಂದು ಭಾಗದಲ್ಲಿ ಮಾತ್ರ ಪ್ರವೇಶ ದ್ವಾರ ತೆರೆದಿರಬೇಕಂತೆ. ಅಲ್ಲದೇ ಹೊರಗೆ ಹೋಗುವಾಗ ಹಾಗೂ ಒಳಗೆ ಬರುವಾಗ ಕಡ್ಡಾಯಾಗಿ ಗುರುತಿನ ಪತ್ರವನ್ನು ತೋರಿಸಬೇಕಂತೆ. ಈ ಬಗ್ಗೆ ಅಲ್ಲಿನ ಸರ್ಕಾರ ಘೋಷಣೆ ಹೊರಡಿಸಿದೆ. ಇನ್ನು ಕೊರೊನಾ ಪೀಡಿತ ಪ್ರದೇಶದಿಂದ ಬಂದ ಜನರಿಗೆ ಮನೆಗಳನ್ನು ಬಾಡಿಗೆಗೆ ನೀಡುವುದನ್ನು ನಿಷೇದಿಸಲಾಗಿದೆ. ಹಾಗೂ ಅಲ್ಲಿನ ಜನರು ಮಾಸ್ಕ್​ ಹಾಕಿಕೊಳ್ಳುವುದು ತಪಾಸಣೆಗೆ ಒಳಗಾಗುವುದನ್ನು ಕಡ್ಡಾಯಗೊಳಿಸಲಾಗಿದೆ.

ಝೆಜಿಯಾಂಗ್‌ನಲ್ಲಿ 90 ಜನಸಂಖ್ಯೆ ಇದ್ದು, ಮುಂಜಾಗ್ರತಾ ದೃಷ್ಟಿಯಿಂದ ಸರ್ಕಾರ ಸೂಕ್ತ ವ್ಯವಸ್ಥೆಯನ್ನು ಮಾಡಿಕೊಂಡಿದೆ.

ABOUT THE AUTHOR

...view details