ನವದೆಹಲಿ:ಭಾರತದ ನೆರೆಯ ವೈರಿ ರಾಷ್ಟ್ರ ಪಾಕಿಸ್ತಾನ ಜೊತೆಗೂಡಿ ಚೀನಾ ತನ್ನ ನರಿ ಬುದ್ದಿಯನ್ನು ಮುಂದುವರಿಸಿದ್ದು, ಉಭಯ ರಾಷ್ಟ್ರಗಳು ಗಡಿ ವಿಚಾರ ಮುಂದಿಟ್ಟುಕೊಂಡು ಭಾರತ ವಿರುದ್ಧ ಮತ್ಸರ ಸಾಧಿಸುತ್ತಿವೆ.
ಭಾರತದ ವಿರುದ್ಧದ ಹೋರಾಟಕ್ಕೆ ಪಾಕ್ ಸೇನೆಯ ಆತ್ಮಸ್ಥೈರ್ಯವನ್ನು ಹೆಚ್ಚಿಸಲು ಮುಂದಾಗಿರುವ ಚೀನಾ, ಬಾಹ್ಯಕಾಶ ತಂತ್ರಜ್ಞಾನದ ನೆರವು ನೀಡಲು ಮುಂದಾಗಿದೆ. 'ಮಿಲಿಟರಿಗ ಗ್ರೇಡ್' ಸಿಗ್ನಲ್‌ಗಳ ಮೂಲಕ ಹೈ ರೆಸೆಲ್ಯೂಷನ್ ಚಿತ್ರಗಳನ್ನು ಚೀನಾ ಪಾಕಿಸ್ತಾನನಕ್ಕೆ ನೀಡಲಿದೆ.
ಹೈ ರೆಸೆಲೂಷನ್ ಚಿತ್ರಗಳನ್ನು ನೀಡುವುದರಿಂದ ಅತ್ಯಂತ ನಿಖರವಾದ ಗುರಿಯನ್ನು ಸುಲಭದರಲ್ಲಿ ಪತ್ತೆ ಮಾಡಬಹುದು. ಸಮನ್ವಯತೆಯನ್ನು ನಿಖರತೆಯಿಂದ ಸಾಧಿಸಲು ಚೀನಾದ ಸ್ಯಾಟ್‌ಲೈಟ್ ಸಿಸ್ಟಂ 'ಬಿಡಾವ್' ಪಾಕ್ ಜೊತೆ ಕೈ ಜೋಡಿಸಲಿದೆ. ಇದರಿಂದ ಯುದ್ಧೋಪಕರಣಗಳ ಸ್ಥಳದಿಂದಲೇ ಅತ್ಯಂತ ದೂರದ ವೈರಿಯ ಪಡೆಯ ನೆಲೆಯ ಮೇಲೆ ಗುರಿ ಇಡಬಹುದು.
ಬಾಹ್ಯಕಾಶ ಕ್ಷೇತ್ರದಲ್ಲಿ ಪಾಕಿಸ್ತಾನ ಯಾವುದೇ ಸಾಧನೆ ಮಾಡಿದಿದ್ದರೂ ಚೀನಾ ಸಹಕಾರ ನೀಡುತ್ತಿದೆ. ನಾಗರಿಕ ಬಾಹ್ಯಕಾಶ ತಂತ್ರಜ್ಞಾನದಲ್ಲಿ ಪಾಕಿಸ್ತಾನದ ಮಿಲಿಟರಿ ಗ್ರೇಡ್ ಸಿಗ್ನಲ್ಸ್ ನೀಡಲು ಚೀನಾ ಮುಂದಾಗಿದೆ. ಮುಂದಿನ ದಿನಗಳಲ್ಲಿ ಸೇನೆಗೆ ಸಂಬಂಧಿಸಿದ ಮತ್ತಷ್ಟು ಮಾಹಿತಿಗಳನ್ನು ಉಭಯ ದೇಶಗಳು ಹಂಚಿಕೊಳ್ಳುವ ಸಾಧ್ಯತೆ ಇದೆ ಎಂದು ಮನೋಹರ್ ಪರಿಕ್ಕರ್ ಇನ್ಸ್‌ಟಿಟ್ಯೂಟ್ ಫಾರ್ ಡಿಫೆನ್ಸ್ ಸ್ಟಡೀಸ್ ಅನಾಲಿಸೀಸ್ (ಎಂಪಿಐಡಿಎಸ್ಎ) ತಜ್ಞ ಅಜಯ್ ಲೇಲೆ ತಿಳಿಸಿದ್ದಾರೆ.