ಕರ್ನಾಟಕ

karnataka

ETV Bharat / international

ಚೀನಾದಲ್ಲಿ ಸತತ 5ನೇ ವರ್ಷವೂ ಜನನ ಪ್ರಮಾಣ ಕುಸಿತ: 2021ರಲ್ಲಿ ಹುಟ್ಟಿದ್ದು ಕೇವಲ 4.80 ಲಕ್ಷ ಮಂದಿ! - ಚೀನಾ ಜನಸಂಖ್ಯೆ ತೀವ್ರ ಇಳಿಕೆ

2021ರಲ್ಲಿ ಆಗಿರುವ ಜನನ ಪ್ರಮಾಣ 1.06 ಕೋಟಿ. 2020ರಲ್ಲಿ ಅದು 1.20 ಕೋಟಿಯಾಗಿತ್ತು ಎಂದು ಹಾಂಕಾಂಗ್‌ ಮೂಲದ ಸೌತ್‌ ಚೀನಾ ಮಾರ್ನಿಂಗ್‌ ಪೋಸ್ಟ್‌ ವರದಿ ಮಾಡಿದೆ.

China
ಚೀನಾ

By

Published : Jan 17, 2022, 8:48 PM IST

ಬೀಜಿಂಗ್​(ಚೀನಾ):ವಿಶ್ವಕ್ಕೆ ಕೊರೊನಾ ಪ್ರಸಾದಿಸಿದ ಕುತಂತ್ರಿ ಚೀನಾದಲ್ಲಿ ಜನಸಂಖ್ಯೆ ಪ್ರಮಾಣ ತೀವ್ರತರದಲ್ಲಿ ಕುಸಿತ ಕಂಡಿದೆ.

2021ರಲ್ಲಿ ಕೇವಲ 4.80 ಲಕ್ಷ ಜನಸಂಖ್ಯೆ ಹೆಚ್ಚಳವಾಗಿ 141.26 ಕೋಟಿಗೆ ತಲುಪಿದೆ. ಈ ಮೂಲಕ ಸತತ ಐದನೇ ವರ್ಷವೂ ಜನನ ಪ್ರಮಾಣದಲ್ಲಿ ಭಾರೀ ಕುಂಠಿತವಾಗಿದೆ. ಇದು ದೇಶದ ಆರ್ಥಿಕ ಬೆಳವಣಿಗೆ ಮೇಲೆ ಭಾರೀ ಹೊಡೆತ ಬೀಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

2020 ರಲ್ಲಿ ಚೀನಾದ ಜನಸಂಖ್ಯೆ 141.20 ಕೋಟಿಯಷ್ಟಿತ್ತು. ಇದು 2021 ರಲ್ಲಿ ಆ ಸಂಖ್ಯೆ 141.26 ಕೋಟಿಯಷ್ಟು ಮಾತ್ರ ಆಗಿದೆ. ಹೀಗಾಗಿ ಇಡೀ ವರ್ಷದಲ್ಲಿ 4.80 ಲಕ್ಷ ಜನಸಂಖ್ಯೆ ಮಾತ್ರ ಹೆಚ್ಚಳವಾಗಿದೆ ಎಂದು ರಾಷ್ಟ್ರೀಯ ಅಂಕಿಅಂಶ ಬ್ಯೂರೋ(ಎನ್​ಬಿಎಸ್​) ತಿಳಿಸಿದೆ.

2021ರಲ್ಲಿ ಆಗಿರುವ ಜನನ ಪ್ರಮಾಣ 1.06 ಕೋಟಿ. 2020ರಲ್ಲಿ ಅದು 1.20 ಕೋಟಿಯಾಗಿತ್ತು ಎಂದು ಹಾಂಕಾಂಗ್‌ ಮೂಲದ ಸೌತ್‌ ಚೀನಾ ಮಾರ್ನಿಂಗ್‌ ಪೋಸ್ಟ್‌ ವರದಿ ಮಾಡಿದೆ.

ಸಾವಿರ ಜನರಿಗೆ 9 ಮಕ್ಕಳು ಜನನ!

ಚೀನಾದ ಮೂರನೇ ಅತಿ ಹೆಚ್ಚು ಜನಸಂಖ್ಯೆಯುಳ್ಳ ಪ್ರದೇಶವಾದ ಹೆನಾನ್ ಪ್ರಾಂತ್ಯದಲ್ಲಿ ನವಜಾತ ಶಿಶುಗಳ ಸಂಖ್ಯೆ 2020 ರಲ್ಲಿ 9.20 ಲಕ್ಷದಷ್ಟು ಇಳಿಕೆ ಕಂಡಿದೆ. 2019 ಕ್ಕೆ ಹೋಲಿಕೆ ಮಾಡಿದಲ್ಲಿ ಅದು 23.3 ರಷ್ಟು ಕಡಿಮೆ ಆಗಿದೆ. ಅಂದರೆ, 1 ಸಾವಿರ ಜನರಿಗೆ 9 ಮಕ್ಕಳು ಮಾತ್ರ ಜನನವಾಗಿದೆ.

ಜನನ ಪ್ರಮಾಣದಲ್ಲಿ ಗುರುತರ ಕುಸಿತ ತಡೆಗಟ್ಟಲು ಚೀನಾದ ಹಲವು ಪ್ರಾಂತ್ಯಗಳಲ್ಲಿ ಒಂದು ಕುಟುಂಬ 3 ಮಕ್ಕಳನ್ನು ಹೊಂದಲು ಪ್ರೇರೇಪಿಸುತ್ತಿದೆ. ಅಲ್ಲದೇ, ಇದಕ್ಕೆ ಬೆಂಬಲ ನೀಡಲು ಪೋಷಕರ ರಜೆ, ಹೆರಿಗೆ ರಜೆ, ಮದುವೆ ರಜೆ ಮತ್ತು ಪಿತೃತ್ವ ರಜೆಗಳಂತಹ ಕ್ರಮಗಳನ್ನು ಜಾರಿ ಮಾಡಲಾಗಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

ಈ ಹಿಂದೆ ಜಾರಿಯಿದ್ದ 'ಒಂದು ಕುಟುಂಬ ಒಂದು ಮಗು' ನೀತಿಯನ್ನು 2016 ರಲ್ಲಿ ರದ್ದು ಮಾಡಿ ಎರಡು ಮಗು ಹೊಂದಲು ಚೀನಾ ಸರ್ಕಾರ ಅವಕಾಶ ಮಾಡಿಕೊಟ್ಟಿತ್ತು. ಇದೀಗ ಮೂರು ಮಗು ಹೊಂದಲೂ ಅವಕಾಶ ನೀಡಲಾಗಿದೆ.

ಇದನ್ನೂ ಓದಿ:60 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಕಡ್ಡಾಯ.. ವ್ಯಾಕ್ಸಿನ್​ ಪಡೆಯದಿದ್ದರೆ ಪ್ರತಿ ತಿಂಗಳು ಕಟ್ಟಬೇಕು ದಂಡ!

ABOUT THE AUTHOR

...view details