ಹಾಂಕಾಂಗ್ :ಪೂರ್ವ ಲಡಾಖ್‌ನ ಪ್ರಮುಖ ಪ್ರದೇಶಗಳಿಂದ ದೂರವಿರಲು ಭಾರತ ಮತ್ತು ಚೀನಾ ಒಪ್ಪಿಕೊಂಡ ನಂತರವೂ, ಪೀಪಲ್ಸ್ ಲಿಬರೇಶನ್ ಆರ್ಮಿ (PLA) ವಾಸ್ತವ ನಿಯಂತ್ರಣ ರೇಖೆಯಲ್ಲಿ (LAC) ಮೂಲ ಸೌಕರ್ಯಗಳನ್ನು ಹೆಚ್ಚಿಸಿಕೊಳ್ಳುತ್ತಲೇ ಬರುತ್ತಿದೆ.
ಕಳೆದ ವರ್ಷ ಪೂರ್ವ ಲಡಾಖ್‌ನಲ್ಲಿ ಉಂಟಾದ ಉದ್ವಿಗ್ನತೆ ಬಿಕ್ಕಟ್ಟಿನಿಂದ ದೂರ ಇರುವುದರ ಕುರಿತು ಹಲವಾರು ಸುತ್ತಿನ ಮಿಲಿಟರಿ ಮಟ್ಟದ ಚರ್ಚೆಗಳಲ್ಲಿ ತೊಡಗಿದ್ದರೂ ಭಾರತದ ಬಗೆಗಿನ ಚೀನೀ ಉದ್ದೇಶವನ್ನು ಇದು ಎತ್ತಿ ತೋರಿಸುತ್ತದೆ
ಭಾರತದ ಅತ್ಯುನ್ನತ ವಾಯುನೆಲೆಯಾದ ದೌಲತ್ ಬೇಗ್ ಓಲ್ಡಿ (ಡಿಬಿಒ) ಯಿಂದ ಕೇವಲ 24 ಕಿಮೀ ದೂರದಲ್ಲಿರುವ ಡೆಪ್‌ಸಾಂಗ್ ಬಯಲು ಪ್ರದೇಶಕ್ಕೆ ಹೋಗುವ ತೈನ್‌ವೆಂಡಿಯನ್ ಹೆದ್ದಾರಿಯ ವಿಸ್ತರಣೆಯೊಂದಿಗೆ ಉದ್ವಿಗ್ನತೆ ಮತ್ತೆ ಭುಗಿಲೇಳುತ್ತಿದೆ ಎಂದು ದಿ ಎಚ್‌ಕೆ ಪೋಸ್ಟ್ ವರದಿ ಮಾಡಿದೆ.
ಆಗಸ್ಟ್ 17, 2021 ರ ಉಪಗ್ರಹ ಚಿತ್ರಗಳು ಡೆಪ್ಸಾಂಗ್ ಬಯಲು ಪ್ರದೇಶಗಳ ಬಳಿ ನವೀಕರಿಸಿದ ಮೂಲಸೌಕರ್ಯವನ್ನು ಸೆರೆಹಿಡಿದು ತೋರಿಸಿದೆ. ಮೂಲಸೌಕರ್ಯ ನಿರ್ಮಾಣ ಮಾಡುತ್ತಿರುವ ಸ್ಥಳವಾದ ಈ ಹೆದ್ದಾರಿಯು ಅಕ್ಸೈ ಚೀನಾದ ಟಿಯಾನ್ ವೆಂಡಿಯನ್ ನಲ್ಲಿರುವ PLA ನ ಪೋಸ್ಟ್ ಅನ್ನು ಡೆಪ್ಸಾಂಗ್ ಬಯಲಿಗೆ ಸಂಪರ್ಕಿಸುತ್ತದೆ.
ಪ್ರಸ್ತುತ ಬಿಕ್ಕಟ್ಟಿನ ನಡುವೆಯೂ ಈಗ ಚೀನಾದ ಪಡೆಗಳು ತಮ್ಮ ಟ್ಯಾಂಕ್‌ಗಳನ್ನು ಮತ್ತು ಸೈನ್ಯವನ್ನು ಭಾರತೀಯ ಪ್ರದೇಶದ ಹತ್ತಿರಕ್ಕೆ ತಂದಿವೆ. ಬಿಕ್ಕಟ್ಟಿನ ನಂತರ ಎಲ್ಲವನ್ನೂ ನಿಲ್ಲಿಸಬೇಕು ಎಂಬ ಮಾತಿನ ಹೊರತಾಗಿಯೂ, ಚೀನಿಯರು ಅಕ್ಸೈ ಚಿನ್ ಮೇಲೆ ತಮ್ಮ ಮಿಲಿಟರಿ ನಿಯಂತ್ರಣವನ್ನು ಸ್ಪಷ್ಟವಾಗಿ ಪ್ರತಿಪಾದಿಸುತ್ತಿದೆ.