ಬೀಜಿಂಗ್: ಬಾಹ್ಯಾಕಾಶ ಕ್ಷೇತ್ರದಲ್ಲಿನ ಭಾರತದ ಸಾಧನೆ ಬಗ್ಗೆ ನೆರೆಯ ರಾಷ್ಟ್ರ ಚೀನಾ ತನ್ನ ಮೊದಲ ಪ್ರತಿಕ್ರಿಯೆ ನೀಡಿದೆ.
ಆ್ಯಂಟಿ ಸ್ಯಾಟಲೈಟ್ ಮಿಸೈಲ್ ಪರೀಕ್ಷೆ ಬಗ್ಗೆ ಚೀನಾ ಹೇಳಿಕೆ ನೀಡಿದ್ದು, ಬಾಹ್ಯಾಕಾಶ ಕ್ಷೇತ್ರದಲ್ಲಿ ನಾಲ್ಕೂ ರಾಷ್ಟ್ರಗಳು ಶಾಂತಿ ಹಾಗೂ ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿವೆ ಎಂದಿದೆ.
ಹೆಚ್ಚಿನ ಓದಿಗಾಗಿ:
ಎರಡು ಸರ್ಕಾರದ ನಡುವೆ ಸಾಗಿ ಬಂದ ಮಿಷನ್ ಶಕ್ತಿ ಏನು..? ಮೋದಿ ಭಾಷಣದ ಉದ್ದೇಶದ ಹಿಂದಿದೆ ಈ ಗುರಿ..!
ಪ್ರಧಾನಿ ಮೋದಿ ಭಾಷಣದ ಬಳಿಕ ಚೀನಾ ವಿದೇಶಾಂಗ ಸಚಿವರು ಲಿಖಿತ ಹೇಳಿಕೆ ನೀಡಿದ್ದು,ಚೀನಾ, ಅಮೆರಿಕ, ಭಾರತ ಹಾಗೂ ರಷ್ಯಾ ದೇಶಗಳು ಬಾಹ್ಯಾಕಾಶದಲ್ಲಿ ಶಾಂತಿ ಕಾಪಾಡುವ ವಿಶ್ವಾಸ ವ್ಯಕ್ತಪಡಿಸಿದೆ.
ಹೆಚ್ಚಿನ ಓದಿಗಾಗಿ:
ಮಿಷನ್ ಶಕ್ತಿಯಿಂದ ಭಾರತದ ಸಾಮರ್ಥ್ಯ ವಿಶ್ವಕ್ಕೇ ತಿಳಿಯಿತು: ವಿಜ್ಞಾನಿಗಳ ತಂಡಕ್ಕೆ ಮೋದಿ ಶುಭಾಶಯ
ಆ್ಯಂಟಿ ಸ್ಯಾಟಲೈಟ್ ಮಿಸೈಲ್ ಅನ್ನು ಯಶಸ್ವಿ ಪರೀಕ್ಷೆ ನಡೆಸುವ ಮೂಲಕ ಭಾರತ ಈ ಸಾಧನೆ ಮಾಡಿದ ನಾಲ್ಕನೇ ರಾಷ್ಟ್ರವಾಗಿ ಹೊರಹೊಮ್ಮಿದ್ದು ಈ ವಿಚಾರವನ್ನು ಸ್ವತಃ ಪ್ರಧಾನಿ ದೇಶದವನ್ನುದ್ದೇಶಿಸಿ ಭಾಷಣದಲ್ಲಿ ಹೇಳಿದ್ದರು. ಡಿಆರ್ಡಿಒ ವಿಜ್ಞಾನಿಗಳ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದರು.