ಬೀಜಿಂಗ್:ಕೋವಿಡ್ ಅಬ್ಬರಕ್ಕೆ ಇಡೀ ಜಗತ್ತಿನ ಆರ್ಥಿಕತೆ ತತ್ತರಿಸಿ ಹೋಗಿದೆ. ಅದರಲ್ಲೂ ಆರ್ಥಿಕತೆಯಲ್ಲಿ ಅತಿ ವೇಗವಾಗಿ ಮುನ್ನುಗ್ಗುತ್ತಿದ್ದ ಚೀನಾಗೆ ಕೋವಿಡ್ ಬ್ರೇಕ್ ಹಾಕಿತ್ತು. ಆದರೆ, ಕಳೆದ ಮೂರು ತಿಂಗಳಲ್ಲಿ ದೇಶದ ಆರ್ಥಿಕತೆ ಶೇಕಡಾ 7.9 ರಷ್ಟು ಚೇತರಿಕೆ ಕಂಡಿದೆ. ಆದರೆ ವೇಗ ಕೊಂಚ ತಗ್ಗಿದೆ.
ಕೋವಿಡ್ ಮೊದಲನೆ ಅಲೆಯಲ್ಲಿ ಆರ್ಥಿಕತೆ ಶೇಕಡಾ 18.3 ರಷ್ಟು ಕುಸಿತ ಕಂಡಿದ್ದು, ನಂತರ ಚೇತರಿಕೆ ಕಂಡಿತ್ತು. ಎರಡನೇ ಅಲೆ ಕಾಣಿಸಿಕೊಂಡ ಬಳಿಕ ಮತ್ತೆ ಆರ್ಥಿಕತೆ ನೆಲ ಕಚ್ಚಿತ್ತು. ಇದೀಗ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಆರ್ಥಿಕತೆ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ.
ಉತ್ಪಾದನೆ ಮತ್ತು ಬೇಡಿಕೆಯನ್ನು ಹೆಚ್ಚಿಸುವುದರೊಂದಿಗೆ ಚೀನಾದ ಆರ್ಥೀಕತೆಯು ಸ್ಥಿರವಾದ ಚೇತರಿಕೆ ಕಾಣುತ್ತಿದೆ ಎಂದು ನ್ಯಾಷನಲ್ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.