ಬೀಜಿಂಗ್ (ಚೀನಾ):ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷವು ಮುಂದಿನ ವರ್ಷದ ನವೆಂಬರ್ನಲ್ಲಿ ತನ್ನ ಪ್ರಮುಖ ಸಮಾವೇಶವನ್ನು ನಡೆಸಲಿದ್ದು, ಇದು ಪ್ರಮುಖ ನಾಯಕತ್ವ ಬದಲಾವಣೆಗಳಿಗೆ ಮತ್ತು ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವಧಿ 2022ಕ್ಕೆ ಅವರ ಅವಧಿ ಮುಗಿಯಲಿದೆ. ಆದರೆ ಅವರಿಗಾಗಲೇ 3ನೇ ಅವಧಿಗೆ ಮುಂದುವರೆಯಲು ಒಪ್ಪಿಗೆ ಪಡೆದುಕೊಂಡಾಗಿದೆ. ಆದರೂ ಎಲ್ಲ ಪ್ರಮುಖರು ಸಭೆಯಲ್ಲಿ ಅನಿರೀಕ್ಷಿತ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳೇ ಹೆಚ್ಚಾಗಿವೆ.
19 ನೇ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ (ಸಿಪಿಸಿ) ಕೇಂದ್ರ ಸಮಿತಿಯು ತನ್ನ ಆರನೇ ಪೂರ್ಣ ಅಧಿವೇಶನವನ್ನು ಬೀಜಿಂಗ್ನಲ್ಲಿ ನವೆಂಬರ್ 8 ರಿಂದ 11 ರವರೆಗೆ ನಡೆಸಲಿದೆ. ಈ ಸಮಯದಲ್ಲಿ ಪಕ್ಷದ 100 ವರ್ಷಗಳ ಪ್ರಯತ್ನಗಳ ಪ್ರಮುಖ ಸಾಧನೆಗಳು ಮತ್ತು ಐತಿಹಾಸಿಕ ಅನುಭವದ ಕುರಿತು ಒಂದು ಪ್ರಮುಖ ನಿರ್ಣಯವನ್ನು ಪರಿಶೀಲಿಸಲಾಗುವುದು ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ಕ್ಸಿ ಅಧ್ಯಕ್ಷತೆಯಲ್ಲಿ ಸಿಪಿಸಿ ಸೆಂಟ್ರಲ್ ಕಮಿಟಿ ಪೊಲಿಟಿಕಲ್ ಬ್ಯೂರೋ ಸಭೆಯಲ್ಲಿ ಇದನ್ನು ತೀರ್ಮಾನಿಸಲು ನಿರ್ಧರಿಸಲಾಗಿದೆ. ಮುಂದಿನ ವರ್ಷದ ನಾಯಕತ್ವ ಬದಲಾವಣೆಗೆ ಮುಂಚಿತವಾಗಿ ಇದು ಅತಿದೊಡ್ಡ ಪಕ್ಷದ ಸಭೆಯಾಗಿರುವುದರಿಂದ ಆರನೇ ಪೂರ್ಣ ಅಧಿವೇಶನವನ್ನು ಮಹತ್ವದ್ದೆಂದೇ ಪರಿಗಣಿಸಲಾಗಿದೆ.