ಬೀಜಿಂಗ್(ಚೀನಾ):ಹಾಂಗ್ ಕಾಂಗ್ ವಿರುದ್ಧದ ಅನ್ಯಾಯದ ಕ್ರಮಗಳಿಗೆ ಚೀನಾವನ್ನು ಹೊಣೆಗಾರರನ್ನಾಗಿ ಮಾಡುವ ಹಾಂಗ್ ಕಾಂಗ್ ಸ್ವಾಯತ್ತತೆ ಕಾಯ್ದೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದು, ಇದಕ್ಕೆ ಪ್ರತಿಯಾಗಿ ಚೀನಾ ದೇಶವು ಅಮೆರಿಕದ ಸಿಬ್ಬಂದಿ ಮತ್ತು ಘಟಕಗಳ ವಿರುದ್ಧ ನಿರ್ಬಂಧಗಳನ್ನು ವಿಧಿಸುವುದಾಗಿ ಪ್ರತಿಜ್ಞೆ ಮಾಡಿದೆ.
ಹೆಚ್‌ಕೆ ಕಾಯ್ದೆಗೆ ಟ್ರಂಪ್ ಸಹಿ.. ಅಮೆರಿಕದ ಸಿಬ್ಬಂದಿ ಮೇಲೆ ನಿರ್ಬಂಧ ಹೇರುವ ಪ್ರತಿಜ್ಞೆ ಮಾಡಿದ ಚೀನಾ - ಹಾಂಗ್ ಕಾಂಗ್ ಸ್ವಾಯತ್ತತೆ ಕಾಯ್ದೆ
ಹಾಂಗ್‌ಕಾಂಗ್ ಸ್ವಾಯತ್ತತೆ ಕಾಯ್ದೆಗೆ ಅಮೆರಿಕ ಅಧ್ಯಕ್ಷ ಟ್ರಂಪ್ ಮಂಗಳವಾರ ಸಹಿ ಮಾಡಿದ್ದು, ಈ ಹಿನ್ನೆಲೆ ನಮ್ಮ ಆಂತರಿಕ ವಿಷಯಗಳಿಗೆ ಅಮೆರಿಕ ತಲೆ ಹಾಕುವುದು ಬೇಡ ಎಂದು ಎಚ್ಚರಿಕೆ ನೀಡಿದೆ.
Trump
ಮಾರಣಾಂತಿಕ ಕೊರನಾ ವೈರಸ್ ಈ ಪರಿಯಾಗಿ ಹಬ್ಬಲು ಚೀನಾ ಮರೆಮಾಚಿದ ವಿಷಯಗಳು ಕಾರಣ ಎಂದು ಟ್ರಂಪ್ ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಚೀನಾ ತೀವ್ರವಾಗಿ ಖಂಡಿಸಿದ್ದು, ಅಮೆರಿಕ ತನ್ನ ದೇಶದ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವುದು ಸಮಂಜಸ ಅಲ್ಲ ಎಂಬ ಎಚ್ಚರಿಕೆ ನೀಡಿದೆ.
ಗ್ಲೋಬಲ್ ಟೈಮ್ಸ್ ಪ್ರಕಾರ, ಚೀನಾ ಸರ್ಕಾರವು ಅಮೆರಿಕ ಸರ್ಕಾರಕ್ಕೆ ನಮ್ಮ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದನ್ನು ನಿಲ್ಲಿಸುವಂತೆ ಹೇಳಿದೆ ಎಂದು ವರದಿಯಾಗಿದೆ.
Last Updated : Jul 15, 2020, 9:48 PM IST