ಕರ್ನಾಟಕ

karnataka

ETV Bharat / international

ತೈವಾನ್ ಸಮಸ್ಯೆ ಚೀನಾದ ಆಂತರಿಕ ವ್ಯವಹಾರ: ಅಮೆರಿಕಕ್ಕೆ ಡ್ರ್ಯಾಗನ್ ರಾಷ್ಟ್ರದ ತಿರುಗೇಟು - ತೈವಾನ್ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲ್ಲ

ತೈವಾನ್ ಸಮಸ್ಯೆ ಚೀನಾದ ಆಂತರಿಕ ವ್ಯವಹಾರವಾಗಿದ್ದು, ಅದು ಯಾವುದೇ ವಿದೇಶಿ ಹಸ್ತಕ್ಷೇಪ ಅನುಮತಿಸುವುದಿಲ್ಲ ಎಂದು ವಾಂಗ್ ಪರೋಕ್ಷವಾಗಿ ಅಮೆರಿಕಕ್ಕೆ ತಿರುಗೇಟು ನೀಡಿದ್ರು.

ತೈವಾನ್
ತೈವಾನ್

By

Published : Oct 22, 2021, 8:18 PM IST

ಬೀಜಿಂಗ್(ಚೀನಾ): ತೈವಾನ್ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳಲ್ಲ ಎಂದು ಚೀನಾ ಮತ್ತೊಮ್ಮೆ ಪುನರುಚ್ಛರಿಸಿದೆ. ದ್ವೀಪದ ಬಳಿ ಯುದ್ಧ ವಿಮಾನಗಳನ್ನು ಹಾರಿಸುವ ಮೂಲಕ ಮತ್ತು ಕಡಲತೀರದಲ್ಲಿ ವಿಮಾನಗಳನ್ನು ಇಳಿಸುವಿಕೆ ಅಭ್ಯಾಸ ಮಾಡುವ ಮೂಲಕ ತೈವಾನ್ ಅನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಚೀನಾ ಹೆಚ್ಚಿಸಿದೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್​​ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್​ ವೆನ್​ಬಿನ್​, ದ್ವೀಪವು ನಮ್ಮ ಪ್ರದೇಶವಾಗಿದೆ ಎಂದು ಮತ್ತೊಮ್ಮೆ ಪ್ರತಿಪಾದಿಸಿದ್ದಾರೆ.

ತೈವಾನ್, ಚೀನಾ ಭೂ ಪ್ರದೇಶದ ಬೇರ್ಪಡಿಸಲಾಗದ ಭಾಗವಾಗಿದೆ. ತೈವಾನ್ ಸಮಸ್ಯೆಯು ಚೀನಾದ ಆಂತರಿಕ ವ್ಯವಹಾರವಾಗಿದ್ದು, ಅದು ಯಾವುದೇ ವಿದೇಶಿ ಹಸ್ತಕ್ಷೇಪವನ್ನು ಅನುಮತಿಸುವುದಿಲ್ಲ ಎಂದು ವಾಂಗ್ ಪರೋಕ್ಷವಾಗಿ ಅಮೆರಿಕಕ್ಕೆ ತಿರುಗೇಟು ನೀಡಿದ್ರು.

ಅಮೆರಿಕವು, ತೈವಾನ್ ವಿಚಾರದಲ್ಲಿ ತನ್ನ ಮಾತುಗಳು ಮತ್ತು ಕಾರ್ಯಗಳ ಬಗ್ಗೆ ಜಾಗರೂಕರಾಗಿರಬೇಕು. ತೈವಾನ್ ಸ್ವಾತಂತ್ರ್ಯದ ಪ್ರತ್ಯೇಕತಾವಾದಿ ಪಡೆಗಳಿಗೆ ಯಾವುದೇ ತಪ್ಪು ಸಂದೇಶಗಳನ್ನು ಕಳುಹಿಸಬಾರದು. ತೈವಾನ್​ನಲ್ಲಿ ಗಲಭೆ ಸೃಷ್ಟಿಗೆ ಅಮೆರಿಕ ಯತ್ನಿಸಬಾರದು ಎಂದು ವಾಂಗ್ ಎಚ್ಚರಿಸಿದರು.

1949 ರ ಅಂತರ್ಯುದ್ಧದ ಸಮಯದಲ್ಲಿ ಚೀನಾ ಮತ್ತು ತೈವಾನ್ ವಿಭಜನೆಗೊಂಡವು. ಬೀಜಿಂಗ್ ಅನ್ನು ಗುರುತಿಸುವ ಸಲುವಾಗಿ ಅಮೆರಿಕ 1979 ರಲ್ಲಿ ತೈಪೆಯೊಂದಿಗಿನ ಔಪಚಾರಿಕ ರಾಜತಾಂತ್ರಿಕ ಸಂಬಂಧವನ್ನು ಕಡಿತಗೊಳಿಸಿತು.

ಕಮ್ಯೂನಿಸ್ಟ್ ಪಕ್ಷದ ನಾಯಕ ಮತ್ತು ಸಶಸ್ತ್ರ ಪಡೆಗಳ ಮುಖ್ಯಸ್ಥರೂ ಆಗಿರುವ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರ ಅಡಿ, ಚೀನಾ ತೈವಾನ್ ಮೇಲೆ ಮಿಲಿಟರಿ, ರಾಜತಾಂತ್ರಿಕ ಮತ್ತು ಆರ್ಥಿಕ ಒತ್ತಡವನ್ನು ಹೆಚ್ಚಿಸುತ್ತಿದೆ. ಸರಿಸುಮಾರು 160 ವಿಸ್ತೀರ್ಣದ ತೈವಾನ್ ಜಲಸಂಧಿಯ ಬದಿಯಲ್ಲಿ ಚೀನಾ ಇತ್ತೀಚೆಗೆ ಬೀಚ್ ಲ್ಯಾಂಡಿಂಗ್ ವ್ಯಾಯಾಮ ನಡೆಸಿದೆ.

ಮಿಲಿಟರಿ ಮಾರಾಟದೊಂದಿಗೆ ಅಮೆರಿಕ ತೈವಾನ್‌ಗೆ ತನ್ನ ಬೆಂಬಲವನ್ನು ಬಲಪಡಿಸಿದೆ. ವಿದೇಶಾಂಗ ಇಲಾಖೆಯ ವಕ್ತಾರ ನೆಡ್ ಪ್ರೈಸ್ ಈ ತಿಂಗಳು ತೈವಾನ್‌ಗೆ ಅಮೆರಿಕದ ಬೆಂಬಲವು "ಗಟ್ಟಿಯಾಗಿರುತ್ತದೆ" ಎಂದು ಹೇಳಿದರು. "ತೈವಾನ್‌ನೊಂದಿಗಿನ ನಮ್ಮ ಸಂಬಂಧವನ್ನು ಗಾಢವಾಗಿಸಲು ನಾವು ಬದ್ಧರಾಗಿದ್ದೇವೆ ಎಂದು ಅಮೆರಿಕ ಸ್ಪಷ್ಟ ಪಡಿಸಿದೆ.

ABOUT THE AUTHOR

...view details