ಕರ್ನಾಟಕ

karnataka

ETV Bharat / international

ಚೀನಾದ ಅಭಿವೃದ್ಧಿ ತಡೆಯೋಕೆ ಯಾರಿಂದಲೂ ಸಾಧ್ಯವಿಲ್ಲ: ಅಮೆರಿಕಕ್ಕೆ ಟಾಂಗ್​​​

ಚೀನಾದ ಆಂತರಿಕ ವ್ಯವಹಾರದ ಅಪಹಾಸ್ಯ ಮಾಡುವುದನ್ನ ಅಮೆರಿಕ ಕೂಡಲೇ ನಿಲ್ಲಿಸಬೇಕು. ತನ್ನ ಅವಶ್ಯಕತೆಗಾಗಿ ನಮ್ಮನ್ನು ನಿಗ್ರಹಿಸುವ ಪ್ರಯತ್ನ ಸೂಕ್ತವಲ್ಲ ಎಂದು ಚೀನಾದ ವಿದೇಶಾಂಗ ಸಚಿವಾಲಯದ ಪ್ರತಿನಿಧಿ ಜಾವೊ ಲಿಜಿಯನ್‌ ತಿಳಿಸಿದ್ದಾರೆ. ತಾವು ಅಮೆರಿಕದೊಂದಿಗೆ ಸಂಬಂಧಗಳನ್ನು ಮುಂದುವರೆಸಲು ಕಟಿಬದ್ಧರಾಗಿದ್ದೇವೆ ಎಂದೂ ಲಿಜಿಯನ್‌ ಹೇಳಿದ್ದಾರೆ.

china urges us to abandon cold war mentality
ಚೀನಾದ ಅಭಿವೃದ್ಧಿ ತಡೆಯೋಕೆ ಯಾರಿಂದಲೂ ಸಾಧ್ಯವಿಲ್ಲ; ಶೀತಲ ಸಮರದ ಮನಸ್ಥಿತಿಯಿಂದ ಯುಎಸ್ ಹೊರಬರಬೇಕು

By

Published : May 23, 2020, 10:43 PM IST

Updated : May 23, 2020, 11:06 PM IST

ಬೀಜಿಂಗ್: ಅಮೆರಿಕ ತನ್ನ ಪ್ರಚಂಡ ಶೀತಲ ಸಮರದ ಮನಸ್ಥಿತಿಯಿಂದ ಹೊರ ಬರಬೇಕು. ಉಭಯ ದೇಶಗಳ ನಡುವಿನ ಸಂಬಂಧಗಳು ಮುಂದುವರೆಯುವ ಅವಶ್ಯಕತೆ ಇದೆ ಎಂದು ಚೀನಾ ವಿದೇಶಾಂಗ ಸಚಿವಾಲಯದ ಪ್ರತಿನಿಧಿ ಜಾವೊ ಲಿಜಿಯನ್‌ ಹೇಳಿದ್ದಾರೆ.

ಕಳೆದ ಎರಡು ವರ್ಷಗಳಿಂದ ಚೀನಾದ ಆಂತರಿಕ ವಿಚಾರದಲ್ಲಿ ಅಮೆರಿಕ ಅಪಹಾಸ್ಯ ಮಾಡುವ ಮೂಲಕ ಮೂಗು ತೂರಿಸುತ್ತಿದೆ. ಚೀನಾ ಯೋಜನೆಗಳನ್ನು ತುಳಿಯಲು ತೀವ್ರ ಪ್ರಯತ್ನ, ಅಪಪ್ರಚಾರಗಳನ್ನು ಮಾಡ್ತಿದೆ. ಇದೆಲ್ಲವನ್ನ ಚೀನಾ ದಿಟ್ಟಾಗಿ ಎದುರಿಸುತ್ತದೆ ಎಂದು ಲಿಜಯನ್‌ ವಿಶ್ವದ ದೊಡ್ಡಣ್ಣ ಅಮೆರಿಕಗೆ ತಿರುಗೇಟು ನೀಡಿದ್ದಾರೆ.

ಕಮ್ಯೂನಿಸ್ಟ್‌ ಪಾರ್ಟಿ ಆಫ್‌ ಚೈನಾ (ಸಿಪಿಸಿ) ಬಲವಾದ ನಾಯಕತ್ವದಲ್ಲಿ ನಡೆಯುತ್ತಿದೆ. ಸಾಮಾಜಿಕ ಮಾರ್ಗ, ಅಭಿವೃದ್ಧಿಯ ಪಥದತ್ತ ಚೀನಾವನ್ನು ಪ್ರಜೆಗಳು ಕರೆೆದೊಯ್ಯುತ್ತಿದ್ದಾರೆ ಹಾಗೂ ದೊಡ್ಡ ಸಾಧನೆಗಳನ್ನು ಮಾಡ್ತಿದ್ದಾರೆ ಎಂದು ಲಿಜಿಯನ್‌ ತಿಳಿಸಿದ್ದಾರೆ. ಅದೇ ರೀತಿ ವಿಶ್ವದ ಶಾಂತಿ, ಸ್ಥಿರತೆ, ಅಭಿವೃದ್ಧಿಗೆ ಕಮ್ಯೂನಿಸ್ಟರ್‌ ರಾಷ್ಟ್ರ ಸಹಕರಿಸುತ್ತಿದೆ. ಚೀನಾ ಅಭಿವೃದ್ಧಿಯನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದಾರೆ.

Last Updated : May 23, 2020, 11:06 PM IST

ABOUT THE AUTHOR

...view details