ಬೀಜಿಂಗ್: ಚೀನಾ ತನ್ನ ಶೀತಲ ಸಮರದ ಮನಸ್ಥಿತಿ ಮತ್ತು ಸೈದ್ಧಾಂತಿಕ ಪಕ್ಷಪಾತವನ್ನು ನಿಲ್ಲಿಸಬೇಕು. ಚೀನಾ ಮತ್ತು ಅಮೆರಿಕಾದ ಸಂಬಂಧಗಳನ್ನು ವಸ್ತುನಿಷ್ಠ ಮತ್ತು ತರ್ಕಬದ್ಧ ರೀತಿಯಲ್ಲಿ ನೋಡಬೇಕೆಂದು ಚೀನಾ ಒತ್ತಾಯಿಸಿದೆ.
ಚೀನಾದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದು, ಚೀನಾದ ಹಿತಾಸಕ್ತಿಗಳಿಗೆ ಹಾನಿ ಮಾಡುವುದು ಅಥವಾ ಚೀನಾ-ಅಮೆರಿಕಾ ಸಂಬಂಧಗಳನ್ನು ಹಾಳು ಮಾಡುವುದನ್ನು ಅಮೆರಿಕವು ತಕ್ಷಣವೇ ನಿಲ್ಲಿಸಬೇಕು ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್ ಹೇಳಿದ್ದಾರೆ.
'ಹೊಸ ಕಾರ್ಯತಂತ್ರದ ವರದಿಯು 2017 ರಲ್ಲಿ ಬಿಡುಗಡೆಯಾದ ಅಮೆರಿಕಾ ರಾಷ್ಟ್ರೀಯ ಭದ್ರತಾ ಕಾರ್ಯತಂತ್ರ ವರದಿಯಂತೆಯೇ ಇದೆ' ಎಂದು ಝಾವೋ ಹೇಳಿದ್ದಾರೆ. ಇದು ಉದ್ದೇಶಪೂರ್ವಕವಾಗಿ ಚೀನಾದ ರಾಜಕೀಯ ವ್ಯವಸ್ಥೆ ಮತ್ತು ಕಾರ್ಯತಂತ್ರದ ಉದ್ದೇಶವನ್ನು ಹಾಳು ಮಾಡುತ್ತದೆ ಮತ್ತು ಚೀನಾಕ್ಕೆ ಇದು ಬೆದರಿಕೆಯಾಗಿದೆ ಎಂದು ಆರೋಪಿಸಿದ್ದಾರೆ.
'ಅಮೆರಿಕಾ ಬಗ್ಗೆ ಚೀನಾದ ನೀತಿ ಸ್ಥಿರ ಮತ್ತು ಸ್ಪಷ್ಟವಾಗಿದೆ. ಸಂಘರ್ಷರಹಿತ, ಮುಖಾಮುಖಿಯಾಗದ, ಪರಸ್ಪರ ಗೌರವ ಮತ್ತು ಗೆಲುವಿನ ಸಹಕಾರವನ್ನು ಒಳಗೊಂಡ ಚೀನಾ-ಅಮೆರಿಕಾ ಸಂಬಂಧವನ್ನು ಅಭಿವೃದ್ಧಿಪಡಿಸಲು ನಾವು ಬದ್ಧರಾಗಿದ್ದೇವೆ'. ಅಲ್ಲದೆ ನಾವು ಚೀನಾದ ಸಾರ್ವಭೌಮತ್ವ, ಭದ್ರತೆ ಮತ್ತು ಅಭಿವೃದ್ಧಿ ಹಿತಾಸಕ್ತಿಗಳನ್ನು ದೃಢವಾಗಿ ರಕ್ಷಿಸುತ್ತೇವೆ ಎಂದು ಝಾವೋ ಸ್ಪಷ್ಟಪಡಿಸಿದ್ದಾರೆ.