ಕರ್ನಾಟಕ

karnataka

ETV Bharat / international

ಹಠಾತ್​​ ಬದಲಾದ ಚೀನಾ ನಡೆ... ಭಾರತ- ಪಾಕ್​ಗೆ ಮಹತ್ವದ ಸಂದೇಶ - ಆರ್ಟಿಕಲ್ 370

ಇತ್ತೀಚೆಗೆ ಇಬ್ಬರು ಪಾಕಿಸ್ತಾನಿ ಸೈನಿಕರು, ಭಾರತೀಯ ಸೈನಿಕ ಮತ್ತು ನಾಗರಿಕ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಎರಡೂ ಕಡೆಯ ಅಧಿಕಾರಿಗಳು ತಿಳಿಸಿದ್ದಾರೆ.  ಭಾರತವು ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ಹಿಂತೆಗೆದುಕೊಂಡ ಬಳಿಕ ಕಣಿವೆ ರಾಜ್ಯದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಕಾಶ್ಮೀರ ವಿವಾದದ ಬಗ್ಗೆ ಉಭಯ ದೇಶಗಳು ವ್ಯಾಪಾರಿಕ ಕಿಡಿಕಾರದೇ ಸಂಯಮದಿಂದ ವರ್ತಿಸಬೇಕು ಎಂದು ನೆರೆಯ ಚೀನಾ ಸಲಹೆ ನೀಡಿದೆ.

India China
ಭಾರತ ಚೀನಾ

By

Published : Dec 27, 2019, 8:04 PM IST

ಬೀಜಿಂಗ್​: ಭಾರತ ಮತ್ತು ಪಾಕಿಸ್ತಾನ ಸಂಯಮ ವಹಿಸಿ ಮಾತುಕತೆಯ ಮೂಲಕ ತಮ್ಮ ನಡುವಿನ ಸಮಸ್ಯೆಗಳನ್ನು ಆದಷ್ಟು ಬೇಗ ಬಗೆಹರಿಸಿಕೊಳ್ಳಬೇಕು ಎಂದು ಚೀನಾ ಸಲಹೆ ನೀಡಿದೆ.

ಕಾಶ್ಮೀರ ವಿವಾದದ ಬಗ್ಗೆ ಉಭಯ ದೇಶಗಳು ವ್ಯಾಪಾರಿಕ ಕಿಡಿಕಾರದೆ ಸಂಯಮದಿಂದ ವರ್ತಿಸಬೇಕು. ಯಾವುದೇ ತಕರಾರು ಇದ್ದರೂ ಸಂವಾದದ ಮೂಲಕ ಬಗೆಹರಿಸಿಲು ಜಂಟಿಯಾಗಿ ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳಲು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಗೆಂಗ್ ಶುವಾಂಗ್ ಕರೆ ನೀಡಿದ್ದಾರೆ.

ಇತ್ತೀಚೆಗೆ ಇಬ್ಬರು ಪಾಕಿಸ್ತಾನಿ ಸೈನಿಕರು, ಒಬ್ಬ ಭಾರತೀಯ ಸೈನಿಕ ಮತ್ತು ನಾಗರಿಕ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಎರಡೂ ಕಡೆಯ ಅಧಿಕಾರಿಗಳು ತಿಳಿಸಿದ್ದಾರೆ. ಭಾರತವು ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ಹಿಂತೆಗೆದುಕೊಂಡ ಬಳಿಕ ಕಣಿವೆ ರಾಜ್ಯದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ.

ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಗೆಂಗ್ ಶುವಾಂಗ್

ಮಾಜಿ ಕ್ಸಿನ್‌ಜಿಯಾಂಗ್ ವಿಶ್ವವಿದ್ಯಾಲಯದ ಅಧ್ಯಕ್ಷ ತಾಶ್‌ಪೋಲತ್ ತಿಯಿಪ್ ಅವರನ್ನು ಬಂಧಿಸಿರುವ ಬಗ್ಗೆಯೂ ಗೆಂಗ್ ಪ್ರತಿಕ್ರಿಯಿಸಿದ್ದಾರೆ. ಅವರಿಗೆ ಮರಣದಂಡನೆ ವಿಧಿಸಲಾಗಿದೆ ಎಂದು ವರದಿಯಾಗಿದೆ.

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ತಜ್ಞರು ಮರಣದಂಡನೆ ವರದಿಯನ್ನು ಟೀಕಿಸಿದ್ದಾರೆ. ತಿಯಿಪ್​ ಅವರ ಭೇಟಿಗೆ ಕುಟುಂಬ ಸದಸ್ಯರಿಗೆ ಅವಕಾಶ ನೀಡಬೇಕು. ಭ್ರಷ್ಟಾಚಾರ ಮತ್ತು ಲಂಚದ ಆಪಾದನೆಯ ಮೇಲೆ ಅವರನ್ನು ಬಂಧಿಸಲಾಗಿದೆ. ಈ ಬಗ್ಗೆ ಇನ್ನೂ ವಿಚಾರಣೆ ನಡೆಯುತ್ತಿದೆ ಎಂದು ಗೆಂಗ್ ಹೇಳಿದ್ದಾರೆ.

ABOUT THE AUTHOR

...view details